ಸಮಗ್ರ ಸಮಾಚಾರ

ಗಂಡ ಹೊರಹೋದಾಗ ಹೆಂಡತಿ ನಂಬರ್ ಬ್ಯುಸಿ: ರೋಸಿಹೋದ ಪತಿರಾಯ ಏನ್ಮಾಡಿದ ಗೊತ್ತೇ?

ತಮಿಳುನಾಡು : ತಾನೆಷ್ಟೇ ಕರೆ ಮಾಡಿದರೂ  ಹೆಂಡತಿಯ ಫೋನ್ ಬ್ಯುಸಿ ಬಂದದ್ದೇ ಅವಳ ಪ್ರಾಣಕ್ಕೆ ಕುತ್ತು ತಂದಿದೆ. ಪದೇ ಪದೇ ಬ್ಯುಸಿ ಇದ್ದ ಹೆಂಡತಿಯನ್ನ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕನ್ಯಾಕುಮಾರಿಯ ವೆಲಿಚಂದೈ ಗ್ರಾಮದಲ್ಲಿ ನಡೆದಿದೆ.  ಉಮಾ ಕೊಲೆಯಾದ ಮಹಿಳೆ. ರಮೇಶ್ ಕೊಲೆ ಮಾಡಿದ ಆರೋಪಿ. ಉಮಾ ವೃತ್ತಿಯಲ್ಲಿ ಟೈಲರ್. ರಮೇಶ್ ಸೀಟ್ ಕವರ್ ಹಾಕುವ ಕೆಲಸ ಮಾಡುತ್ತಿದ್ದ. ಉಮಾ ಟೈಲರಿಂಗ್ ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಳಂತೆ. ಯೂಟ್ಯೂಬ್ ನೋಡಿ ಕಲಿಯೋದು, ಕಸ್ಟಮರ್ಸ್ ಜೊತೆ […]

ಗಂಡ ಹೊರಹೋದಾಗ ಹೆಂಡತಿ ನಂಬರ್ ಬ್ಯುಸಿ: ರೋಸಿಹೋದ ಪತಿರಾಯ ಏನ್ಮಾಡಿದ ಗೊತ್ತೇ? Read More »

ದಲಿತ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆ: ಚಿಕ್ಕಮಗಳೂರು ಪೊಲೀಸರ ಕೃತ್ಯಕ್ಕೆ ವ್ಯಾಪಕ ಖಂಡನೆ

ಚಿಕ್ಕಮಗಳೂರು. ಮೇ.22: ಇಲ್ಲಿನ‌ ಗೋಣೀಬೀಡು ಠಾಣೆ ಪಿಎಸ್‌ಐಯೋರ್ವರು ಆರೋಪಿಯೊರ್ವನ ಮೇಲೆ ವಿನಾಕಾರಣ ತೀವ್ರ ಹಲ್ಲೆ ನಡೆಸಿ, ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಜಿಲ್ಲೆಯ ಮೂಡಿಗೆರೆ ಬಳಿಯ ಕಿರಗುಂದದ ದಲಿತ ಯುವಕ ಕೆ.ಎಲ್.ಪುನೀತ್ ಎಂಬಾತ ಪೊಲೀಸರ ಮೇಲೆ ಆರೋಪ ನಡೆಸಿದ್ದು ಈ ಕುರಿತು ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳುವಂತೆ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೋರ್ವರ ಜೊತೆ ನನಗೆ ಅಕ್ರಮ ಸಂಬಂಧವಿದೆ

ದಲಿತ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆ: ಚಿಕ್ಕಮಗಳೂರು ಪೊಲೀಸರ ಕೃತ್ಯಕ್ಕೆ ವ್ಯಾಪಕ ಖಂಡನೆ Read More »

ಬಹುಮತ ಸಾಬೀತುಪಡಿಸುವಲ್ಲಿ ಪಕ್ಷಗಳು ವಿಫಲ ಸರ್ಕಾರ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ ನೇಪಾಳ ರಾಷ್ಟ್ರಪತಿ

ಕಾಠ್ಮಂಡು: ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ವಿರೋಧ ಪಕ್ಷದ ನಾಯಕರು ಶುಕ್ರವಾರ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರಪತಿ ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದಾರೆ. ನೇಪಾಳದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರು ಶನಿವಾರ ನೇಪಾಳ ಸರ್ಕಾರವನ್ನು ವಿಸರ್ಜಿಸಿ ನವೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿ ಮಧ್ಯರಾತ್ರಿ ಅಚ್ಚರಿಯ ಪ್ರಕಟಣೆ ಹೊರಡಿಸಿದ್ದಾರೆ. ಮೊದಲ ಹಂತದ ಚುನಾವಣೆಯನ್ನು ನವೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಯನ್ನು ನವೆಂಬರ್

ಬಹುಮತ ಸಾಬೀತುಪಡಿಸುವಲ್ಲಿ ಪಕ್ಷಗಳು ವಿಫಲ ಸರ್ಕಾರ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ ನೇಪಾಳ ರಾಷ್ಟ್ರಪತಿ Read More »

ಲಾಠಿ‌ ಏಟಿಗೆ ಬಾಲಕ ಸಾವು: ಯು.ಪಿ ಪೊಲೀಸರಿಂದ ಅಮಾನವೀಯ ಕೃತ್ಯ

ಉತ್ತರ ಪ್ರದೇಶ: ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ಕರ್ಫ್ಯೂವನ್ನು ಉಲ್ಲಂಘಿಸಿದ್ದಕ್ಕಾಗಿ 17 ವರ್ಷದ ಬಾಲಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಭಟ್​ಪುರಿ ಗ್ರಾಮದಲ್ಲಿ ನಡೆದಿದೆ. ಬಾಲಕ ತನ್ನ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ. ಈ ವೇಳೆ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಕಾನ್ಸ್​ಟೇಬಲ್​ ಹಿಡಿದು ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಮತ್ತೆ ಬಾಲಕನ ಮೇಲೆ ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕ

ಲಾಠಿ‌ ಏಟಿಗೆ ಬಾಲಕ ಸಾವು: ಯು.ಪಿ ಪೊಲೀಸರಿಂದ ಅಮಾನವೀಯ ಕೃತ್ಯ Read More »

ಮಗುವಿನೊಂದಿಗೆ ಚಿಕಿತ್ಸೆಗೆ ಹೊರಟ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಿದ ಪೊಲೀಸರು

ಹಾವೇರಿ: ತನ್ನ ಎರಡು ತಿಂಗಳ ಹಸುಗೂಸಿನೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ರಸ್ತೆ ಬದಿ ವಾಹನಕ್ಕಾಗಿ ಕಾಯುತ್ತಿದ್ದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ತಲುಪಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಲಾಕ್ಡೌನ್ ಹೇರಲಾಗಿದ್ದು, ಯಾವುದೇ ವಾಹನ ಓಡಾಟವಿಲ್ಲದ ಸಮಯದಲ್ಲಿ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ತೆರಳಲು ರಸ್ತೆ ಬದಿ ನಿಂತಿದ್ದ ಮಹಿಳೆಗೆ ಪೊಲೀಸರ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.

ಮಗುವಿನೊಂದಿಗೆ ಚಿಕಿತ್ಸೆಗೆ ಹೊರಟ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಿದ ಪೊಲೀಸರು Read More »

ಅಂದಿನ ಕಾರು ಚಾಲಕ ಇಂದಿನ ಸಾವಿರಾರು ಬಸ್ ಗಳ ಒಡೆಯ ಎಸ್ ಆರ್ ಎಸ್ ಬಸ್ ಮಾಲೀಕ ರಾಜಶೇಖರ್ ನಿಧನ

ರಾಮನಗರ: ಎಸ್ ಆರ್ ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಯ ಸಂಸ್ಥಾಪಕ ಕೆ.ಟಿ. ರಾಜಶೇಖರ್ ನಿನ್ನೆ ನಿಧನ ಹೊಂದಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು,  ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಮೃತಪಟ್ಟಿದ್ದಾರೆ. 1943 ರಲ್ಲಿ ಜನಿಸಿದ ರಾಜಶೇಖರ್ ಆಟೋಮೊಬೈಲ್ ಡಿಪ್ಲೋಮಾ ವ್ಯಾಸಂಗದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಹಲವು ಕಡೆ ದುಡಿದಿದ್ದರು. ಕೆಲವೆಡೆ ಚಾಲಕರಾಗಿಯೂ ದುಡಿದಿದ್ದ ಅವರು 1971 ರಲ್ಲಿ ಎಸ್ಆರ್ಎಸ್ ಎಂಬ ಹೆಸರಿನ ಸಾರಿಗೆ

ಅಂದಿನ ಕಾರು ಚಾಲಕ ಇಂದಿನ ಸಾವಿರಾರು ಬಸ್ ಗಳ ಒಡೆಯ ಎಸ್ ಆರ್ ಎಸ್ ಬಸ್ ಮಾಲೀಕ ರಾಜಶೇಖರ್ ನಿಧನ Read More »

ಏರ್ ಇಂಡಿಯಾ ಡಾಟಾ ಪ್ರೊಸೆಸರ್ ಹ್ಯಾಕ್4.5 ದಶಲಕ್ಷ ಪ್ರಯಾಣಿಕರ ಮಾಹಿತಿ ಲೀಕ್

ನವದೆಹಲಿ: ಭಾರತದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಡಾಟಾ ಪ್ರೊಸೆಸರ್ ಮೇಲೆ ಸೈಬರ್ ಕದೀಮರ ಕನ್ನ ಬಿದ್ದಿದ್ದು, ಕಳೆದ ಹತ್ತು ವರ್ಷದಲ್ಲಿ ನೋಂದಾಯಿಸಿಕೊಂಡಿದ್ದ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಮಾಹಿತಿ ಸೋರಿಕೆಯಾಗಿದೆ. ತಂತ್ರಜ್ಞಾನ ಪೂರೈಕೆ ಸಂಸ್ಥೆ ಸಿಟಾ ನಿರ್ವಹಿಸುತ್ತದ್ದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಈ ಸೈಬರ್ ದಾಳಿ ನಡೆದಿದ್ದು, ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 ರ ನಡುವೆ ನೋಂದಾಯಿಸಿದ ಪ್ರಯಾಣಿಕರ ಹೆಸರು, ಸಂಪರ್ಕ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್

ಏರ್ ಇಂಡಿಯಾ ಡಾಟಾ ಪ್ರೊಸೆಸರ್ ಹ್ಯಾಕ್4.5 ದಶಲಕ್ಷ ಪ್ರಯಾಣಿಕರ ಮಾಹಿತಿ ಲೀಕ್ Read More »

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ

ವಯಸ್ಸಾದಂತೆ ಜನರ ಲಿಂಗ ಬದಲಾಗುವ ಸ್ಥಳದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ! ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹುಡುಗಿಯರು ಹುಡುಗರಾಗಿ ಬೆಳೆಯುವ ಗ್ರಾಮವೊಂದಿದೆ. ಲಾ ಸಲಿನಾಸ್ ಹೆಸರಿನ ಈ ಗ್ರಾಮವನ್ನು ಜನರು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ Read More »

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್

ಮಂಗಳೂರು: ಇಂದು ನಮ್ಮ ದೇಶದ ಜನತೆಗೆ ವಿತರಿಸಲು ಕೋವಿಡ್ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಲಸಿಕೆ ಇಟ್ಟುಕೊಳ್ಳದೆ ಹೊರ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ್ದು ಯಾಕೆ, ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದಾಗಿಯೂ,  ಸುಮಾರು 20ಕ್ಕೂ  ಹೆಚ್ಚು ವಿದೇಶಿ ಲಸಿಕೆ ಕಂಪೆನಿಗಳು ಭಾರತಕ್ಕೆ ಲಸಿಕೆ ನೀಡಲು

ನಮಗಿಲ್ಲದ ಲಸಿಕೆಯನ್ನು ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಪೂರೈಸಿದ್ದ್ಯಾಕೆ…?ಇದು ಪ್ರಜಾಪ್ರಭುತ್ವವೋ ನಿರಂಕುಶಪ್ರಭುತ್ವವೋ…..?: ಯು ಟಿ ಖಾದರ್ Read More »

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ

ಮಂಗಳೂರು, ಮೇ 21: ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆಯಿಂದ  ಕಡ್ಡಾಯವಾಗಿ  ಪಡಿತರ ವಿತರಣೆ ಪಾರಂಭಿಸಬೇಕು,  ಅಲ್ಲದೆ 10 ಗಂಟೆ ನಂತರ ಕ್ಯೂ ನಲ್ಲಿ ಉಳಿದವರಿಗೂ ಪಡಿತರ ವಿತರಿಸಬೇಕು ಹಾಗೆ, ಕೋವಿಡ್  ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ 7 ಗಂಟೆಯ ಮೊದಲೇ ಬಂದು ಅಂಗಡಿ ಬಾಗಿಲು  ತೆರೆಯಬೇಕು, ಹಾಗೇ 7 ಗಂಟೆಯಿಂದ  ಕಡ್ಡಾಯವಾಗಿ ಪಡಿತರ ವಿತರಣೆ ಪ್ರಾರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು

ದ.ಕ : 7 ಗಂಟೆಯಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ-ಜಿಲ್ಲಾಧಿಕಾರಿ Read More »