ಸಮಗ್ರ ಸಮಾಚಾರ

ಮಂಗಳೂರು: ವಿದ್ಯಾರ್ಥಿಗಳ ಕೈಲಿದ್ದ ರಾಖಿ ತೆಗೆದು ಕಸದಬುಟ್ಟಿಗೆ ಎಸೆದ ಶಿಕ್ಷಕರು

ಸಮಗ್ರ ನ್ಯೂಸ್: ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಆರೋಪದ ಹಿನ್ನೆಲೆ ಪೋಷಕರು‌ ಮತ್ತು ಬಿಜೆಪಿ ಕಾರ್ಯಕರ್ತರಿಂದ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿರುವ ಘಟನೆ ಮಂಗಳೂರು ಹೊರವಲಯದ ಕಾಟಿಪಳ್ಳದ ಖಾಸಗಿ ಶಾಲೆಯಲ್ಲಿ ನಡೆದಿದೆ. ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿನ್ನೆ ‌ರಕ್ಷಾಬಂಧನ ಹಿನ್ನೆಲೆ ಕೈಗೆ ರಾಖಿ ಕಟ್ಟಿಕೊಂಡು ಮಕ್ಕಳು ಹೋಗಿದ್ದರು, ಆದರೆ ರಾಖಿ ತೆಗೆಸಿ ಕೆಲ ಶಿಕ್ಷಕರು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆ ಶಾಲೆಗೆ […]

ಮಂಗಳೂರು: ವಿದ್ಯಾರ್ಥಿಗಳ ಕೈಲಿದ್ದ ರಾಖಿ ತೆಗೆದು ಕಸದಬುಟ್ಟಿಗೆ ಎಸೆದ ಶಿಕ್ಷಕರು Read More »

ಮಂಗಳೂರಿನಿಂದ ಕಾಶ್ಮೀರ

ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿದ ಅಮೃತಾ ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿದ್ದಾರೆ. 21 ವರ್ಷ ಅಮೃತಾ ಜೋಷಿ ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ , ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ 22000 ಕಿ.ಮೀ ಸಂಚರಿಸಿ ದೇಶಾದ್ಯಂತ ಪರ್ಯಟನೆ ಮಾಡಿದ್ದಾರೆ.

ಮಂಗಳೂರಿನಿಂದ ಕಾಶ್ಮೀರ Read More »

ಟಾಯ್ಲೆಟ್ ನಲ್ಲಿ ಬಂಗಾರದ ನಾಣ್ಯ ಪತ್ತೆ ! ಹೇಗೆ ಗೊತ್ತೆ

ಜೌನ್‌ಪುರದ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಯೊಳಗೆ ಶೌಚಾಲಯದ ಗುಂಡಿಯನ್ನು ಅಗೆಯುವಾಗ ಬ್ರಿಟಿಷರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಮಾಮ್ ಅಲಿ ರೈನಿ ಅವರ ಪತ್ನಿ ನೂರ್ ಜಹಾನ್ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಕಂದಕವನ್ನು ಅಗೆಯುತ್ತಿದ್ದರು. ಅಗೆಯುವ ಸಮಯದಲ್ಲಿ, ತಾಮ್ರದ ಪಾತ್ರೆಯಲ್ಲಿ ಹಲವಾರು ನಾಣ್ಯಗಳು ಪತ್ತೆಯಾಗಿವೆ.  ಮಹಿಳೆ ನೂರ್ ಜಹಾನ್ ಅವರ ಕುಟುಂಬ ಸದಸ್ಯರು ಮತ್ತು ಕಾರ್ಮಿಕರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ವಾರಾಂತ್ಯದಲ್ಲಿ ಪೊಲೀಸರು ಮಾಹಿತಿ ಪಡೆದು ನಾಣ್ಯಗಳನ್ನು

ಟಾಯ್ಲೆಟ್ ನಲ್ಲಿ ಬಂಗಾರದ ನಾಣ್ಯ ಪತ್ತೆ ! ಹೇಗೆ ಗೊತ್ತೆ Read More »

ಪ್ರಕೃತಿ ವಿಕೋಪದ ಪರಿಹಾರದಲ್ಲಿ ತಾರತಮ್ಯ ಆರೋಪ | ಸಿಎಂನಿಂದ ಸ್ಪಷ್ಟನೆ

ಬೆಂಗಳೂರು: ಪ್ರಕೃತಿ ವಿಕೋಪದ ಪರಿಹಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಪರಿಹಾರ ವಿಚಾರವಾಗಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಶಾಸಕರ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಪರಿಹಾರ ವಿಚಾರವಾಗಿ ಟ್ವೀಟ್ ಮಾಡಿದ್ದ ಮಾಜಿ ಸಚಿವ ಎಂಬಿ ಪಾಟೀಲ್, ವಿಜಯಪುರ ಜಿಲ್ಲೆಯ ಪಾಲಿಗೆ ಸರ್ಕಾರ ಇದ್ದೂ ಸತ್ತಂತಾಗಿದ್ದು ನಮ್ಮ ಜಿಲ್ಲೆ ಅನಾಥವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಅಭಿವೃದ್ಧಿಯ ವಿಷಯದಲ್ಲೂ ಶೂನ್ಯ ಕೊಡುಗೆ! ಜಿಲ್ಲೆಯ ಪಾಲಿಗೆ ಸರ್ಕಾರ ಜೀವಂತವಿದ್ದರೆ ಇದಕ್ಕೆ ಏನಾದರೂ

ಪ್ರಕೃತಿ ವಿಕೋಪದ ಪರಿಹಾರದಲ್ಲಿ ತಾರತಮ್ಯ ಆರೋಪ | ಸಿಎಂನಿಂದ ಸ್ಪಷ್ಟನೆ Read More »

ಚಿಕ್ಕಮಗಳೂರು : ಗೋ ಹತ್ಯೆ ತಡೆಯಲು ಹೊಸ ಪ್ರಯೋಗಕ್ಕೆ ಮುಂದಾದ ನಗರಸಭೆ

ಮನೆಯ ವಿದ್ಯುತ್ ಸಂಪರ್ಕ ಬಂದ್ ಮಾಡಿ ಮನೆಯ ದಾಖಲೆಗಳನ್ನ ರದ್ದು ಚಿಕ್ಕಮಗಳೂರು : ಗೋ ಹತ್ಯೆ ತಡೆಯಲು ಹೊಸ ಪ್ರಯೋಗಕ್ಕೆ ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಗೋ ಹತ್ಯೆ, ಮಾರಾಟ ಮಾಡುತ್ತಿದ್ದ ಮನೆಯ ಮೇಲೆ‌ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಗೋಹತ್ಯೆ ಮಾಡುತ್ತಿದ್ದ ಮನೆಯ ವಿದ್ಯುತ್ ಸಂಪರ್ಕ ಬಂದ್ ಮಾಡಿ ಮನೆಯ ದಾಖಲೆಗಳನ್ನ ರದ್ದು ಮಾಡಿ, ನಗರಸಭೆ ಆಸ್ತಿಯನ್ನಾಗಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನೂ ಚಿಕ್ಕಮಗಳೂರು ನಗರಸಭೆಯಿಂದ ನಿರಂತರವಾಗಿ ಗೋಮಾಂಸ ಅಡ್ಡೆಗಳ ಮೇಲೆ‌‌ ದಾಳಿ ನಡೆಸಲಾಗುತ್ತಿದ್ದು ಬುಲ್ಡೋಜರ್ ಪ್ರಯೋಗವನ್ನು

ಚಿಕ್ಕಮಗಳೂರು : ಗೋ ಹತ್ಯೆ ತಡೆಯಲು ಹೊಸ ಪ್ರಯೋಗಕ್ಕೆ ಮುಂದಾದ ನಗರಸಭೆ Read More »

ಪ್ರವೀಣ್ ಹತ್ಯೆ ಪ್ರಕರಣ; ಆರೋಪಿಗಳ ಜೊತೆಗೆ ಸುಳ್ಯ ಪಿಎಫ್ಐ ಕಚೇರಿ ಮಹಜರು ನಡೆಸಿದ ಪೊಲೀಸರು

ಸಮಗ್ರ‌ ನ್ಯೂಸ್ : ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದರು. ಇದೀಗ ಬಂಧಿತರನ್ನು ಬಿಗಿ ಬಂದೋಬಸ್ತು ಮೂಲಕ ಪಿಎಫ್ಐ ಕಚೇರಿಗೆ ಕರೆದುಕೊಂಡು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸುಳ್ಯ ಪೊಲೀಸರು ಮಹಜರು ಪ್ರಕ್ರಿಯೆ ನಡೆಸುತ್ತಿದ್ದು, ಬಳಿಕ ಇಬ್ಬರನ್ನೂ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಬಂಧಿತರಾಗಿರುವ ಅಬೀದ್ ಮತ್ತು ನೌಫಾಲ್ ಅವರನ್ನು ಸುಳ್ಯದ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಕಛೇರಿಯಲ್ಲಿ ಮಹಜರು

ಪ್ರವೀಣ್ ಹತ್ಯೆ ಪ್ರಕರಣ; ಆರೋಪಿಗಳ ಜೊತೆಗೆ ಸುಳ್ಯ ಪಿಎಫ್ಐ ಕಚೇರಿ ಮಹಜರು ನಡೆಸಿದ ಪೊಲೀಸರು Read More »

ಕರಾವಳಿಗರೇ ಎಚ್ಚರ; ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಮಳೆ ಮತ್ತು ಮುಂದಿನ 48 ಗಂಟೆಗಳ ಹವಾಮಾನ ವರದಿ ಪ್ರಕಾರ ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕಾಗಿದೆ . ನಿನ್ನೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ . ಅತಿ ಭಾರಿ ಮಳೆಯ ಪ್ರಮಾಣ ಉಡುಪಿ ಜಿಲ್ಲೆ ಕೊಲ್ಲೂರು , ಕೊಡಗು ಜಿಲ್ಲೆಯ ಭಾಗಮಂಡಲ ತಲಾ 16 ಸೆ . ಮಿ ಮಳೆ ದಾಖಲಾಗಿದೆ . ಭಾರಿ ಮಳೆಯ

ಕರಾವಳಿಗರೇ ಎಚ್ಚರ; ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಮಾಡಿ ಜೈಲಿಗೆ ಹಾಕಿ : ಬೋಜೇಗೌಡ ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ ಹಿನ್ನೆಲೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡರಿಂದ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗಿದ್ದು ಈ ಕಾಮಗಾರಿ ಕಳೆದ ನವಂಬರ್ ನಲ್ಲಿ ಮುಗಿಯಬೇಕಿತ್ತು, ಆದರೆ ಆಗಸ್ಟ್ ಬಂದರು ಕಾಮಗಾರಿ ಮುಗಿಸದ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ

ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ Read More »

ವಿಶ್ವದ ಅತ್ಯಂತ ದುಬಾರಿ ದಿಂಬು ಇದು ! ಏಕೆ ಗೊತ್ತೆ

ದಿನವಿಡೀ ಕೆಲಸ, ಒಂದೊಂದು ಟೆನ್ಶನ್,  ಇದೆಲ್ಲಾ ಕಳೆದು ರಾತ್ರಿ ವೇಳೆ  ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಎಂದು ಬಯಸುತ್ತಾರೆ. ನಿದ್ರೆ ಮಾಡಲು ದಿಂಬು ಅತಿ ಅವಶ್ಯಕ.‌ ದಿಂಬು ಒಬ್ಬೊಬ್ಬರು ಒಂದೊಂದು ರೀತಿ ಕೊಳ್ಳುತ್ತಾರೆ. ಆದರೆ ಇಲ್ಲಿದೆ ಒಂದು ಅಪರೂಪದ ದಿಂಬು ವಿಶ್ವದ ಅತ್ಯಂತ ದುಬಾರಿ ದಿಂಬನ್ನು ನೆದರ್ಲೆಂಡ್ಸ್‌ನ ಫಿಸಿಯೋಥೆರಪಿಸ್ಟ್ ರಚಿಸಿದ್ದಾರೆ. ಹದಿನೈದು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ದಿಂಬನ್ನು ವಿನ್ಯಾಸಗೊಳಿಸಲಾಗಿದೆ.  ಒಂದು ದಿಂಬಿಗೆ 57,000 ಡಾಲರ್‌ಗಳು, ಸರಿಸುಮಾರು 45 ಲಕ್ಷ

ವಿಶ್ವದ ಅತ್ಯಂತ ದುಬಾರಿ ದಿಂಬು ಇದು ! ಏಕೆ ಗೊತ್ತೆ Read More »

ತುಳುವಿಗೆ ಅಕಾಡೆಮಿಯೊಂದನ್ನು ಬಿಟ್ಟರೆ ಸರಕಾರ ಬೇರೆ ಏನೂ ಮಾಡಿಲ್ಲ: ತುಳು ಅಕಾಡೆಮಿ ಅಧ್ಯಕ್ಷರ ಬೇಸರ

ಮಂಗಳೂರು: ಪಂಚ ದ್ರಾವಿಡ ಭಾಷೆಯಲ್ಲಿಯೇ ತುಳುವಿಗೆ ಬಹಳ ಉನ್ನತ ಸ್ಥಾನವಿದೆ. ಕರ್ನಾಟಕದಲ್ಲಿ ತುಳು ಸಾಹಿತ್ಯ ಅಕಾಡೆಮಿಯೊಂದನ್ನು ಬಿಟ್ಟರೆ ಉಳಿದಂತೆ ಸರಕಾರ ಯಾವುದೇ ರೀತಿಯಲ್ಲಿ ನೆರವಾಗಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್‌ ಬೇಸರ ವ್ಯಕ್ತಪಡಿಸಿದರು. ಅವರು ಭಾನುವಾರ ನಗರದ ಉರ್ವ ಸ್ಟೋರ್‌ನಲ್ಲಿರುವ ಡಾ.ಬಿಆರ್‌ ಅಂಬೇಡ್ಕರ್‌ ಭವನದಲ್ಲಿ ಜೈ ತುಳುನಾಡು ಮಂಗಳೂರು ಆಶ್ರಯದಲ್ಲಿ ತುಲುವೆರೆ ಆಟಿ ಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಜಿ ಕತ್ತಲ್‌ಸಾರ್, ಕರ್ನಾಟಕ ಸರಕಾರ ತುಳು ಅಕಾಡೆಮಿಯೊಂದನ್ನು ಕೊಟ್ಟಿದೆ.

ತುಳುವಿಗೆ ಅಕಾಡೆಮಿಯೊಂದನ್ನು ಬಿಟ್ಟರೆ ಸರಕಾರ ಬೇರೆ ಏನೂ ಮಾಡಿಲ್ಲ: ತುಳು ಅಕಾಡೆಮಿ ಅಧ್ಯಕ್ಷರ ಬೇಸರ Read More »