ಸಮಗ್ರ ಸಮಾಚಾರ

ಕಾರ್ಕಳ : ಕೊರೊನಾ ಮಾರ್ಗಸೂಚಿ ಉಲ್ಲಂಘನೆ – ಕೇಸು ದಾಖಲು

ಕಾರ್ಕಳ, ಮೇ.18: ರಾಜ್ಯ ಸರಕಾರ  ಹಾಗೂ ಜಿಲ್ಲಾಡಳಿತವು ಹೊರಡಿಸಿದ ಕೊರೊನಾ ಕರ್ಫ್ಯೂ  ಮಾರ್ಗಸೂಚಿಯನ್ನು ಉಲ್ಲಂಘಿಸಿ  ವ್ಯಾಪಾರದಲ್ಲಿ ತೊಡಗಿಸಿದ ವ್ಯಾಪಾರಿಯೊಬ್ಬರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಸಾಣೂರು ಗ್ರಾಮದ ಕುಂಟಲ್ಪಾ‌ಡಿ ನಿವಾಸಿ ಪ್ರಕಾಶ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಕುಂಟಲ್ಪಾಡಿಯಲ್ಲಿ ತನ್ನ ಮಾಲಕತ್ವದಲ್ಲಿರುವ ಅಂಗಡಿಯನ್ನು ಸಂಜೆ 6:30ಕ್ಕೆ ತೆರೆದು ವ್ಯಾಪಾರ ನಡೆಸುತಿದ್ದರು. ಈ  ಬಗ್ಗೆ  ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆ ಬಳಿಕ ಅಂಗಡಿಯನ್ನು ಮುಚ್ಚಿಸಿ ಆರೋಪಿ ಪ್ರಕಾಶ್ ವಿರುದ್ಧ ಪ್ರಕರಣದ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ : ಕೊರೊನಾ ಮಾರ್ಗಸೂಚಿ ಉಲ್ಲಂಘನೆ – ಕೇಸು ದಾಖಲು Read More »

ಪಡಿತರದಲ್ಲಿ ಕರಾವಳಿ ಜನರಿಗೆ ಸಿಗುತ್ತೆ ಕೆಂಪು ಕುಚಲಕ್ಕಿ!

ಮಂಗಳೂರು, ಮೇ 18: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಭಾಗದ ಜನ ಊಟಕ್ಕೆ ಬಳಸುವ ಕೆಂಪು ಕುಚಲಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ ಪೂರೈಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದ್ದು, ಕೆಂಪು ಕುಚ್ಚಲಕ್ಕಿಯನ್ನು ಸ್ಥಳೀಯ ಗಿರಣಿಗಳ ಮೂಲಕ ಸಂಸ್ಕರಿಸಿ ಪಡಿತರ ಅಂಗಡಿಗಳ ಮೂಲಕ ಗುಣಮಟ್ಟದ ಅಕ್ಕಿ ವಿತರಿಸಲು ಸರ್ಕಾರ ಅಗತ್ಯ ಯೋಜನೆ ರೂಪಿಸುತ್ತಿದೆ. ದಕ್ಷಿಣ ಕನ್ನಡ

ಪಡಿತರದಲ್ಲಿ ಕರಾವಳಿ ಜನರಿಗೆ ಸಿಗುತ್ತೆ ಕೆಂಪು ಕುಚಲಕ್ಕಿ! Read More »

ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಎಬಿಡಿ. ಅಷ್ಟಕ್ಕೂ ಅವರೇನು ಹೇಳಿದ್ರು?

ಮೆಲ್ಬೋರ್ನ್.ಮೇ.18: ಆಧುನಿಕ ಕ್ರಿಕೆಟ್‌ ಲೋಕದ  ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ವಾಪಾಸ್ಸಾಗ್ತಾರೆ ಅಂತ  ಚಾತಕ ಪಕ್ಷಿಯಂತೆ ಕಾದುಕುಳಿತಿದ್ದ ಅಭಿಮಾನಿಗಳ ಪಾಲಿಗೆ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಏನು ಹೇಳಿದ್ರು?. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್‌ ದ.ಆಫ್ರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿರೀಕ್ಷೆ ಕೊನೆಗೂ ಸುಳ್ಳಾದಂತೆ ಆಗಿದೆ.ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ  ಎಂದು

ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಎಬಿಡಿ. ಅಷ್ಟಕ್ಕೂ ಅವರೇನು ಹೇಳಿದ್ರು? Read More »

ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಎಬಿಡಿ. ಅಷ್ಟಕ್ಕೂ ಅವರೇನು ಹೇಳಿದ್ರು?

ಮೆಲ್ಬೋರ್ನ್.ಮೇ.18: ಆಧುನಿಕ ಕ್ರಿಕೆಟ್‌ ಲೋಕದ  ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ವಾಪಾಸ್ಸಾಗ್ತಾರೆ ಅಂತ  ಚಾತಕ ಪಕ್ಷಿಯಂತೆ ಕಾದುಕುಳಿತಿದ್ದ ಅಭಿಮಾನಿಗಳ ಪಾಲಿಗೆ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಏನು ಹೇಳಿದ್ರು?. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್‌ ದ.ಆಫ್ರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿರೀಕ್ಷೆ ಕೊನೆಗೂ ಸುಳ್ಳಾದಂತೆ ಆಗಿದೆ.ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ  ಎಂದು

ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಎಬಿಡಿ. ಅಷ್ಟಕ್ಕೂ ಅವರೇನು ಹೇಳಿದ್ರು? Read More »

ಲಸಿಕೆಗೆ ಬಗ್ಗೆ ಅಪಪ್ರಚಾರ, ಜನರಿಗೆ ಭಯ ಹುಟ್ಟಿಸಿದ್ದೇ ಕಾಂಗ್ರೇಸ್: ಕುಮಾರಸ್ವಾಮಿ

ಬೆಂಗಳೂರು: ದೇಶದಲ್ಲಿ ಲಸಿಕೆ ಅಭಿಯಾನ ಸರಿಯಾಗಿ ಆಗದೇ ಇರೋದಕ್ಕೆ ಮತ್ತು ಅಪಪ್ರಚಾರ ಮಾಡಿದ್ದು, ಜನರಿಗೆ ಭಯ ಹುಟ್ಟಲು ಕಾಂಗ್ರೆಸ್ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ನೀಡಲು ೧೦೦ ಕೋಟಿ ರೂ. ಕೊಡುವುದಾಗಿ ಹೇಳುತ್ತಿರೋ ಕಾಂಗ್ರೆಸ್ ವರ್ತನೆಗೆ ಕಿಡಿಕಾರಿದರು. ಕಾಂಗ್ರೆಸ್ ಶಾಸಕರು ಅ ಹಣವನ್ನು ಕೈಯಿಂದ ಕೊಡುತ್ತಿಲ್ಲ. ಶಾಸಕರ ಕ್ಷೇತ್ರ ಅಭಿವೃದ್ಧಿ ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದರು. ಆದರೆ ಲಸಿಕೆ

ಲಸಿಕೆಗೆ ಬಗ್ಗೆ ಅಪಪ್ರಚಾರ, ಜನರಿಗೆ ಭಯ ಹುಟ್ಟಿಸಿದ್ದೇ ಕಾಂಗ್ರೇಸ್: ಕುಮಾರಸ್ವಾಮಿ Read More »

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಬಂಟ್ವಾಳ: ಕಳೆದು ಎರಡು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಂಟ್ವಾಳ ಬಿ.ಕಸ್ಬಾ ಗ್ರಾಮದ ಮುಗ್ಡಾಲ್ ಗುಡ್ಡೆ ನಿವಾಸಿ ವಿನಯ್ (೨೪) ಮೃತಪಟ್ಟ ಯುವಕ. ಮಾ.೧೦ ರಂದು ಪಾಣೆಮಂಗಳೂರು ಅಕ್ಕರಂಗಡಿ ಎಂಬಲ್ಲಿ ಪಿಕಪ್ ಜೀಪ್ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ವಿನಯ್ ಅವರ ತಲೆಗೆ ಗಾಯವಾಗಿದ್ದು, ಅವರು ಕೋಮಾ ಅವಸ್ಥೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು Read More »

ವಿಶ್ವಸುಂದರಿ ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ. ಯಾರೀ ಸುಂದರಿ ಗೊತ್ತಾ..?

ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ 69ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉದ್ಯಾವರ ಮೂಲದ ಆ್ಯಡ್ಲಿನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. 22ರ ಹರೆಯದ ಆ್ಯಡ್ಲಿನ್ ಕ್ಯಾಸ್ಟೆಲಿನೋ, ಉದ್ಯಾವರ ಮೂಲದ ಅಲ್ಫೋನ್ಸಸ್ ಕ್ಯಾಸ್ಟೆಲಿನೊ ಮತ್ತು ಮೀರಾ ಕ್ಯಾಸ್ಟೆಲಿನೊ ದಂಪತಿ ಪುತ್ರಿ. ವಿವಿಧ ಆನ್‌ಲೈನ್ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ನೇರವಾಗಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದ್ದರು. ಕುವೈತ್ ನಲ್ಲಿ ಹುಟ್ಟಿ ಬೆಳೆದು, ಮುಂಬೈನಲ್ಲಿ ಪ್ರೌಢ

ವಿಶ್ವಸುಂದರಿ ರನ್ನರ್ ಅಪ್ ಸ್ಥಾನ ಪಡೆದ ಕರಾವಳಿ ಬೆಡಗಿ. ಯಾರೀ ಸುಂದರಿ ಗೊತ್ತಾ..? Read More »

ಕನ್ನಡ ನೆಲದ ಹೆಮ್ಮೆಯ ಸುಪುತ್ರ ಹೆಚ್.ಡಿ.ದೇವೇಗೌಡ

ಶ್ರೀ ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕೃತಿ ಪರಂಪರೆಯ ಪ್ರಶಂಸಕರು. ಇವರು ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಶ್ರೀದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ

ಕನ್ನಡ ನೆಲದ ಹೆಮ್ಮೆಯ ಸುಪುತ್ರ ಹೆಚ್.ಡಿ.ದೇವೇಗೌಡ Read More »

ಲಾಕ್‍ಡೌನ್ ಹೇರಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‌ಜಿಲ್ಲೆಗೆ ಅನುಗುಣವಾಗುವಂತೆ ಕ್ರಮ ಕೈಗೊಳ್ಳಿ ಎಂದು ಹೇಳುವ ಮೂಲಕ ಲಾಕ್ ಡೌನ್ ಸಂಬಂಧ ಸಂಪೂರ್ಣ ಅಧಿಕಾರವನ್ನು ಡಿಸಿಗಳ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಪ್ರಧಾನಿ ತಿಳಿಸಿದ್ದಾರೆ. ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಇಂದಿನ ಸಭೆಯಲ್ಲಿ

ಲಾಕ್‍ಡೌನ್ ಹೇರಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಪ್ರಧಾನಿ ಮೋದಿ Read More »

ಪುತ್ತೂರು | ಡಿವೈಡರ್ ಗೆ ಕಾರು ಢಿಕ್ಕಿ; ಚಾಲಕ ಸಾವು

ಪುತ್ತೂರು: ಪುತ್ತೂರಿನ ಕೆಮ್ಮಾಯಿಯಲ್ಲಿ ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಡಿವೈಡರ್ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ದುರ್ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು. ಕಾರು‌ ರಸ್ತೆ ಡಿವೈಡರ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದು ಅವರನ್ನು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಸಹಾಯದೊಂದಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ

ಪುತ್ತೂರು | ಡಿವೈಡರ್ ಗೆ ಕಾರು ಢಿಕ್ಕಿ; ಚಾಲಕ ಸಾವು Read More »