ಸಮಗ್ರ ಸಮಾಚಾರ

ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ಕಾರ್ಕಳ: ನಗರದ ಮಂಜುನಾಥ ಪೈ ಸಭಾಂಗಣ ಬಳಿಯ ದೇವರಗದ್ದೆ ರಸ್ತೆಯಲ್ಲಿ ಚಾಲಕನೊಬ್ಬ ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಚಿಕ್ಕಮಗಳೂರು ಮೂಲದವನಾಗಿದ್ದು, ಹಿರಿಯಂಗಡಿ ನಿವಾಸಿಯಾಗಿರುವ ಮಂಜುನಾಥ (೩೪) ಎಂಬಾತ ವಿಷ ಸೇವನೆಗೈದವರು. ಇದೀಗ ಮಂಜುನಾಥನನ್ನು ಸ್ಥಳೀಯ ನಾಗರಿಕರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ Read More »

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ

ಜನಪ್ರಿಯ ಟೆಲಿಗ್ರಾಂ ಅಂತಿಮವಾಗಿ ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೀಗ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಡೆಸ್ಕ್ಟಾಪ್ ಬಳಕೆದಾರರು ಗ್ರೂಪ್ ವಿಡಿಯೋ ಕರೆಯನ್ನು ಮಾಡಬಹುದಾಗಿದೆ. ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ ಬಳಕೆಗೆ ಸಿಗಲಿದೆ. ಲಂಡನ್ ಮೂಲದ ಟೆಲಿಗ್ರಾಂ ಆ್ಯಪ್‌ನ ಹೊಸ ಕ್ರಮವು ಫೇಸ್‌ಬುಕ್, ವಾಟ್ಸ್ಪ್ ಮತ್ತು ಆ್ಯಪಲ್‌ನ ಫೇಸ್‌ಟೈಂ ಅನ್ನು ತೆಗೆದುಕೊಳ್ಳುತ್ತದೆ. ಟೆಲಿಗ್ರಾಂ ಗ್ರೂಪ್ ಕರೆ

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ Read More »

ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಲವು ಕನ್ನಡ ಊರುಗಳ ಹೆಸರುಗಳನ್ನು ಕೇರಳ ಸರಕಾರ ಮಲಯಾಳಮ್ ಗೆ ಬದಲಾಯಿಸಿದೆ. ಇದೀಗ ಪಿಣರಾಯಿ ಸರಕಾರದ ವಿರುದ್ಧ ಆಕ್ರೋಶಿತರಾಗಿರುವ ಜನ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಬಹುವಾಗಿ ಕನ್ನಡ ಮತ್ತು ತುಳು ಭಾಷಿಗರಿರುವ ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಊರುಗಳ ಹೆಸರು ಈಗ ಮಳಯಾಳಂಗೆ ಬದಲಾಗಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಮಧೂರು ಮತ್ತು ಮಲ್ಲ ಊರುಗಳ ಹೆಸರನ್ನೂ ಕೂಡ ಬದಲಾಯಿಸಲಾಗಿದೆ. ಜಿಲ್ಲೆಯ ಕನ್ನಡ ಮಾತನಾಡುವ ಬಹುಸಂಖ್ಯಾತ ಕನ್ನಡಿಗರ ಅಭಿಪ್ರಾಯ ಕೇಳದೆ ಸರಕಾರ

ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ Read More »

ದ.ಕ.ದಲ್ಲಿ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ : ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರ -ಡಿಸಿಪಿ ಹರಿರಾಂ ಶಂಕರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ

ಮಂಗಳೂರು: ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವ ಹಿನ್ನೆಲೆಯ ಶನಿವಾರ ಹಾಗೂ ರವಿವಾರದಂದು ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅನಗತ್ಯವಾಗಿ ಓಡಾಡಿದಲ್ಲಿ ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರವೆಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಆರೋಗ್ಯ ಸೇವೆ ಹೊರತು ಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ತಭವಾಗಿರಲಿದೆ. ಸಾರ್ವಜನಿಕರ ವಾಹನಗಳು ಸಂಚಾರ ನಡೆಸುವಂತಿಲ್ಲ. ಖಾಸಗಿ ವಾಹನಗಳು ರಸ್ತೆಗಿಳಿದ್ದಲ್ಲಿ ಮುಲಾಜಿಲ್ಲದೆ ಸೀಝ್ ಮಾಡಲು ಕಾನೂನು ಹಾಗೂ ಸುವ್ಯವಸ್ಥೆಯ ಡಿಸಿಪಿ ಹರಿರಾಂ ಶಂಕರ್ ಆದೇಶ ನೀಡಿದ್ದಾರೆ. ತುರ್ತು ಸಂದರ್ಭ

ದ.ಕ.ದಲ್ಲಿ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ : ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರ -ಡಿಸಿಪಿ ಹರಿರಾಂ ಶಂಕರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ Read More »

ಊಟದ ಬಳಿಕ ತೇಗದ, ಹೂಸು ಬಿಡದ ವರ ಬೇಕಾಗಿದ್ದಾನೆ : ಕಂಡಿಷನ್ಸ್ ಓಕೆ ಆದರೆ ಇಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ!!

ದೆಹಲಿ: ಕಾಲ ಕಳೆದಂತೆ ತಮಗೆ ಬೇಕಾದಂತ ವರನೇ ಗಂಡನಾಗಿ ಬೇಕು, ಮದುವೆಯಾಗುವ ಯುವತಿ ಹೀಗೆ ಇರಬೇಕು ಎಂಬ ಕಂಡಿಷನ್ಸ್ ಹೆಚ್ಚಾಗಿದೆ. ಮದುವೆಗೆ ವರನನ್ನು, ವಧುವನ್ನು ಹುಡುಕುವುದು ಸುಲಭವೂ ಹೌದು ಕಷ್ಟವೂ ಹೌದು. ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ನೂರಾರು ಆಯ್ಕೆಗಳಿವೆ, ಆದರೆ ಅದರಲ್ಲಿ ತಮಗೆ ಒಪ್ಪುವವರನ್ನು ಆಯ್ಕೆ ಮಾಡುವುದು ಒಂದು ಸವಾಲಾಗಿದೆ. ಸುದ್ದಿ ಪತ್ರಿಕೆಗಳಲ್ಲಿ ವರ ಬೇಕಾಗಿದ್ದಾರೆ, ವಧು ಬೇಕಾಗಿದ್ದಾರೆ ಎಂಬ ಜಾಹೀರಾತುಗಳಿಗೇನು ಕಮ್ಮಿ ಇಲ್ಲ. ತಮಗೆ ಬೇಕಾದಂತೆ ನೋಡಲು ಹೇಗಿರಬೇಕು, ವಿದ್ಯಾರ್ಹತೆ ಎಷ್ಟಿರಬೇಕು , ಜಾತಿ, ಮತ ಎಲ್ಲವನ್ನೂ

ಊಟದ ಬಳಿಕ ತೇಗದ, ಹೂಸು ಬಿಡದ ವರ ಬೇಕಾಗಿದ್ದಾನೆ : ಕಂಡಿಷನ್ಸ್ ಓಕೆ ಆದರೆ ಇಮೇಲ್ ವಿಳಾಸಕ್ಕೆ ನಿಮ್ಮ ವಿವರ ಕಳುಹಿಸಿ!! Read More »

ದೇಶದಲ್ಲಿ ‌ಡೆಲ್ಟಾ ಪ್ಲಸ್ ಗೆ ಮೊದಲ ಬಲಿ

ಭೋಪಾಲ್: ಡೆಲ್ಟಾ ಪ್ಲಸ್ ರೂಪಾಂತರಿ ತಗುಲಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೋವಿಡ್ 19 ಸೋಂಕಿನ ರೂಪಾಂತರಿ ಡೆಲ್ಟಾ ಪ್ಲಸ್‌ ಸೋಂಕು ತಾಗಿದ್ದ ಮಹಿಳೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್‌ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢಪಟ್ಟಿದೆ ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು, ಬಳಿಕ ಮಹಿಳೆಗೆ ಸೋಂಕು ತಾಗಿದೆ, ಮಹಿಳೆಯ ಪತಿ ಈಗಾಗಲೇ

ದೇಶದಲ್ಲಿ ‌ಡೆಲ್ಟಾ ಪ್ಲಸ್ ಗೆ ಮೊದಲ ಬಲಿ Read More »

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

ಬೆಂಗಳೂರು: ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಛಲವಾದಿಪಾಳ್ಯ ಕಾರ್ಪೊರೇಟ್ ಆಗಿದ್ದ ರೇಖಾ ಕದಿರೇಶ್ ಅವರನ್ನು ಸಹಚರರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರೇಖಾ ಕದಿರೇಶ್ ಮನೆ ಮುಂದೆಯೇ ಇಂದು ಹಲ್ಲೆ ನಡೆದಿತ್ತು. ಮನೆಯ ಒಳಗಡೆ ಇದ್ದ ರೇಖಾ ಅವರನ್ನು ಹೊರಗೆ ಕರೆದು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆದಿತ್ತು. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ Read More »

ಮತ್ತೆ ರೋಹಿಣಿ ಸಿಂಧೂರಿಯವರನ್ನು ಸ್ವಿಮ್ಮಿಂಗ್ ಫೂಲ್ ಗೆ ತಳ್ಳಿದ ಐಜಿಪಿ ರೂಪಾ

ಬೆಂಗಳೂರು: ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಸರ್ಕಾರಿ ನಿವಾಸದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸ್ವಿಮ್ಮಿಂಗ್ ಪೂಲ್ ಮಾಡಿಸಿದ ಕ್ರಮ ಸಾಕಷ್ಟು ಟೀಕೆಗೆ ಒಳಗಾಯ್ತು. ಈಗ ಐಜಿಪಿ ರೂಪಾ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿವಿದಿದ್ದಾರೆ. ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ.

ಮತ್ತೆ ರೋಹಿಣಿ ಸಿಂಧೂರಿಯವರನ್ನು ಸ್ವಿಮ್ಮಿಂಗ್ ಫೂಲ್ ಗೆ ತಳ್ಳಿದ ಐಜಿಪಿ ರೂಪಾ Read More »

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್ Read More »

ಸೋಂಕಿತರ ಸಾವಿಗೆ ಬಿಜೆಪಿ ಸರ್ಕಾರ ಕಾರಣ |ಸಿಎಂ ಬಿ.ಎಸ್.ವೈ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ: ಸಿದ್ದು

ಕೊಪ್ಪಳ: ‘ರಾಜ್ಯದಲ್ಲಿ ಕೊರೊನ ಸೋಂಕಿತರ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಏಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಗೊಂದಲ ಇಲ್ಲದೇ ಅರುಣ್ ಸಿಂಗ್ ಅವರು ಸುಮ್ನೆ ಬಂದಿದ್ದರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಶಾಸಕ ಜಮೀರ್ ಅಹ್ಮದ್ ನಾನು ಸಿಎಂ ಆಗ್ಬೇಕು ಎನ್ನುವ ಹೇಳಿದ ವಿಚಾರದ ಕುರಿತಂತೆ ವೈಯುಕ್ತಿಕ ಅಭಿಪ್ರಾಯ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

ಸೋಂಕಿತರ ಸಾವಿಗೆ ಬಿಜೆಪಿ ಸರ್ಕಾರ ಕಾರಣ |ಸಿಎಂ ಬಿ.ಎಸ್.ವೈ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ: ಸಿದ್ದು Read More »