ಸಮಗ್ರ ಸಮಾಚಾರ

ಚಲಿಸುತ್ತಿದ್ದ ರೈಲ್ ನಲ್ಲಿ ಬೆಂಕಿ ಎಚ್ಚರಿಕೆಯ ಸೈರನ್ ಮೊಳಗಿಸಿದ ಇಲಿ..!!

ಸಮಗ್ರ ನ್ಯೂಸ್: ರೈಲಿನಲ್ಲಿ ನಡುರಾತ್ರಿಯಲ್ಲಿ ಸೈರನ್ ಮೊಳಗಿದ ಕಾರಣ ನಿದ್ದೆಯಲ್ಲಿದ್ದ ಪ್ರಯಾಣಿಕರು ಆತಂಕದಿಂದ ಎದ್ದು ಭಯಭೀತಿಗೊಳಗಾಗದ ಘಟನೆ ಹಾಸನ ಜಂಕ್ಷನ್ ಬಳಿ ಸಂಭವಿಸಿದೆ. ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲು ರಾತ್ರಿ ಒಂದು ಗಂಟೆಗೆ ಹಾಸನದ ಬಳಿ ಸಾಗುತ್ತಿದ್ದಾಗ ಬಿ1 ಬೋಗಿಯಲ್ಲಿ ಬೆಂಕಿ ಎಚ್ಚರಿಕೆಯ ಸೈರನ್ ಮೊಳಗತೊಡಗಿತು. ಅಪಾಯದ ಸೂಚನೆ ಘೋಷಣೆ ಆದ ಕಾರಣ ನಿದ್ರೆಯಲ್ಲಿದ್ದ ಪ್ರಯಾಣಿಕರು ಒಮ್ಮೆಲೇ ಎದ್ದು ಆತಂಕದಿಂದ ಬಾಗಿಲ ಬಳಿ ಜಮಾಯಿಸಿದರು. ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದಾಗ ವಿದ್ಯುತ್ ಬೋರ್ಡ್ ಒಳಗಡೆ ಇಲಿ ನುಸುಳಿ ಅವಾಂತರ […]

ಚಲಿಸುತ್ತಿದ್ದ ರೈಲ್ ನಲ್ಲಿ ಬೆಂಕಿ ಎಚ್ಚರಿಕೆಯ ಸೈರನ್ ಮೊಳಗಿಸಿದ ಇಲಿ..!! Read More »

ಸುಬ್ರಹ್ಮಣ್ಯ: ಹೊಳೆಯಲ್ಲಿ ಮುಳುಗಿ‌ ಇಬ್ಬರು ಸಾವು

ಸಮಗ್ರ‌ ನ್ಯೂಸ್: ಹೊಳೆಯಲ್ಲಿ ಮುಳುಗಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ‌ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಯೇನೆಕಲ್ಲು ಬಳಿಯಲ್ಲಿ ‌ನಡೆದಿದೆ. ಮೃತಪಟ್ಟವರನ್ನು ಧರ್ಮಪಾಲ ಪರಮಲೆ (46ವ.) ಮತ್ತು ಬೆಳ್ಯಪ್ಪ ಚಳ್ಳಂಗಾರು, ಚೊಕ್ಕಾಡಿ (49ವ.) ಎಂದು ಗುರುತಿಸಲಾಗಿದೆ. ಧರ್ಮಪಾಲರು ಕೆಲವು ಸಮಯಗಳಿಂದ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಕಸವಿಲೇವಾರಿ ಘಟಕದಲ್ಲಿ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಳೆಯಲ್ಲಿದ್ದ ಪಂಪಿನ ಫೂಟ್ ವಾಲ್ ತೆಗೆಯಲು ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ‌ ಮುಳುಗಿರಬಹುದೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರ ಶವಗಳನ್ನು ನೀರಿನಿಂದ

ಸುಬ್ರಹ್ಮಣ್ಯ: ಹೊಳೆಯಲ್ಲಿ ಮುಳುಗಿ‌ ಇಬ್ಬರು ಸಾವು Read More »

ಮಹರಾಷ್ಟ್ರದಲ್ಲಿ ಅಪಘಾತ| ಸುರತ್ಕಲ್‌‌ನ ಯುವಕ ಮೃತ್ಯು

ಸಮಗ್ರ ನ್ಯೂಸ್: ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಮೀನಿನ ಲಾರಿಯೊಂದು ಮಹರಾಷ್ಟ್ರದ ಖಂಡಾಲಾ ಘಾಟ್ ಬಳಿ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕ ಸುರತ್ಕಲ್‌‌ನ ಕೃಷ್ಣಾಪುರದ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಕೃಷ್ಣಾಪುರ ನಿವಾಸಿ ಅಲ್ತಾಫ್ ಹುಸೇನ್ ಅವರ ಪುತ್ರ ಅಜ್ಮಲ್ (23) ಮೃತಪಟ್ಟ ಲಾರಿ ಚಾಲಕ. ಕುಂದಾಪುರ ಮೂಲದ ಲಾರಿಯಲ್ಲಿ ನಿನ್ನೆ ರಾತ್ರಿ ಅಜ್ಮಲ್ ಚಾಲಕನಾಗಿ ಮುಂಬೈಗೆ ತೆರಳಿದ್ದು, ಇಂದು ಖಂಡಾಲಾ ಘಾಟ್ ನಲ್ಲಿ ಲಾರಿ ಉರುಳಿಬಿದ್ದಿದೆ. ಚಾಲಕ ಅಜ್ಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ

ಮಹರಾಷ್ಟ್ರದಲ್ಲಿ ಅಪಘಾತ| ಸುರತ್ಕಲ್‌‌ನ ಯುವಕ ಮೃತ್ಯು Read More »

ಶಬರಿಮಲೆ: ನಾಳೆಯಿಂದ(ನ.17) ಅಯ್ಯಪ್ಪ ದರ್ಶನ| ದಿನಕ್ಕೆ ಗರಿಷ್ಠ 1ಲಕ್ಷ ಜನರಿಗೆ ಅವಕಾಶ

ಸಮಗ್ರ ನ್ಯೂಸ್: ಶಬರಿಮಲೆಯ ಅಯ್ಯಪ್ಪ ದೇಗುಲವು ಬುಧವಾರದಿಂದ (ನ 16) ತೆರೆಯಲಿದ್ದು, ಗುರುವಾರದಿಂದ (ನ 17) ಎರಡು ತಿಂಗಳ ಅವಧಿಗೆ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ. ವಾರ್ಷಿಕ ಮಂಡಲಂ-ಮಕರವಿಳುಕ್ಕು ಯಾತ್ರೆಗೂ ನಾಳೆಯಿಂದಲೇ ಚಾಲನೆ ಸಿಗಲಿದೆ. ದೇಗುಲದ ಹಾಲಿ ಪ್ರಧಾನ ಅರ್ಚಕರಾದ ಕಂಡರಾರು ರಾಜೀವರು ಮತ್ತು ಹಿಂದ ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂದಿರಿ ಅವರ ಸಮಕ್ಷಮದಲ್ಲಿ ದೇಗುಲದ ಗರ್ಭಗೃಹವನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ನಂತರ ಅಯ್ಯಪ್ಪ ಮತ್ತು ಮಲಿಕಾಪುರಮ್ ದೇಗುಲಗಳ ಮುಖ್ಯ ಅರ್ಚಕರು ಪೂಜಾ ವಿಧಿಗಳನ್ನು

ಶಬರಿಮಲೆ: ನಾಳೆಯಿಂದ(ನ.17) ಅಯ್ಯಪ್ಪ ದರ್ಶನ| ದಿನಕ್ಕೆ ಗರಿಷ್ಠ 1ಲಕ್ಷ ಜನರಿಗೆ ಅವಕಾಶ Read More »

ಮೈಸೂರು: ನಾಟಕೀಯ ತಿರುವು ಪಡೆದುಕೊಂಡ ಬಸ್ ತಂಗುದಾಣ ವಿವಾದ| ನಾಮಫಲಕದಲ್ಲಿ ರಾರಾಜಿಸಿದ ಮೋದಿ, ಬೊಮ್ಮಾಯಿ, ಸ್ವಾಮೀಜಿ ಫೋಟೋ

ಸಮಗ್ರ ನ್ಯೂಸ್: ರಾತ್ರೋರಾತ್ರಿ ಮೈಸೂರು ನಗರದಲ್ಲಿ ಗುಂಬಜ್‌ ಮಾದರಿಯ ಬಸ್‌ ತಂಗುದಾಣದ ಮೇಲೆ ಕಳಶಗಳು ಬಂದಿದ್ದವು. ಈಗ ಏಕಾಏಕಿ ಸುತ್ತೂರು ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೊ ಅಳವಡಿಸಿರುವುದು ಕಂಡುಬಂದಿದ್ದು, ಬಸ್ ತಂಗುದಾಣ ವಿವಾದ ನಾಟಕೀಯ ತಿರುವು ಪಡೆದಿದೆ. ತಂಗುದಾಣವೊಂದಕ್ಕೆ ಮಂಗಳವಾರ ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣ ಎಂಬ ಬೋರ್ಡ್ ಅಳವಡಿಕೆ ಮಾಡಿದ್ದು, ಪಕ್ಷ, ಜಾತಿ ಮುಂದೆ ಬಿಟ್ಟು ಪೇಚಿಗೆ ಸಿಲುಕಿಸುವ ಯತ್ನ‌ ನಡೆಸಲಾಗಿದೆ. ಸುತ್ತೂರು ಶ್ರೀ ವೀರಸಿಂಹಾಸನ ಮಠದ ಆದಿ

ಮೈಸೂರು: ನಾಟಕೀಯ ತಿರುವು ಪಡೆದುಕೊಂಡ ಬಸ್ ತಂಗುದಾಣ ವಿವಾದ| ನಾಮಫಲಕದಲ್ಲಿ ರಾರಾಜಿಸಿದ ಮೋದಿ, ಬೊಮ್ಮಾಯಿ, ಸ್ವಾಮೀಜಿ ಫೋಟೋ Read More »

ಆ ಕೆಟ್ಟ ಜಾಗದಲ್ಲಿ ನನ್ನನ್ನು ಸೆಕ್ಸಿಯಾಗಿರಲು ಹೇಳಿದ್ರು!! ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ ರಣ್ವೀರ್ ಸಿಂಗ್

ಸಮಗ್ರ ನ್ಯೂಸ್: ಬಾಲಿವುಡ್ ನಲ್ಲಿ ಇಂದು ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿರುವ ರಣ್ವೀರ್ ಸಿಂಗ್ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಪ್ರಾರಂಭದ ದಿನಗಳಲ್ಲಿ ತುಂಬಾ ಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಸ್ಟಿಂಗ್ ಕೌಚ್ ಅನುಭವ ಕೂಡ ಆಗಿದೆ ಎನ್ನುವ ಮೂಲಕ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ನಟಿಯರಿಗೆ ಮಾತ್ರವಲ್ಲದೇ ಹೀರೋಗಳು ಸಹ ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾರೆ ಎನ್ನುವುದಕ್ಕೆ ರಣ್ವೀರ್ ಸಿಂಗ್ ಹೇಳಿಕೆಯೇ ಸಾಕ್ಷಿ. ಮೊರಾಕೊದಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ, ಸ್ಟಾರ್ ಹೀರೋ ರಣ್ವೀರ್ ಸಿಂಗ್ ತಮ್ಮ

ಆ ಕೆಟ್ಟ ಜಾಗದಲ್ಲಿ ನನ್ನನ್ನು ಸೆಕ್ಸಿಯಾಗಿರಲು ಹೇಳಿದ್ರು!! ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ ರಣ್ವೀರ್ ಸಿಂಗ್ Read More »

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಕ್ರಿ.ಶ. 1837ರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಮಂಗಳವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರು: ನ.19 ಕ್ಕೆ ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ| ಜಿಲ್ಲಾಡಳಿತದಿಂದ ವಿಜೃಂಭಣೆಯ ಕಾರ್ಯಕ್ರಮಕ್ಕೆ ಸಿದ್ದತೆ Read More »

ಮೋದಿ – ರಿಷಿ ಸುನಕ್ ಮುಖಾಮುಖಿ| ಹಲವು ವಿಚಾರಗಳ ಬಗ್ಗೆ ಚರ್ಚೆ

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ನಿನ್ನೆ ಸಂಜೆ ಇಂಡೋನೆಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಗೆ ತೆರಳಿದ್ದಾರೆ. ಈಗ ಅನೇಕ ಜಾಗತಿಕ ನಾಯಕರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಭಾಷಣೆ ನಡೆಸುತ್ತಿರುವ ಮೋದಿ ಈಗ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ರನ್ನೂ ಭೇಟಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ‘ಪ್ರಧಾನಿ ಮೋದಿ ಮತ್ತು ಪ್ರಧಾನಿ ರಿಷಿ ಸುನಕ್​ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗದಲ್ಲಿ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಟ್ವೀಟ್​ ಮಾಡಿದೆ. ಮೋದಿ ಮತ್ತು ಸುನಕ್​ ಇದೇ ಮೊದಲ

ಮೋದಿ – ರಿಷಿ ಸುನಕ್ ಮುಖಾಮುಖಿ| ಹಲವು ವಿಚಾರಗಳ ಬಗ್ಗೆ ಚರ್ಚೆ Read More »

ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ

ಸಮಗ್ರ ನ್ಯೂಸ್: ಚೆನ್ನೈ- ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ. ಈ ರೈಲಿನ ದರ ಈಗಿರುವ ಶತಾಬ್ದಿ ರೈಲಿಗಿಂತ ಭಿನ್ನವಾಗಿದೆ. ಮೈಸೂರು-ಬೆಂಗಳೂರು ಟಿಕೆಟ್‌ಗೆ ಶತಾಬ್ದಿ ರೈಲಿಗಿಂತ ಹೆಚ್ಚಿನ ದರ ನಿಗದಿ ಮಾಡಲಾಗಿದ್ದರೆ, ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಮಾತ್ರ ಈಗಿರುವ ದರಕ್ಕಿಂತ ಕಡಿಮೆ ದರ ವಿಧಿಸಲಾಗಿದೆ. ಮೈಸೂರು-

ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ Read More »

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ

ಸಮಗ್ರ ನ್ಯೂಸ್: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ನ.14 ರ ರಾತ್ರಿ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ ಕಾರ್ತಿಕ್ (16) ಮೃತಪಟ್ಟ ಬಾಲಕ. ರಾತ್ರಿ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು, 9.30 ರ ಸುಮಾರಿಗೆ ಜೋರಾಗಿ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ .ಈ ವೇಳೆ ಮನೆಮಂದಿ ಹಾಲ್ ಗೆ ಓಡಿ ಬಂದಿದ್ದು, ಅದರೆ ಕಾರ್ತಿಕ್ ಏಳದೆ

ಬಂಟ್ವಾಳ: ಸಿಡಿಲಿಗೆ 16 ವರ್ಷದ ಬಾಲಕ ಬಲಿ Read More »