ಸಮಗ್ರ ಸಮಾಚಾರ

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ […]

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ Read More »

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ

ಉಪ್ಪಿನಂಗಡಿ: ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಉಪ್ಪಿನಂಗಡಿಯ ಹಲವು ನೆರೆ ಹಾವಳಿಗೆ ಒಳಗಾಗುವ ಸಂಭವ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಉಪ್ಪಿನಂಗಡಿ ಪ್ರದೇಶವು ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಮಳೆ ಹೆಚ್ಚಾದಾಗ ನೆರೆ ಹಾವಳಿ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ ಪರಿಶೀಲನೆ ನಡೆಸಿದೆ. ಸಹಸ್ರಲಿಂಗೇಶ್ವರ ದೇವಸ್ಥಾನದ

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ Read More »

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

ಸುಳ್ಯ: ಮನೆಯ ಕೊಟ್ಟಿಗೆಯಲ್ಲಿ ಯುವಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೋಡಿಕಾನದಲ್ಲಿ ನಡೆದಿದೆ. ತೋಡಿಕಾನ ಗ್ರಾಮದ ದೇವರಗುಂಡಿ ಬಳಿಯ ನಿವಾಸಿ ಕೇಪಣ್ಣ ನಾಯ್ಕ್ ರ ಪುತ್ರ ಜಯರಾಮ ನೇಣಿಗೆ ಶರಣಾದವರು. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಕಾಂಗ್ರೆಸ್ ನ ನಾಯಕರ ನಡುವೆ ಮಾರಾಮಾರಿ ನಡೆದ ಘಟನೆ ನಿನ್ನೆ ಮದ್ಯಾಹ್ನ ನಡೆದಿದೆ. ಘಟನೆ ಬಳಿಕ ಒಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಭೆ ನಿನ್ನೆ ನಡೆದಿತ್ತು. ಸಭೆ ಮುಗಿದ ಬಳಿಕ ನಾಯಕರ ನಡುವೆಯೇ ಹೊಡೆದಾಟ ನಡೆದಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಜೊತೆ ಆಗಮಿಸಿದ್ದ ತರೀಕೆರೆ ಐಟಿಸೆಲ್ ಅಧ್ಯಕ್ಷ ದರ್ಶನ್ ಎಂಬವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಯಲ್ ಶರೀಫ್

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ Read More »

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ

ಉತ್ತರ ಪ್ರದೇಶ: ಮುಸಲ್ಮಾನ ವೃದ್ಧರೊಬ್ಬರ ಮೇಲೇ ಯುವಕರ ಗುಂಪೊoದು ಹಲ್ಲೆ ನಡೆಸಿದ ಘಟನೆ ರಾಜ್ಯದ ಗಾಝಿಯಾಬಾದ್ ನಿಂದ ವರದಿಯಾಗಿತ್ತು. ವಿಚಾರಣೆ ಬಳಿಕ ಇದು ತಾಯ್ತ ಕಟ್ಟುವ ವಿಚಾರದಲ್ಲಿ ನಡೆದ ಜಗಳ ಎಂದು ಪೊಲೀಸರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವೃದ್ಧನ ಮಗ, ನನ್ನ ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದಿದ್ದಾನೆ. ಅಬ್ದುಲ್ ಸಮದ್ ಸೈಫಿ ಎಂಬ ವೃದ್ಧನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೃದ್ಧನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಲಾಕೆಯಿಂದ ಹಲ್ಲೆ ನಡೆಸಿದ್ದರು.

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ Read More »

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ

ಸುಳ್ಯ : ನೆಟ್ವರ್ಕ್‌ ಸಮಸ್ಯೆಯಿಂದ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್‌ ಲೈನ್‌ ಕ್ಲಾಸ್‌ ಗೆ ಹಾಜರಾಗುತ್ತಿರುವುದು ಹಲವು ದಿನಗಳಿಂದ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಹಿಡಿದ ಕೈಗನ್ನಡಿ. ಎಸ್‌ ಎಸ್‌ ಎಲ್‌ ಸಿ. ವಿದ್ಯಾರ್ಥಿನಿಯಾಗಿರುವ ಈಕೆ ನೆಟ್ವರ್ಕ್‌ ಇಲ್ಲ, ಸಿಗ್ನಲ್‌ ಇಲ್ಲ ಎಂದು ಕೂತರೆ ಈಡೀ ಭವಿಷ್ಯವೇ ಹಾಳಾಗುತ್ತದೆ ಎಂದು ರಸ್ತೆ ಬದಿ ನೆಟ್ವರ್ಕ್ ಹುಡುಕಿ‌ ಆನ್ ಲೈನ್

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ Read More »

ರಾಮನ ಆದರ್ಶ ಪಾಲಕರಿಂದ ಭ್ರಷ್ಟಾಚಾರಿಗಳಿಗೆ ಸಾಥ್: ಆಪ್ ಸಂಸದ ಸಂಜಯ್ ಸಿಂಗ್ ಆರೋಪ

ಲಕ್ನೋ : ಬಿಜೆಪಿಗೆ ಆಸ್ತಿ ಡೀಲರ್‌ ಮತ್ತು ಭ್ರಷ್ಟಾಚಾರಿಗಳ ಮೇಲೆ ನಂಬಿಕೆ ಇದೆಯೆ ಹೊರತು ರಾಮನ ಮೇಲೆ ಅಲ್ಲ ಎಂದು ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ತಾನು ನ್ಯಾಯಾಲಯದ ಕದ ತಟ್ಟುತ್ತಿರುವುದಾಗಿ ಅವರು ಬುಧವಾರ ತಿಳಿಸಿದ್ದಾರೆ. ಆಮ್‍ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‍ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್‍ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ

ರಾಮನ ಆದರ್ಶ ಪಾಲಕರಿಂದ ಭ್ರಷ್ಟಾಚಾರಿಗಳಿಗೆ ಸಾಥ್: ಆಪ್ ಸಂಸದ ಸಂಜಯ್ ಸಿಂಗ್ ಆರೋಪ Read More »

ಮುಖ್ಯಮಂತ್ರಿ ಬದಲಾವಣೆ | ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ | 30 ಶಾಸಕರ ಪ್ರತ್ಯೇಕ ಭೇಟಿ | ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದೇನು…? | ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಕೋವಿಡ್ ಸಂಬಂಧ ನಾನು ಇಲ್ಲಿ ಚರ್ಚೆ ಮಾಡಲಿದ್ದೇನೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿಯ ಉಸ್ತುವಾರಿಯೂ ಆಗಿರುವ ಅರುಣ್ ಸಿಂಗ್ ಜೂನ್ 16ರಂದು ತಿಳಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಿರುವ ಉದ್ದೇಶವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ. ರಾಜ್ಯ ಸರ್ಕಾರ ಎರಡು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಆ ಮೂಲಕ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗಿದೆ. 1250 ಕೋಟಿ ರೂಪಾಯಿ

ಮುಖ್ಯಮಂತ್ರಿ ಬದಲಾವಣೆ | ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ | 30 ಶಾಸಕರ ಪ್ರತ್ಯೇಕ ಭೇಟಿ | ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದೇನು…? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಸುಳ್ಯ: ಕೋವಿಡ್ ಸೋಂಕಿತನಿಂದ ಪಿಡಿಒ ಗೆ ಜೀವ ಬೆದರಿಕೆ, ದೂರು | ಲಕ್ಷ ವ್ಯವಹಾರಕ್ಕೆ ನಷ್ಟವಾಯಿತೆಂದ ಸೋಂಕಿತ

ಸುಳ್ಯ: ಕೋವಿಡ್ ಸೋಂಕಿತನೋರ್ವ ತನ್ನನ್ನು ವಿಚಾರಿಸಲು ಬಂದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಧಮ್ಕಿ ಹಾಕಿದ್ದು, ಜೀವ ಬೆದರಿಕೆ ಒಡ್ಡಿದ ಘಟನೆ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ.ದೇವಚಳ್ಳ ಗ್ರಾ.ಪಂ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಸೊಂಕಿತರನನ್ನು ಪಂಜ ಕೋವಿಡ್ ಸೆಂಟರ್ ಗೆ ಸೇರಿಸಲಾಗಿದೆ. ಕೆಲವರನ್ನು ಹೋಂ ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಈ ಪೈಕಿ ಕಂದ್ರಪ್ಪಾಡಿಯ ಸೋಂಕಿತನೋರ್ವ ಹೋಂ ಐಸೋಲೇಶನ್ ನಿಂದ ಹೊರಗಿದ್ದು, ಊರಿಡೀ ಸುತ್ತಾಡಿಕೊಂಡಿದ್ದ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ದೂರು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ

ಸುಳ್ಯ: ಕೋವಿಡ್ ಸೋಂಕಿತನಿಂದ ಪಿಡಿಒ ಗೆ ಜೀವ ಬೆದರಿಕೆ, ದೂರು | ಲಕ್ಷ ವ್ಯವಹಾರಕ್ಕೆ ನಷ್ಟವಾಯಿತೆಂದ ಸೋಂಕಿತ Read More »

ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಸೋಂಕಿತೆ ಸಾವು

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ವಾರ ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ ಇಂದು ಸಂಜೆ ಮೃತಾಪಟ್ಟಿದ್ದಾರೆ. ಕೋವಿಡ್ ಸೋಂಕು ಉಲ್ಬಣಗೊಂಡು ತೀವ್ರ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆ ಫಲಿಸದೆ ಇಂದು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ಕೋವಿಡ್ ಸೋಂಕಿಗೆ ಒಳಗಾಗಿ ಜೂನ್ 6ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.7-8ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈಕೆ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಪ್ರಕಾರಣಕ್ಕೆ ಸಂಭಂಧಿಸಿದಂತೆ ಖಾಸಗಿ ಆಂಬ್ಯುಲೆನ್ಸ್ ಚಾಲಕ, ಪಿಂಟು ಎಂಬುವವನನ್ನು ಬಂದಿಸಲಾಗಿತ್ತು. ಅತ್ಯಾಚಾರಕ್ಕೆ

ಆಸ್ಪತ್ರೆಯಲ್ಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಸೋಂಕಿತೆ ಸಾವು Read More »