ಸಮಗ್ರ ಸಮಾಚಾರ

ಮಂಗಳೂರು: ‘ಮಲೇಷ್ಯಾ ಮರಳನ್ನು ಕೆಲವೇ ದಿನಗಳಲ್ಲಿ ವಿತರಿಸಲಾಗುವುದು’- ಡಿ.ಸಿ

ಸಮಗ್ರ ನ್ಯೂಸ್: ಮಲೇಷ್ಯಾದಿಂದ ಐದು ವರ್ಷಗಳ ಹಿಂದೆ ಆಮದು ಮಾಡಿ ನವಮಂಗಳೂರು ಬಂದರಿನಲ್ಲಿ ಶೇಖರಿಸಿಟ್ಟಿರುವ ಮರಳನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ವಿತರಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಎನ್‌ಎಂಪಿಎಯಲ್ಲಿ ಅಷ್ಟು ಪ್ರಮಾಣದ ಮರಳು ಸಂಗ್ರಹ ಇರುವ ವಿಚಾರ ತಿಳಿದು ಅಚ್ಚರಿಯಾಗಿದ್ದು, ಇದು ಎಂಸ್ಯಾಂಡ್‌ ಅಲ್ಲ, ಆದರೆ ಉತ್ತಮ ಗುಣಮಟ್ಟದ ಮರಳಾಗಿದೆ. ಅದನ್ನು 10 ಟನ್‌ಗೆ 10,000 ರೂ.ಗಳಂತೆ ಜಿಲ್ಲೆಯಲ್ಲಿ ಪೂರೈಕೆ ಮಾಡಲಾಗುವುದು ಎಂದರು. ಇನ್ನು ಜಿಲ್ಲೆಯಲ್ಲಿ […]

ಮಂಗಳೂರು: ‘ಮಲೇಷ್ಯಾ ಮರಳನ್ನು ಕೆಲವೇ ದಿನಗಳಲ್ಲಿ ವಿತರಿಸಲಾಗುವುದು’- ಡಿ.ಸಿ Read More »

ಕಾಂಗ್ರೆಸ್ ಗೆ ಸಿಕ್ಕಿದ ಹಿಮಾಚಲ ಪ್ರದೇಶ ದಕ್ಕಲು ಬಿಟ್ಟೀತೆ ಬಿಜೆಪಿ| ಪಕ್ಷೇತರ ಓಲೈಕೆಗೆ ಕೇಸರಿ ಪಾಳಯ ಮುಂದಾಗಿದ್ದೇಕೆ?

ಸಮಗ್ರ ನ್ಯೂಸ್: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಮುಗಿದು ರಿಸಲ್ಟ್ ಬಂದಿದೆ. ಗುಜರಾತ್ ನಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡು ವಿರೋಧ ಪಕ್ಷಗಳನ್ನು ಧೂಳಿಪಟ ಮಾಡಿದೆ. ಬರೋಬ್ಬರಿ 156 ಸೀಟುಗಳನ್ನು ಗಳಿಸಿ ಏಳನೇ ಬಾರಿಗೆ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಗುಡ್ಡಗಾಡಿನ ಜನ ಸೋಲಿನ ರುಚಿ ತೋರಿಸಿದ್ದಾರೆ. ಅಚ್ಚರಿಯೆಂಬಂತೆ 40 ಸ್ಥಾನಗಳನ್ನು ಗಳಿಸಿಕೊಂಡ ಕಾಂಗ್ರೆಸ್ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ. ಕಾಂಗ್ರೆಸ್ ಹಿಮಾಚಲದಲ್ಲಿ ಗೆದ್ದರೂ ಸಂಭ್ರಮ ಪಡುವ ಸ್ಥಿತಿಯಲ್ಲಿಲ್ಲ.

ಕಾಂಗ್ರೆಸ್ ಗೆ ಸಿಕ್ಕಿದ ಹಿಮಾಚಲ ಪ್ರದೇಶ ದಕ್ಕಲು ಬಿಟ್ಟೀತೆ ಬಿಜೆಪಿ| ಪಕ್ಷೇತರ ಓಲೈಕೆಗೆ ಕೇಸರಿ ಪಾಳಯ ಮುಂದಾಗಿದ್ದೇಕೆ? Read More »

ಮತ್ತೆ ಕಿರುತೆರೆಯತ್ತ ನಟ ಅನಿರುದ್ದ್| ಎಸ್.ನಾರಾಯಣ್ ನಿರ್ದೇಶನದಲ್ಲಿ ಬರಲಿದೆ “ಸೂರ್ಯವಂಶ”

ಸಮಗ್ರ ನ್ಯೂಸ್: ಎಸ್. ನಾರಾಯಣ್ ಎಂದರೆ ಸೂರ್ಯವಂಶ ಸಿನಿಮಾ ನೆನಪಾಗುತ್ತದೆ. ಕಲಾ ಸಾಮ್ರಾಟ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ಇಂದಿಗೂ ಸೂಪರ್ ಹಿಟ್. ಇದೇ ಟೈಟಲ್ ಇಟ್ಟುಕೊಂಡು ಈಗ ಎಸ್. ನಾರಾಯಣ್ ಮತ್ತೊಂದು ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಬಾರಿ ಅವರು ಸೂರ್ಯವಂಶ ಟೈಟಲ್ ನ ಧಾರವಾಹಿಯೊಂದನ್ನು ರಚಿಸಿ, ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್

ಮತ್ತೆ ಕಿರುತೆರೆಯತ್ತ ನಟ ಅನಿರುದ್ದ್| ಎಸ್.ನಾರಾಯಣ್ ನಿರ್ದೇಶನದಲ್ಲಿ ಬರಲಿದೆ “ಸೂರ್ಯವಂಶ” Read More »

ಮಂಗಳೂರು: ಬುರ್ಖಾ ಧರಿಸಿ ವಿದ್ಯಾರ್ಥಿಗಳ ಅಶ್ಲೀಲ ಡ್ಯಾನ್ಸ್| ನಾಲ್ವರನ್ನು ಸಸ್ಪೆಂಡ್ ಮಾಡಿದ ಪ್ರಿನ್ಸಿಪಾಲ್

ಸಮಗ್ರ ನ್ಯೂಸ್: ಮಂಗಳೂರಿನ ವಾಮಂಜೂರಿನಲ್ಲಿ ಖಾಸಗಿ ಕಾಲೇಜಿನಲ್ಲಿ ವಿಧ್ಯಾರ್ಥಿಗಳು ಬುರ್ಖಾ ಧರಿಸಿ ನೃತ್ಯ ಪ್ರದರ್ಶನ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಕಾಲೇಜು ಡ್ಯಾನ್ಸ್ ಮಾಡಿದ್ದ ನಾಲ್ವರು ವಿಧ್ಯಾರ್ಥಿಗಳು ಸಸ್ಪೆಂಡ್ ಮಾಡಿ ಆಂತರಿಕ ತನಿಖೆಗೆ ಆದೇಶಿಸಿದೆ. ಬುರ್ಖಾ ಧರಿಸಿ ವಿಧ್ಯಾರ್ಥಿಗಳು ನೃತ್ಯ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಮುಸ್ಲೀಂ ಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಲೇಜು ಆಡಳಿತ ಮಂಡಳಿ, ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವಿಧ್ಯಾರ್ಥಿಗಳೇ

ಮಂಗಳೂರು: ಬುರ್ಖಾ ಧರಿಸಿ ವಿದ್ಯಾರ್ಥಿಗಳ ಅಶ್ಲೀಲ ಡ್ಯಾನ್ಸ್| ನಾಲ್ವರನ್ನು ಸಸ್ಪೆಂಡ್ ಮಾಡಿದ ಪ್ರಿನ್ಸಿಪಾಲ್ Read More »

ಕತಾರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಫಹದ್ ಸಾವು

ಸಮಗ್ರ ನ್ಯೂಸ್: ಕತಾರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹದ್ ಮೃತಪಟ್ಟ ಯುವಕ. ಈತಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ ಕಾರಣದಿಂದ ಊರಿಗೆ ಬಂದು ಒಂದು ವರ್ಷ ಕಾಲ ಊರಿನಲ್ಲೇ ಚಾಲಕ ವೃತ್ತಿ ಮಾಡುತ್ತಿದ್ದ. ಬಳಿಕ ಕಳೆದ ಐದು ತಿಂಗಳ ಹಿಂದೆ ಕತಾರಿಗೆ ತೆರಳಿದ್ದ. ಮಂಗಳವಾರ ರಾತ್ರಿ ಅಪಘಾತ ನಡೆಯುವ

ಕತಾರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಫಹದ್ ಸಾವು Read More »

ಕೆಮ್ಮಿ,ಕೆಮ್ಮಿ ಮೂಳೆ ಮುರಿದುಕೊಂಡ ಮಹಿಳೆ

ಸಮಗ್ರ ನ್ಯೂಸ್: ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಅಥವಾ ಮೈ ಮೇಲೆ ಬಿದ್ದರೆಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಿದ್ದರೆ ಈ ಸುದ್ದಿ ಓದಿ. ಹೌದು ಚೀನಾದ ಮಹಿಳೆಯೊಬ್ಬಳು ಕೆಮ್ಮಿನ ಕಾರಣಕ್ಕೆ ತನ್ನ ನಾಲ್ಕು ಮೂಳೆಗಳನ್ನು ಮುರಿದುಕೊಂಡಿದ್ದಾಳೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಅತಿಯಾದ ಖಾರ ಪದಾರ್ಥ ಸೇವನೆ. ಈ ಮಹಿಳೆ ಇತ್ತೀಚೆಗೆ ಹೋಟೆಲ್ ಗೆ ಊಟಕ್ಕೆ ತೆರಳಿದಾಗ ಅತಿ ಖಾರದ ಆಹಾರ ಸೇವಿಸಿದ್ದಾಳೆ. ಇದರಿಂದಾಗಿ ಕಣ್ಣಿನಲ್ಲಿ

ಕೆಮ್ಮಿ,ಕೆಮ್ಮಿ ಮೂಳೆ ಮುರಿದುಕೊಂಡ ಮಹಿಳೆ Read More »

ಧಾರವಾಡ: ಲಾಡ್ಜ್ ನಲ್ಲಿ ನೇಣಿಗೆ ಕೊರಳೊಡ್ಡಿದ ಯುವಜೋಡಿ

ಸಮಗ್ರ ನ್ಯೂಸ್: ಲಾಡ್ಜ್​ನಲ್ಲಿ ಯುವಕ ಹಾಗೂ ಯುವತಿ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಇಬ್ಬರೂ ಬಸ್ ನಿಲ್ದಾಣದ ಪಕ್ಕದ ಲಾಡ್ಜ್​ಗೆ ತೆರಳಿದ್ದರು.‌ ಅದೇ ದಿನ ಸಂಜೆ ವೇಳೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಯುವಕ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದವನು ಎನ್ನಲಾಗಿದೆ. ಇಬ್ಬರ ನಡುವಿನ ಪ್ರೀತಿ ವಿಚಾರದಲ್ಲಿ ಸಮಸ್ಯೆ ಉಂಟಾಗಿರುವುದೇ ಆತ್ಮಹತ್ಯೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ನವಲಗುಂದ ಪೊಲೀಸ್​

ಧಾರವಾಡ: ಲಾಡ್ಜ್ ನಲ್ಲಿ ನೇಣಿಗೆ ಕೊರಳೊಡ್ಡಿದ ಯುವಜೋಡಿ Read More »

ಸುಳ್ಯ: ಕಾಂತಾರ ಸಿನಿಮಾ ನೋಡಲು ಬಂದ ಮುಸ್ಲಿಂ ಜೋಡಿಗೆ ಥಳಿಸಿದ ಮುಸ್ಲಿಂ ಯುವಕರು!?

ಸಮಗ್ರ ನ್ಯೂಸ್: ‘ಕಾಂತಾರ’ ಸಿನಿಮಾ ವೀಕ್ಷಣೆಗೆಂದು ಬಂದ ಮುಸ್ಲಿಂ ಯುವಜೋಡಿಯ ಮೇಲೆ ಮುಸ್ಲಿಂ ಯುವಕರ ಗುಂಪೊಂದು ದಾಳಿ ನಡೆಸಿ ಥಳಿಸಿದ ಘಟನೆ ಸುಳ್ಯದ ಸಂತೋಷ್ ಚಿತ್ರಮಂದಿರದ ಬಳಿ ನಡೆದಿದೆ. ಡಿ.7ರಂದು ಈ ಘಟನೆ ನಡೆದಿದ್ದು, ಯುವಕ ಮತ್ತು ಯುವತಿ ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಸಿನಿಮಾ ನೋಡಲು ಬಂದವರು ಮಾತನಾಡುತ್ತಾ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಇದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಯುವಕರ ಗುಂಪೊಂದು ಯುವಕ ಮತ್ತು ಯುವತಿಯನ್ನು ಪ್ರಶ್ನಿಸಿದ್ದು, ಬಳಿಕ ಯುವಕನಿಗೆ ಥಳಿಸಿದರೆನ್ನಲಾಗಿದೆ. ಬಳಿಕ ‘ಕಾಂತಾರ’

ಸುಳ್ಯ: ಕಾಂತಾರ ಸಿನಿಮಾ ನೋಡಲು ಬಂದ ಮುಸ್ಲಿಂ ಜೋಡಿಗೆ ಥಳಿಸಿದ ಮುಸ್ಲಿಂ ಯುವಕರು!? Read More »

ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ

ಆರೋಗ್ಯ ಸಮಾಚಾರ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ, ಈ ಬಗ್ಗೆ ವೈದ್ಯರು ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಇಲ್ಲಿ ತಿಳಿಸಿದ್ದಾರೆ. ಬದಲಾದ ಆಹಾರ ಕ್ರಮ, ಜೀವನಶೈಲಿಯಿಂದಾಗಿ ಮನುಷ್ಯನಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಮನ್‌ ಎಂಬಂತಾಗಿದೆ. ಪ್ರತಿಯೊಬ್ಬರೂ ಆಗಾಗ ನಂಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಅಂತಾ ಹೇಳಿಕೊಳ್ತಿರ‍್ತಾರೆ. ಸಣ್ಣ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹಲವರು ನಿರ್ಲಕ್ಷಿಸುವುದೂ ಉಂಟು. ಕೆಲವೊಮ್ಮೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ, ಅದು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಕೆಲವರು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ನಿರಂತರ ಎದೆನೋವನ್ನು ಹಾಗೆ ನೆಗ್ಲೆಕ್ಟ್‌ ಮಾಡುವುದು ಸರಿಯಲ್ಲ.

ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ Read More »

ದೆಹಲಿ ಮ.ನ.ಪಾ ಚುನಾವಣೆ| ಹದಿನೈದು ವರ್ಷಗಳ ಬಿಜೆಪಿ ಯುಗವನ್ನು ಗುಡಿಸಿದ ಆಪ್

ಸಮಗ್ರ ನ್ಯೂಸ್: 250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದೆ. ಭಾರತೀಯ ಜನತಾ ಪಕ್ಷ 105 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್‌ಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿದೆ. 250 ವಾರ್ಡ್‌ಗಳ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು 126 ಸದಸ್ಯರ ಬಹುಮತ ಬೇಕಾಗಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ

ದೆಹಲಿ ಮ.ನ.ಪಾ ಚುನಾವಣೆ| ಹದಿನೈದು ವರ್ಷಗಳ ಬಿಜೆಪಿ ಯುಗವನ್ನು ಗುಡಿಸಿದ ಆಪ್ Read More »