ಸಮಗ್ರ ಸಮಾಚಾರ

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ

Samagra news: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿಯಿಂದ ವರದಿಯಾಗಿದೆ. ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ದೇವಕಿಯವರ ಪುತ್ರಿ ಕೌಶಲ್ಯ ಮೃತಪಟ್ಟ ನವವಿವಾಹಿತೆ. ಇನ್ನು ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆತ್ಮ ಹತ್ಯೆಗೆ ನಿಖರ ಕಾರಣ […]

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ Read More »

‘ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಕಮಿಷನ್ ಪಡೆದಿಲ್ಲ’ | ಶೋಭಾ ಕರಂದ್ಲಾಜೆ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ‘ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್‌ ಕಮಿಷನ್‌ ಪಡೆದಿಲ್ಲ. ನಿಮ್ಮ ಕಮಿಷನ್‌ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌, ನೆಹರೂ ಓಲೇಕಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಚ್‌. ವಿಶ್ವನಾಥ್‌, ಗೂಳಿಹಟ್ಟಿ ಶೇಖರ್‌ ಅವರೇ ಸಾಕ್ಷಿ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಟಿಕೆಟ್‌ ಅರ್ಜಿ ಜತೆಗೆ ಕಾಂಗ್ರೆಸ್‌ ಪಕ್ಷ 2 ಲಕ್ಷ ರೂ ಸ್ವೀಕರಿಸಿದೆ. ಹೀಗಾಗಿ ಚುನಾವಣಾ ಆಯೋಗವು 223 ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡಬೇಕು ಎಂಬ ಕೇಂದ್ರ ಸಚಿವೆ

‘ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಕಮಿಷನ್ ಪಡೆದಿಲ್ಲ’ | ಶೋಭಾ ಕರಂದ್ಲಾಜೆ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ Read More »

ಸುಳ್ಯ: ಜ್ವರಕ್ಕೆ ಬಾಲಕಿ ಬಲಿ

ಸಮಗ್ರ ನ್ಯೂಸ್: 6ನೇ ತರಗತಿ ಬಾಲಕಿಯೋರ್ವಳು ಜ್ವರದಿಂದ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಜಯನಗರ ನಿವಾಸಿ ಸೈಯದ್ ಹಾಗೂ ಮಹಿಮುನಾ ದಂಪತಿ ಪುತ್ರಿ ಶಬ್ನಾಝ್ (12) ಮೃತ ಬಾಲಕಿ. ಸುಳ್ಯ ಸೈಂಟ್ ಬ್ರಿಜೆಡ್ಸ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಶಬ್ನಾಝ್ ಗೆ ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡು. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಶನಿವಾರ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಬಾಲಕಿಯ ಅಗಲಕೆಯಿಂದ ರಂಜಾನ್ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸ್ಮಶಾನ

ಸುಳ್ಯ: ಜ್ವರಕ್ಕೆ ಬಾಲಕಿ ಬಲಿ Read More »

ಸುಳ್ಯ: ಪತ್ರಕರ್ತ ದಿ.ರವಿರಾಜ್ ವಳಲಂಬೆ ಪುತ್ರಿಯರಿಬ್ಬರಿಗೆ ಡಿಸ್ಟಿಂಕ್ಷನ್

ಸಮಗ್ರ ನ್ಯೂಸ್: ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾಗಿ ಹೆಸರುವಾಸಿಯಾಗಿದ್ದ ಸುಳ್ಯ ತಾ. ಗುತ್ತಿಗಾರಿನ ದಿ.ರವಿರಾಜ್ ವಳಲಂಬೆಯವರ ಅವಳಿ ಹೆಣ್ಣು ಮಕ್ಕಳಿಬ್ಬರು ವಿಶೇಷ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಖ್ಯಾತ ಪತ್ರಕರ್ತ ದಿ.ರವಿರಾಜ್ ವಳಲಂಬೆ ಅವರ ಅವಳಿ ಪುತ್ರಿಯರು ಉತ್ತಮ ಅಂಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ. ಉಡುಪಿಯ ವಿದ್ಯೋದಯ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾದ ಸಂಜನಾ ಎಂ.ಆರ್. 568 ಅಂಕ ( ಶೇ.94 ) ಹಾಗೂ ಸಿಂಚನಾ ಎಂ.ಆರ್. 571 ಅಂಕ ( ಶೇ.95 ) ಗಳಿಸಿ ಡಿಸ್ಟಿಂಕ್ಷನ್ ನಲ್ಲಿ

ಸುಳ್ಯ: ಪತ್ರಕರ್ತ ದಿ.ರವಿರಾಜ್ ವಳಲಂಬೆ ಪುತ್ರಿಯರಿಬ್ಬರಿಗೆ ಡಿಸ್ಟಿಂಕ್ಷನ್ Read More »

ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಗೆಲ್ಲಿಸಿ: ದೀಪಕ್ ದೊಡ್ಡಯ್ಯ

Samagra news: ಮೂಡಿಗೆರೆ ರಾಜ್ಯದ ಅಭಿವೃದ್ಧಿ ಕೇವಲ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಮಾನ್ಯ ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪ ದೊಡ್ಡಯ್ಯ ತಿಳಿಸಿದರು. ಅವರು ಕಸಬಾ ಹೋಬಳಿ ಕಮಾಕೋನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮಹಿಳೆಯರು. ದೀನ ದಲಿತರು. ಮತ್ತು

ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಗೆಲ್ಲಿಸಿ: ದೀಪಕ್ ದೊಡ್ಡಯ್ಯ Read More »

ಕೆಲವರು ಲಂಚಕ್ಕೆ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಸಮಗ್ರ ನ್ಯೂಸ್: ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದ ಬೆನ್ನಲ್ಲೇ “ಕೆಲವರು ಲಂಚಕ್ಕೆ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ” ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯವರು ಸಂಭಾವಿತರು, ಸಚ್ಚಾರಿತ್ರ್ಯವಂತರು ಅಂತಾರೆ. ಆದರೆ ಇಲ್ಲಿನ ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ಗರ್ಭಗುಡಿಯಲ್ಲಿ ಎಂಥ ಹುಳುಕು ಇದೆಯೆಂದು ತಿಳಿಯುತ್ತಿದೆ ಎಂದು ಬಿಜೆಪಿ ಶಾಸಕರ ಕೋರ್ಟ್ ಸ್ಟೇ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ರು. ಬೆಳ್ತಂಗಡಿ ಕಾಂಗ್ರೆಸ್

ಕೆಲವರು ಲಂಚಕ್ಕೆ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ Read More »

ಪುತ್ತೂರು: ಪಿಯು ಪರೀಕ್ಷೆ ಬರೆದ ಗ್ರಾಮ ಪಂಚಾಯತ್‌ ಅಧ್ಯಕ್ಷೆ|ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ

ಸಮಗ್ರ ನ್ಯೂಸ್: ಪುತ್ತೂರು ಪಾಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗ್ರಾ. ಪಂ. ಅಧ್ಯಕ್ಷೆಯಾದ ಭಾರತಿ ಭಟ್‌ 24 ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಬರೆದಿದ್ದಾರೆ ಇನ್ನೂ ಇವರು ಕಳೆದ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ 1997-98ರಲ್ಲಿ 8ನೇ ತರಗತಿ ತೇರ್ಗಡೆ ಹೊಂದಿದ್ದು, ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಅನಂತರ ವೆಂಕಟ್ರಮಣ

ಪುತ್ತೂರು: ಪಿಯು ಪರೀಕ್ಷೆ ಬರೆದ ಗ್ರಾಮ ಪಂಚಾಯತ್‌ ಅಧ್ಯಕ್ಷೆ|ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ Read More »

ಈಶ್ವರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ‌ ಮೋದಿ| 40% ಕಮಿಷನ್ ಗೆ ಅಧಿಕೃತ ಮುದ್ರೆ ಎಂದ ಕಾಂಗ್ರೆಸ್

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕರೆ ಮಾಡಿ ಅಭಿನಂದಿಸಿರುವುದನ್ನು ಕಾಂಗ್ರೆಸ್ ಖಂಡಿಸಿದ್ದು, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಪ್ರಧಾನಿಯವರು ಈ ನಡವಳಿಕೆ ರಾಜ್ಯದಲ್ಲಿ ನಡೆಯುತ್ತಿರುವ ಶೇ.40ರಷ್ಟು ಕಮಿಷನ್ ಹಗರಣಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ ಎಂದು ಆರೋಪಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಚುನಾವಣೆಯಲ್ಲಿ ಟಿಕೆಟ್ ವಂಚಿತ ಈಶ್ವರಪ್ಪ ಅವರಿಗೆ ಮೋದಿ ಕರೆ ಮಾಡಿ ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ

ಈಶ್ವರಪ್ಪಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ‌ ಮೋದಿ| 40% ಕಮಿಷನ್ ಗೆ ಅಧಿಕೃತ ಮುದ್ರೆ ಎಂದ ಕಾಂಗ್ರೆಸ್ Read More »

ಬೆಳ್ತಂಗಡಿ: ಪಿಯುಸಿ ಅಂಕದಲ್ಲೂ ಸಮಾನತೆ ಕಾಯ್ದುಕೊಂಡ ಅವಳಿ ಸಹೋದರಿಯರು!!

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸಹೋದರಿಯರು ಸಮಾನ (ಶೇಕಡಾ 99%)ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಇಲ್ಲಿನ ಉಮೇಶ್ ಗೌಡ ಪಿ ಹೆಚ್ ‌ಮತ್ತು ಗೀತಾ ದಂಪತಿಗಳ ಅವಳಿ ಮಕ್ಕಳಾದ ಸ್ಪಂದನಾ ಮತ್ತು ಸ್ಪರ್ಷಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ ) ಇಬ್ಬರೂ 600 ರಲ್ಲಿ 594 ಸಮಾನ (ಶೇಕಡಾ 99%)ಅಂಕ ಪಡೆದಿದ್ದಾರೆ. ಎಸ್ ಡಿ ಎಂ‌ ಕಾಲೇಜಿನ‌ ವಿದ್ಯಾರ್ಥಿಗಳಾಗಿರುವ ಇವರ ಸಾಧನೆಗೆ ಪೋಷಕರು, ಕಾಲೇಜು

ಬೆಳ್ತಂಗಡಿ: ಪಿಯುಸಿ ಅಂಕದಲ್ಲೂ ಸಮಾನತೆ ಕಾಯ್ದುಕೊಂಡ ಅವಳಿ ಸಹೋದರಿಯರು!! Read More »

ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ| ಮೂರೂ ವಿಭಾಗಗಳಲ್ಲೂ ಶಾರದಾ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯದ ಶ್ರೀ ಶಾರದ ಪದವಿ ಪೂರ್ವ ಕಾಲೇಜು ಮೂರೂ ವಿಭಾಗಗಳಲ್ಲೂ ಶೇ.100 ಫಲಿತಾಂಶ ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದು ಶೇ.100 ಫಲಿತಾಂಶ ಬಂದಿದೆ. 10 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಚೈತನ್ಯ ಯು ಶೇ.561 ಅಂಕದೊಂದಿಗೆ ಸಂಸ್ಥೆಗೆ ಅಗ್ರಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 25 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. 8 ಮಂದಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಲಾವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 34

ಸುಳ್ಯ: ದ್ವಿತೀಯ ಪಿಯುಸಿ ಫಲಿತಾಂಶ| ಮೂರೂ ವಿಭಾಗಗಳಲ್ಲೂ ಶಾರದಾ ಪಿಯು ಕಾಲೇಜಿಗೆ ಶೇ.100 ಫಲಿತಾಂಶ Read More »