ಸಮಗ್ರ ಸಮಾಚಾರ

ಶ್ರೀಲಂಕಾ ಪ್ರವಾಸಕ್ಕೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

ಮಂಬೈ: ಮುಂದಿನ ತಿಂಗಳು ಸೀಮಿತ ಓವರ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಬ್ಯಾಟ್ಸ್ ಮ್ಯಾನ್ ‘ಭಾರತದ ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಭಾರತದ ಒಂದು ತಂಡ ಮುಂದಿನ ಎರಡು ತಿಂಗಳುಗಳಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅದೇ ಸಮಯ ಭಾರತದ ಇನ್ನೊಂದು ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ […]

ಶ್ರೀಲಂಕಾ ಪ್ರವಾಸಕ್ಕೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ Read More »

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ

ಪಂಜಾಬ್‌: ಶುಕ್ರವಾರ ಮುಂಜಾನೆ ಪಂಜಾಬ್‌ನ ಮೊಗಾ ಬಳಿ ನಡೆದ ಮಿಗ್ -21 ವಿಮಾನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಮೊಗಾದ ಬಾಗಾಪುರಾನದ ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ಐಎಎಫ್‌ನ ಮಿಗ್ -21 ಅಪಘಾತಕ್ಕೀಡಾಗಿದೆ. ಘಟನೆಯು ವಾಡಿಕೆಯ ತರಬೇತಿ ಹಂತದಲ್ಲಿ ನಡೆದಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ ಪೈಲೇಟ್ ವಿಮಾನದಿಂದ ಹೊರಗೆಸೆಯಲ್ಪಟ್ಟಿದ್ದು, ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ Read More »

ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪಿಣರಾಯಿ, ಶೈಲಜಾ ಟೀಚರ್ ಗಿಲ್ಲ ಸಚಿವ ಸ್ಥಾನ….!

ತಿರುವನಂತಪುರಂ: ಕೇರಳ ರಾಜ್ಯದ ಮುಖ್ಯಮಂತ್ರಿ ಎರಡನೇ ಬಾರಿಗೆ ಪಿಣರಾಯಿ ವಿಜಯನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆ ತಿರುವನಂತಪುರಂನ ಸ್ಟೇಡಿಯಂ ಒಂದರಲ್ಲಿ ಕೇರಳ ಹೈಕೋರ್ಟ್ ಆದೇಶದಂತೆ ಸರಳವಾಗಿ ನಡೆದ ಸಮಾರಂಭದಲ್ಲಿ ಎಲ್ ಡಿ ಎಫ್ ಮೈತ್ರಿಕೂಟದ ಇತರೆ 20 ಸಚಿವರೊಂದಿಗೆ ವಿಜಯನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿರೋಧ ಪಕ್ಷ ಯುಡಿಎಫ್ ಸದಸ್ಯರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ಕೋರ್ಟ್ ಆದೇಶವನ್ನು ಪಾಲಿಸುವ ದೃಷ್ಟಿಯನ್ನು ಹಾಜರಾಗಿಲ್ಲ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಸ್ಪಷ್ಟೀಕರಿಸಿದ್ದಾರೆ. ಹೊಸಬರಿಗೆ ಸಚಿವಸ್ಥಾನ ನೀಡಲಾಗಿದ್ದರೂ, ಕಳೆದ ಬಾರಿ ರಾಜ್ಯ ಸರ್ಕಾರದಲ್ಲಿ ಆರೋಗ್ಯ

ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪಿಣರಾಯಿ, ಶೈಲಜಾ ಟೀಚರ್ ಗಿಲ್ಲ ಸಚಿವ ಸ್ಥಾನ….! Read More »

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ

ನವದೆಹಲಿ: ಕೊರೋನಾ ಸೋಂಕಿಗೆ ಒಳಗಾಗಿ ದುಡಿದು ಸಾಕುವ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿನಂತಿಸಿಕೊಂಡಿದ್ದಾರೆ. ಇದಕ್ಕಾಗಿ ದೇಶವ್ಯಾಪಿ ಇರುವ ನವೋದಯ ವಿದ್ಯಾಲಯಗಳನ್ನು ಬಳಸಿಕೊಳ್ಳಬಹುದೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.ಇದರೊಂದಿಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯನ್ನು ಮತ್ತೆ ಸ್ಮರಿಸಿಕೊಂಡಾಗುತ್ತದೆ ಎಂದು ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗೆ ನೆರವಾಗಿ,

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ Read More »

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ವಿಧಿವಶ

ಬೆಳಗಾವಿ: ಮಾಜಿ ಕೇಂದ್ರ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಬಾಬಾಗೌಡ ಪಾಟೀಲ್ ಕಳೆದ 15 ದಿನಗಳಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಬಾಬಾಗೌಡ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಬೆಳಗಾವಿಯ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಪಾಟೀಲ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ವಿಧಿವಶ Read More »

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ

ಬೆಂಗಳೂರು: ಕಳೆದೊಂದು ವರ್ಷದಲ್ಲಿ ಕೊರೋನ ಹಾವಳಿಯಿಂದ ವಿಶ್ವವೇ ಕಂಗೆಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಾವಳಿಗಳು ಹಾಗೂ  ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಬಲದಿಂದ ಭಾರತ ಸೇರಿದಂತೆ ಇತರ ರಾಷ್ಟ್ರಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಜನಸಂಖ್ಯೆಯಲ್ಲಿ ಬಹುದೊಡ್ಡ ರಾಷ್ಟ್ರಗಳು ಎಂದೆನಿಸಿಕೊಂಡಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತಹಂತವಾಗಿ ನಡೆಯುತ್ತಿದೆ. ಒಂದೇ ಹಂತದಲ್ಲಿ ಇಷ್ಟು ದೊಡ್ಡ ಜನಸಂಖ್ಯೆಗೆ ವ್ಯಾಕ್ಸಿನ್ ಪೂರೈಕೆ ಕಷ್ಟವಾಗಿರುವುದರಿಂದ ಸರಕಾರ ಹಂತ ಹಂತವಾಗಿ ವ್ಯಾಕ್ಸಿನ್ ನಿರ್ವಹಣೆ ಮಾಡುತ್ತಿದೆ. ಆದರೆ ಭ್ರಷ್ಟಾಚಾರದ ಕರಿನೆರಳು ವ್ಯಾಕ್ಸಿನೇಷನ್ ಗೂ ತಟ್ಟಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಇಲಾಖೆ

ಬೆಂಗಳೂರಿನಲ್ಲಿ ಅಕ್ರಮ ವ್ಯಾಕ್ಸೀನ್ ಮಾರಾಟ: ವೈದ್ಯೆ ಮತ್ತು ಸಹಚರರ ಬಂಧನ Read More »

ಸರ್ಕಾರ ಎಷ್ಟೇ ಮುಚ್ಚಿಟ್ಟರೂ ನನಗೆ ಮಾಹಿತಿ ಸಿಗುತ್ತದೆ: ಡಿಕೆಶಿ

ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದೆ ಎಂಬ ಮಾಹಿತಿ ನನಗೆ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಇದು ಸಂವಿಧಾನ ಬದ್ಧವಾಗಿ ಬಂದಿರುವ ಹುದ್ದೆ, ಅಧಿಕಾರ. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಿಲ್ಲೆ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ಮಾಡಿಲ್ಲವೇ? ಈ ಸಂಕಷ್ಟದ ಸಮಯದಲ್ಲಿ

ಸರ್ಕಾರ ಎಷ್ಟೇ ಮುಚ್ಚಿಟ್ಟರೂ ನನಗೆ ಮಾಹಿತಿ ಸಿಗುತ್ತದೆ: ಡಿಕೆಶಿ Read More »

ಲಾಕ್ ಡೌನ್ “ಇಕ್ಕಟ್” ನಲ್ಲಿ “ಲವ್ ಇನ್ ದ ಟೈಮ್ ಆಫ್ ಕೋವಿಡ್” ಕಂಪ್ಯೂಟರ್ ಸ್ಕ್ರೀನ್ ಫಾರ್ಮೆಟ್ ನಲ್ಲಿ ರೆಡಿಯಾಗಿದೆ ಎರಡು ಕನ್ನಡ ಸಿನಿಮಾ

ಬೆಂಗಳೂರು: ಕೋವಿಡ್ ಬಂದ ನಂತರ ಹಲವು ವರ್ಗದ ಜನ ಕೆಲಸ ಕಲೆದುಕೊಂಡರೆ, ಇನ್ನೂ ಕೆಲವರು ಹೊಸ ತಾಂತ್ರಿಕತೆಯನ್ನು ಬಳಸಿಕೊಳ್ತಿದ್ದಾರೆ. ಲಾಕ್ ಡವನ್ ನಿಂದ ಸಿನಿಮಾ ಮಂದಿರಗಳು ಮುಚ್ಚಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ‌ಹಲವರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಹೊಸ ತಂತ್ರಜ್ಞಾನ ಬಳಸಿ 2 ಸಿನಿಮಾಗಳು ಕನ್ನಡದಲ್ಲಿ ತಯಾರಾಗಿದೆ. ದೊಡ್ಡ ದೊಡ್ಡ ಸೆಟ್‌, ನೂರಾರು ಕಲಾವಿದರು, ದೊಡ್ಡ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ. ಹಾಗಂತ ಪ್ರತಿಭೆ ಲಾಕ್‌ ಆಗುವುದಿಲ್ಲ. ಸ್ಯಾಂಡಲ್‌ವುಡ್‌ನ ಕೆಲ ನಿರ್ದೇಶಕರು ಮನೆಯೊಳಗೆ

ಲಾಕ್ ಡೌನ್ “ಇಕ್ಕಟ್” ನಲ್ಲಿ “ಲವ್ ಇನ್ ದ ಟೈಮ್ ಆಫ್ ಕೋವಿಡ್” ಕಂಪ್ಯೂಟರ್ ಸ್ಕ್ರೀನ್ ಫಾರ್ಮೆಟ್ ನಲ್ಲಿ ರೆಡಿಯಾಗಿದೆ ಎರಡು ಕನ್ನಡ ಸಿನಿಮಾ Read More »

ಕ್ರೈಸ್ತರ ಅವಹೇಳನ ; ಸಂಸದೆ ಶೋಭಾ ವಿರುದ್ಧ ಎಫ್ಐಆರ್

ಮಂಗಳೂರು, ಮೇ 20: ಕ್ರೈಸ್ತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ, ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಲಸಿಕೆ ಪಡೆಯದಂತೆ ಕ್ರೈಸ್ತ ಸಮುದಾಯಕ್ಕೆ ಚರ್ಚ್ ಕಡೆಯಿಂದ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಹೇಳಿಕೆ ನೀಡಿದ್ದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ

ಕ್ರೈಸ್ತರ ಅವಹೇಳನ ; ಸಂಸದೆ ಶೋಭಾ ವಿರುದ್ಧ ಎಫ್ಐಆರ್ Read More »

ಲಾಕ್ ಡೌನ್ ನಡುವೆಯೂ ಶೂಟಿಂಗ್ : ಮಲೆಯಾಳಂ ಬಿಗ್‍ಬಾಸ್ ಮನೆಗೆ ಬೀಗ ಜಡಿದ ಪೊಲೀಸರು

ಚೆನ್ನೈ: ಕೊರೊನಾ ಲಾಕ್‍ಡೌನ್ ನಡುವೆ ನಡೆಯುತ್ತಿದ್ದ ಮಲೆಯಾಳಂನ ಬಿಗ್‍ಬಾಸ್ ಶೋನ ಶೂಟಿಂಗ್ ಸೆಟ್‍ಗೆ ದಾಳಿ ಮಾಡಿದ ಪೊಲೀಸರು ಬೀಗ ಜಡಿದಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ದೇಶದಲ್ಲಿ ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣಕ್ಕೆ ನಿಷೇಧವಿದೆ. ಆದರೆ ಮಲೆಯಾಳಂನ ಬಿಗ್‍ಬಾಸ್ ಶೋದ ಚಿತ್ರೀಕರಣ ಚೆನ್ನೈನ ಇವಿಪಿ ಫಿಲಂ ಸಿಟಿ ಚೆಂಬರಂಕ್ಕಂನಲ್ಲಿ ನಡೆಯುತ್ತಿತ್ತು. ಹಾಗಾಗಿ ಇಲ್ಲಿಗೆ ದಾಳಿ ಮಾಡಿದ ಕಂದಾಯ ವಿಭಾಗೀಯ ಅಧಿಕಾರಿ ತಿರುವಳ್ಳೂರು, ಪ್ರೀತಿ ಪಾರ್ಕವಿ ನೇತೃತ್ವದ ತಂಡ ಶೂಟಿಂಗ್ ಸೆಟ್‍ನಲ್ಲಿದ್ದವರನೆಲ್ಲ ಹೊರಹಾಕಿ ಸೆಟ್‍ಗೆ ಬೀಗ ಹಾಕಿದ್ದಾರೆ. ಕೆಲ ಮಾಹಿತಿಗಳ

ಲಾಕ್ ಡೌನ್ ನಡುವೆಯೂ ಶೂಟಿಂಗ್ : ಮಲೆಯಾಳಂ ಬಿಗ್‍ಬಾಸ್ ಮನೆಗೆ ಬೀಗ ಜಡಿದ ಪೊಲೀಸರು Read More »