ಸಮಗ್ರ ಸಮಾಚಾರ

ಜೀವನ್ಮರಣ ಹೋರಾಟದಲ್ಲಿದ್ದ 9 ಜನರ ರಕ್ಷಿಸಿದ ನೌಕಾಪಡೆ: ಸೇನಾ‌ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ

ಮಂಗಳೂರು , ಮೇ 17:ತೌಕ್ತೆ ಚಂಡಮಾರುತ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿ ಟಗ್ ನಲ್ಲಿದ್ದ 9 ಮಂದಿ ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆ, ಸ್ಥಳೀಯ ಪೊಲೀಸರೊಂದಿಗೆ ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಕೊಚ್ಚಿನ್ ನಿಂದ ಆಗಮಿಸಿರುವ ನೌಕಾ ಪಡೆಯ ಹೆಲಿಕಾಪ್ಟರ್, ಮಂಗಳೂರಿಗೆ ತಲುಪಿ ಅಲ್ಲಿಂದ ಬಳಿಕ ಟಗ್ ಸಿಲುಕಿರುವ ಕಾಪುವಿನತ್ತ ತೆರಳಿ ಮುಂಜಾನೆಯಿಂದ ಕಾರ್ಯಾಚರಣೆ ನಡೆಸಿ ಎಲ್ಲಾ ಸಿಬ್ಬಂದಿಗಳನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದೆ. ಸಂಸದ […]

ಜೀವನ್ಮರಣ ಹೋರಾಟದಲ್ಲಿದ್ದ 9 ಜನರ ರಕ್ಷಿಸಿದ ನೌಕಾಪಡೆ: ಸೇನಾ‌ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿ Read More »

ಪುತ್ತೂರು ಭೀಕರ ಅಪಘಾತ: ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಮೃತ್ಯು

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. ೧೭ರಂದು ಬೆಳಗ್ಗಿನ ಜಾವ ನಡೆದಿದೆ. ಸ್ಕೂಟರ್ ಸವಾರ ಬೆಳ್ಳಾರೆ ಕೋಡಿಬೈಲು ನಿವಾಸಿ ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಸತ್ಯನಾರಾಯಣ ಭಟ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಬೆಳ್ಳಾರೆಯಿಂದ ಮಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿ ರಭಸಕ್ಕೆ ಸ್ಕೂಟರ್ ಸವಾರ

ಪುತ್ತೂರು ಭೀಕರ ಅಪಘಾತ: ಕೋಡಿಬೈಲು ಕೃಷಿ ಏಜೆನ್ಸೀಸ್‌ನ ಮಾಲಕ ಮೃತ್ಯು Read More »

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ 

ಉಡುಪಿ: ಹಿರಿಯಡ್ಕದ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ  ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಡಿಬೆಟ್ಟು ನಿವಾಸಿ ದಾಕ್ಷಾಯಿಣಿ(47) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವಿವಾಹಿತೆಯಾಗಿದ್ದು ಇವರು ಅನಾಥಾಶ್ರಮದ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ನೊಂದುಕೊಂಡಿದ್ದು  ಸೂಕ್ತ ಚಿಕಿತ್ಸೆ ಇಲ್ಲದೆ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಕಳೆದ ಐದು ತಿಂಗಳಿನಿಂದ ವರಂಬಳ್ಳಿ ಬಳಿಯ ‘ಅಪ್ಪ-ಅಮ್ಮ’ ಅನಾಥಾಶ್ರಮದಲ್ಲಿ ಆಕೆಗೆ ಆಶ್ರಯ ನೀಡಲಾಗಿತ್ತು. ಆದರೆ, ಮೇ. 16 ರಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ

ಉಡುಪಿ: ಅನಾಥಾಶ್ರಮದಲ್ಲಿದ್ದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ  Read More »

ದೆಹಲಿಯಲ್ಲಿ ಮನೆಬಾಗಿಲಿಗೆ ಆಕ್ಸಿಜನ್ ಬ್ಯಾಂಕ್: ಕೇಜ್ರಿವಾಲ್

ನವದೆಹಲಿ: ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಉತ್ತೇಜನ ನೀಡಲು ದೆಹಲಿಯ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹೋಂ ಐಸೋಲೇಶನ್ ನಲ್ಲಿರುವು ಕೋವಿಡ್ ಸೋಂಕಿತರು ಈ ಆಮ್ಲಜನಕ ಸಾಂದ್ರಕಗಳನ್ನು ತಮ್ಮ ಮನೆಗೆ ತಲುಪಿಸಲು ಕೇಳಬಹುದು.ಇಂದಿನಿಂದ ಈ ಸೇವೆಯನ್ನು ಪ್ರಾರಂಭಿಸಿದ್ದು, ಪ್ರತಿ ಜಿಲ್ಲೆಯಲ್ಲೂ 200 ಆಮ್ಲಜನಕ ಸಿಲಿಂಡರ್ ಗಳನ್ನು ಹೊಂದಿರುವ ಬ್ಯಾಂಕ್ ಇರುತ್ತದೆ. ಕೋವಿಡ್ ರೋಗಿಗಳು ಅಗತ್ಯವಿದ್ದಾಗ ಆಮ್ಲಜನಕ ಸಿಗದ ಕಾರಣ ಹೆಚ್ಚಾಗಿ ಐಸಿಯುಗಳಿಗೆ ಪ್ರವೇಶ ಪಡೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ

ದೆಹಲಿಯಲ್ಲಿ ಮನೆಬಾಗಿಲಿಗೆ ಆಕ್ಸಿಜನ್ ಬ್ಯಾಂಕ್: ಕೇಜ್ರಿವಾಲ್ Read More »

ಬಿಜೆಪಿ ಅಧಿಕಾರದಲ್ಲಿರದಿದ್ದರೆ ಕೊರೊನ ನಿರ್ವಹಣೆ ಕಷ್ಟವಾಗುತ್ತಿತ್ತು – ನಳೀನ್ ಕುಮಾರ್ ಕಟೀಲ್

ಬೆಂಗಳೂರು: ದೇಶದಲ್ಲಿ ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಬಿಜೆಪಿ ಹೊರತು ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳೀನ್ ಕುಮಾರ್ ಕಟೀಲ್ ಸರಣಿ ಟ್ವಿಟ್ ಗಳ ಮೂಲಕ ಇಂತಹ ಹೇಳಿಕೆ ನೀಡಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿ ಸಮಯದಲ್ಲಿಯೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಟೀಲ್ ರ ಸಮರ್ಥನೆ ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.ದೇಶವನ್ನು ಬಹುಕಾಲ ಆಳಿದ

ಬಿಜೆಪಿ ಅಧಿಕಾರದಲ್ಲಿರದಿದ್ದರೆ ಕೊರೊನ ನಿರ್ವಹಣೆ ಕಷ್ಟವಾಗುತ್ತಿತ್ತು – ನಳೀನ್ ಕುಮಾರ್ ಕಟೀಲ್ Read More »

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ತಂತಿ ದುರಸ್ತಿಗೊಳಿಸುತ್ತಿದ್ದಾಗ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ತೆಕ್ಕಾರು ಸಮೀಪದ ಪಿಂಡಿಕಲ್ಲು ಎಂಬಲ್ಲಿ ನಡೆದಿದೆ.ಕಲ್ಲೇರಿ ಸೆಕ್ಷನ್ ಮೆಸ್ಕಾಂನ ಲೈನ್ ಮ್ಯಾನ್ ವಿಕಾಸ್ ಮೃತಪಟ್ಟವರು. ಇವರು ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಾಗಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಸ್ಥಳದಲ್ಲಿ ಕಂಬದ ಮೇಲೆ ದುರಸ್ತಿಕಾರ್ಯ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬೇಟಿ ನೀಡಿದ್ದು,

ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು Read More »

ವಿರಾಟ್ ಒಬ್ಬ ಚಾಂಪಿಯನ್ ಆಟಗಾರ: ಟಿಮ್ ಪೇನ್

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸೀಸ್ ನಾಯಕ, ‘ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್. ನಾನು ಯಾವತ್ತೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಚಾಂಪಿಯನ್ ಪ್ಲೇಯರ್. ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡುವ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸುತ್ತಾರೆ. ನಾನು ಕೊಹ್ಲಿ ಅವರನ್ನು ಮತ್ತು ಅವರ ಆಟವನ್ನು ತುಂಬಾ ಇಷ್ಟಪಡುತ್ತೇನೆ. ಅವರ ಚಾಲೆಂಜಿಂಗ್

ವಿರಾಟ್ ಒಬ್ಬ ಚಾಂಪಿಯನ್ ಆಟಗಾರ: ಟಿಮ್ ಪೇನ್ Read More »

ನನ್ನನ್ನು ಬಂಧಿಸಿ: ರಾಹುಲ್ ಗಾಂಧಿ ಟ್ವೀಟ್

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆಡಳಿತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವಿನ ಕುರಿತಾಗಿ ಟ್ವೀಟ್ ಮಾಡುತ್ತಾ ಜಾಗೃತಿ, ಎಚ್ಚರಿಕೆ ನೀಡುತ್ತಿರುವ ಜೊತಗೆ ಇದೀಗ ನನ್ನನ್ನು ಬಂಧಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಕೆಲವು ಗೋಡೆಗಳ ಮೇಲೆ ಮೋದಿ ವಿರುದ್ಧ ಗೋಡೆ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ದೆಹಲಿ ಪೊಲೀಸರು ೧೭ ಜನರನ್ನು ಬಂಧಿಸಿ ಅವರ ವಿರುದ್ಧವಾಗಿ ೨೧ ಕೇಸ್‌ಗಳನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಂತಹ ಒಂದು ಟ್ವೀಟ್

ನನ್ನನ್ನು ಬಂಧಿಸಿ: ರಾಹುಲ್ ಗಾಂಧಿ ಟ್ವೀಟ್ Read More »

ಸಾಯೋರು ಎಲ್ಲಾದರೂ ಸಾಯಲಿ: ಬಿಜೆಪಿ ಶಾಸಕ

ಚಿತ್ರದುರ್ಗ: ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ. ನನಗೆ ಅವಶ್ಯಕತೆ ಇಲ್ಲ. ಸಾಯೋರು ಎಲ್ಲಾದರೂ ಸಾಯಲಿ ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಳಲ್ಕೆರೆ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಟೀಕೆಗೆ ಗುರಿಯಾಗಿದ್ದಾರೆ.ಜಿಲ್ಲೆಯಲ್ಲಿ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಎಂ.ಚಂದ್ರಪ್ಪ, ಡಿಹೆಚ್‌ಓ ಡಾ.ಪಾಲಾಕ್ಷಗೆ ಹೇಳಿದ ವೀಡಿಯೋ ಸಂಭಾಷಣೆ ಇದಾಗಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ೫೦ ಬೆಡ್‌ನ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಶಾಸಕರು ತಿಳಿಸಿದ್ದರು. ಆದರೆ ೧೦ ಆಕ್ಸಿಜನ್ ಬೆಡ್ ನಿರ್ಮಾಣದ ಬಗ್ಗೆ

ಸಾಯೋರು ಎಲ್ಲಾದರೂ ಸಾಯಲಿ: ಬಿಜೆಪಿ ಶಾಸಕ Read More »

ನೀವೆಲ್ಲಿದ್ದೀರೋ ಅಲ್ಲಿಗೆ ಬಂದು ಬೆಳೆ ಖರೀದಿಸ್ತಿನಿಯೆಂದ ಉಪೇಂದ್ರ

ಬೆಂಗಳೂರು: ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಸಿನಿ ಕಾರ್ಮಿಕರ ನೇರವಿಗೆ ನಿಂತಿದ್ದ ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಇದೀಗ ರೈತರು ಬೆಳೆದಿರುವ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದಾರೆ. ಲಾಕ್‍ಡೌನ್ ನಿಂದ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಂದ ತರಕಾರಿ ಖರೀದಿಸಿ ಅವಶ್ಯಕತೆ ಇರುವವರಿಗೆ ಹಂಚಲು ಮುಂದಾಗಿದ್ದಾರೆ ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಬೆಳೆಗಳನ್ನು ಎಲ್ಲಿ ಬೆಳದಿದ್ದಾರೋ ಅವರಿರುವ ಜಾಗಕ್ಕೆ ತೆರಳಿ

ನೀವೆಲ್ಲಿದ್ದೀರೋ ಅಲ್ಲಿಗೆ ಬಂದು ಬೆಳೆ ಖರೀದಿಸ್ತಿನಿಯೆಂದ ಉಪೇಂದ್ರ Read More »