ಸಮಗ್ರ ಸಮಾಚಾರ

ಆಸ್ಪತ್ರೆಯೊಳಗಿಂದ ರೋಗಿ ನಿಗೂಢ ನಾಪತ್ತೆ | ಪೊಲೀಸರನ್ನೆ ಬೆಚ್ಚಿ ಬೀಳಿಸಿದ ಪ್ರಕರಣ

ಚೆನ್ನೈ: ಆಸ್ಪತ್ರೆಯಿಂದ ಕಣ್ಮರೆಯಾದ ರೋಗಿಯೊಬ್ಬರ ನಾಪತ್ತೆ ಪ್ರಕರವೂ ನಿಗೂಢ ಕೊಲೆ ಪ್ರಕರಣದ ತಿರುವು ಪಡೆದುಕೊಂಡು ಮೂರನೇ ಮಹಡಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಗೆ ದಾಖಲಾಗಿ, ಕಾಣೆಯಾಗಿ ಕೊಲೆಯಾದವರನ್ನು ಸುಮಿತಾ (41) ಎಂದು ಗುರುತಿಸಲಾಗಿದೆ. ಈಕೆ ಮೇ 23ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಆಕೆಯ ಪತಿ ಮೌಲಿ ಮೇ. ೩೧ರಂದು ದೂರು ನೀಡಿರಿದ್ದರು. ತೀವ್ರ ಶೋಧದ ನಡುವೆಯೂ ಆಕೆಯ ಸುಳಿವು ಮಾತ್ರ ಪತ್ತೆಯಾಗಲೇ ಇಲ್ಲ.ಇದರ ನಡುವೆ ಜೂ.೮ರಂದು […]

ಆಸ್ಪತ್ರೆಯೊಳಗಿಂದ ರೋಗಿ ನಿಗೂಢ ನಾಪತ್ತೆ | ಪೊಲೀಸರನ್ನೆ ಬೆಚ್ಚಿ ಬೀಳಿಸಿದ ಪ್ರಕರಣ Read More »

ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ

ನವದೆಹಲಿ:‌ ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಕಡಿಮೆಯಾಗುತ್ತಿದ್ದು, ಕೆಲವು ವಿಭಾಗಗಳಲ್ಲಿ ಸುಮಾರು 20% ವರೆಗೆ ಕುಸಿಯುತ್ತಿವೆ. ಪಾಮ್ ಆಯಿಲ್ ಬೆಲೆ ಪ್ರತಿ ಕೆಜಿಗೆ 115 ರೂ.ಗೆ ಇಳಿದಿದ್ದು, ಇದು ಶೇ.19ರಷ್ಟು ಕುಸಿತವಾಗಿದೆ. ಇನ್ನು ಸೂರ್ಯಕಾಂತಿ ಎಣ್ಣೆಯ ಬೆಲೆ ಕೆ.ಜಿ. 157 ರೂ.ಗೆ ಇಳಿಕೆಯಾಗಿದ್ದು, ಶೇ.16ರಷ್ಟು ಕುಸಿತ ಕಂಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.ಅಂತರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಉತ್ಪಾದನೆಯನ್ನ ಒಳಗೊಂಡಿರುವ ಸಂಕೀರ್ಣ ಅಂಶಗಳ ಮೇಲೆ ಅವಲಂಬಿತವಾಗಿರುವ ಖಾದ್ಯ

ಹೆಣ್ಮಕ್ಳಿಗೆ ಗುಡ್ ನ್ಯೂಸ್, ಖಾದ್ಯತೈಲಗಳ ಬೆಲೆಯಲ್ಲಿ ಇಳಿಕೆ Read More »

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು

ಬಂಟ್ವಾಳ : ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಬುಧವಾರ ಮಧ್ಯಾಹ್ನ ಸುರಿದ ಭಾರಿ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿಯಲ್ಲಿ ಬೃಹತ್‌ ಗಾತ್ರದ ಗೋಳಿ ಮರವೊಂದು ಧರೆಗುರುಳಿದೆ. ಸಂಜೆ 4 ಗಂಟೆಯ ವೇಳೆಗೆ ಬೀಸಿದ ಗಾಳಿಗೆ ಬೃಹತ್‌ ಮರ ರಸ್ತೆಗೆ ಉರುಳಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಉರುಳಿ ಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ. ಇಲ್ಲಿನ ನಾಗೇಶ್‌ ಸಂಪೋಳಿ ಅವರ ಜಮೀನಿನಲ್ಲಿ ಇದ್ದ ಈ ಮರದ ಪಕ್ಕದಲ್ಲೇ

ಕಡೆಶಿವಾಲಯ: ಮಳೆಯಬ್ಬರಕ್ಕೆ ಬೃಹತ್ ಮರದ ಜೊತೆ ಧರೆಗುರುಳಿದ ವಿದ್ಯುತ್ ಕಂಬಗಳು Read More »

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

ಕಾರ್ಕಳ: ಮೀನು ಹಿಡಿಯುಲು ಹೋದ ಬಾಲಕನೊರ್ವ ಆಕಸ್ಮಿಕವಾಗಿ ಮದಗಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಅಜೆಕಾರು ಠಾಣಾ ವ್ಯಾಪ್ತಿಯ ಎಳ್ಳಾರೆ ಎಂಬಲ್ಲಿ ಸಂಭವಿಸಿದೆ. ಎಳ್ಳಾರೆಯ ಸೋಮನಾಥ ಶೇರಿಗಾರ ಎಂಬವರ ಮಗ ಆದಿತ್ಯ (14) ಮೃತಪಟ್ಟ ಬಾಲಕ. ಈತ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲೆಂದು ಮನೆಯಿಂದ ಮನೆ ಸಮೀಪದ ಮದಗಕ್ಕೆ ಹೋಗಿದ್ದ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೀನು ಹಿಡಿಯುತ್ತಿದ್ದಾಗ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ.ಘಟನೆಯ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು Read More »

ವಿಶಾಖಪಟ್ಟಣ: ಆರು ನಕ್ಸಲರ ಎನ್ಕೌಂಟರ್ | ಓರ್ವ ಪೊಲೀಸ್ ಹುತಾತ್ಮ

ವಿಶಾಖಪಟ್ಟಣ: ಜಿಲ್ಲೆಯ ಬೇಗಲಾಮೆಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಆರು ಜನ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ಈ ವೇಳೆ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. ಇಂದು ಬೆಳಿಗ್ಗೆ ಮಾಂಪಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ್ತಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯ ಆರಂಭಿಸಿತ್ತು. ಅರಣ್ಯ ಪ್ರದೇಶದಲ್ಲಿ ನಕ್ಸಲರ ಪತ್ತೆಯಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ

ವಿಶಾಖಪಟ್ಟಣ: ಆರು ನಕ್ಸಲರ ಎನ್ಕೌಂಟರ್ | ಓರ್ವ ಪೊಲೀಸ್ ಹುತಾತ್ಮ Read More »

ತಂದೆಯಾದ ಅಪ್ರಾಪ್ತ ಬಾಲಕ | ಹೆಂಡತಿಯಿಂದ ದೂರವಿರಲು ಹೇಳಿದ ಕೋರ್ಟ್ | ಇದು ನಿಂಗೆ ಬೇಕಿತ್ತ ಮಗನೇ….

ಅಲಹಾಬಾದ್: ಅಪ್ರಾಪ್ತ ಬಾಲಕನೋರ್ವ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಒಂದು ಮಗುವನ್ನು ಕೂಡ ಮಾಡಿದ್ದಾನೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇವರ ದಾಂಪತ್ಯ ಜೀವನಕ್ಕೆ ತಡೆಯಾಜ್ಞೆ ನೀಡಿದ ಘಟನೆ ಅಲಹಾಬಾದ್ ರಾಜ್ಯದಲ್ಲಿ ನಡೆದಿದೆ. ಆತ 16 ವರ್ಷದ ಬಾಲಕ ಆಕೆ ಈತನಿಗಿಂತ ಅದೆಷ್ಟೋ ದೊಡ್ಡ ಮಹಿಳೆ. ಇವರಿಬ್ಬರಿಗೆ ಹಲವು ದಿನಗಳ `ರೋಮಿಯೋ ಜೂಲಿಯೆಟ್’ನಂತಹ ಪ್ರೀತಿ. ಇವರ ಪ್ರೀತಿಗೆ ಬಾಲಕನ ಪೋಷಕರು ವಿರೋಧಿಗಳು. ಈ ವಿರೋಧದ ನಡುವೆ ಇವರಿಬ್ಬರು ಮದುವೆ ಆಗಿದ್ದಲ್ಲದೆ ಬಾಲಕ ತನ್ನ ಪ್ರಯತ್ನದಿಂದ ಒಂದು ಮಗು ಕೂಡ

ತಂದೆಯಾದ ಅಪ್ರಾಪ್ತ ಬಾಲಕ | ಹೆಂಡತಿಯಿಂದ ದೂರವಿರಲು ಹೇಳಿದ ಕೋರ್ಟ್ | ಇದು ನಿಂಗೆ ಬೇಕಿತ್ತ ಮಗನೇ…. Read More »

ಕೋವಿಡ್ ಗುಣಮುಖವಾದ ವ್ಯಕ್ತಿಯಲ್ಲಿ ಚಿಗುರೊಡೆದ “ಗ್ರೀನ್ ಫಂಗಸ್”

ಇಂದೋರ್: ಕೊರೋನಾ ಎರಡನೇ ಅಲೆಯ ನಡುವೆ ವ್ಯಾಪಾಕವಾಗಿರುವ ಬ್ಲಾಕ್ ಫoಗಸ್, ವೈಟ್ ಫoಗಸ್ ಆಕ್ರಮಣ ಬೆನ್ನಲ್ಲೇ ವ್ಯಕ್ತಿಯೊಬ್ಬರಲ್ಲಿ ‘ಹಸಿರು ಶಿಲೀಂಧ್ರ’ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಭಯಬೀತರನ್ನಾಗಿಸಿದೆ. ಕೊರೋನ ಸೊಂಕಿಗೊಳಗಾಗಿದ್ದ 34 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಯಾದ ಬಳಿಕ ಆ ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಪುನಃ ರೋಗಿಯನ್ನು ವೈದ್ಯರು ಪರಿಶೀಲಿಸಿದ್ದಾರೆ. ಆಗ ಆ ವ್ಯಕ್ತಿಗೆ ಹಳದಿ ಶಿಲೀಂದ್ರ ಸೋಂಕು ದೃಡಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪು

ಕೋವಿಡ್ ಗುಣಮುಖವಾದ ವ್ಯಕ್ತಿಯಲ್ಲಿ ಚಿಗುರೊಡೆದ “ಗ್ರೀನ್ ಫಂಗಸ್” Read More »

ಟ್ರ್ಯಾಕ್ಟರ್-ಕಾರು ಭೀಕರ ಅಪಘಾತ: ಒಂದೇ ಕುಟುಂಬದ 10 ಜನ ಸಾವು

ಅಹ್ಮದಾಬಾದ್: ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಎಲ್ಲಾ 10 ಮಂದಿ ದುರ್ಮರಣಕ್ಕಿಡಾದ ಘಟನೆ ಜಿಲ್ಲೆಯ ತಾರಪುರ ಎಂಬಲ್ಲಿ ನಡೆದಿದೆ. ತಾರಾಪುರ-ವಾಟಾಮನ್​ ರಾಜ್ಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 10 ಮಂದಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಮಕ್ಕಳೂ ಇದ್ದರು. ವೇಗವಾಗಿ ಬಂದ ಟ್ರಾಕ್ಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.ಅಪಘಾತ ದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದರಿಂದ

ಟ್ರ್ಯಾಕ್ಟರ್-ಕಾರು ಭೀಕರ ಅಪಘಾತ: ಒಂದೇ ಕುಟುಂಬದ 10 ಜನ ಸಾವು Read More »

ಪಿಯುಸಿ ಪರೀಕ್ಷೆ ರದ್ದು: ಬೂದುಗುಂಬಳ ಒಡೆದು, ನೃತ್ಯ ಮಾಡಿ ವಿದ್ಯಾರ್ಥಿಗಳ ಸಂಭ್ರಮ

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಈ ನಿರ್ಧಾರದಿಂದ ಸಂತೋಷಗೊಂಡಿರುವ ವಿದ್ಯಾರ್ಥಿಗಳ ತಂಡವೊಂದು ಕಾಲೇಜಿನ ಬಳಿ ತೆರಳಿ ಬೂದುಗುಂಬಳ ಕಾಯಿ ಒಡೆದು ಸಂಭ್ರಮಾಚರಣೆ ನಡೆಸಿದ ಘಟನೆ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 10ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ದ್ವಿತೀಯ ಪಿಯುಸಿಯ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಸರ್ಕಾರದ ನಿರ್ಧಾರ ಪ್ರಕಟವಾದಂದು ಲಾಕ್‌ಡೌನ್ ಇದ್ದ ಕಾರಣ ಯಾರೂ ಹೊರಗೆ

ಪಿಯುಸಿ ಪರೀಕ್ಷೆ ರದ್ದು: ಬೂದುಗುಂಬಳ ಒಡೆದು, ನೃತ್ಯ ಮಾಡಿ ವಿದ್ಯಾರ್ಥಿಗಳ ಸಂಭ್ರಮ Read More »

ಐದು ದಿನದ‌ ಬಾಣಂತಿಯ ಬಲಿಪಡೆದ ಕೊರೊನಾ: ಅನಾಥವಾದ ಕಂದಮ್ಮಗಳು

ಮಂಡ್ಯ : ಕೊರೊನಾ ಸಿಕ್ಕಸಿಕ್ಕವರನ್ನೆಲ್ಲಾ ಬಲಿ ಪಡೆಯುತ್ತಲೇ ಇದೆ. ಅದರ‌ ಕಬಂಧಬಾಹುಗಳಿಗೆ‌ ಹಲವರು ಬಲಿಯಾಗುತ್ತಿದ್ದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹದ್ದೇ ಮತ್ತೊಂದು ದುರಂತ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಅವರಿಗೆ ಹೆರಿಗೆ ಆಗಿ 4 ದಿನ ಆಗಿತ್ತಷ್ಟೆ. 5ನೇ ದಿನಕ್ಕೆ ಮಹಾಮಾರಿ ಕೊರೋನಾಗೆ ಬಾಣಂತಿ ಶಿಲ್ಪಶ್ರೀ ಬಲಿಯಾಗಿದ್ದು, ಏನೂ ಅರಿಯದ ಕಂದ ತಾಯಿ ಇಲ್ಲದೆ ತಬ್ಬಲಿಯಾಗಿದೆ. ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್​ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರಾಗಿದ್ದರು. ದಂಪತಿ ಇಬ್ಬರೂ ಬೆಂಗಳೂರಿನಲ್ಲೇ

ಐದು ದಿನದ‌ ಬಾಣಂತಿಯ ಬಲಿಪಡೆದ ಕೊರೊನಾ: ಅನಾಥವಾದ ಕಂದಮ್ಮಗಳು Read More »