ಸಮಗ್ರ ಸಮಾಚಾರ

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ!

ತೆಲಂಗಾಣ: ಈ ಹಿಂದೆ ಕೋಲಾರದ ಉಮಾಪತಿ ಎಂಬ ಯುವಕ ಅಕ್ಕತಂಗಿಯರನ್ನು ವರಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಬಳಿಕ ಕಂಬಿ ಸೇರಿದ್ದ ಘಟನೆ ಮರೆಯುವಾಗಲೇ ಇಂತದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ವಧುಗಳಿಬ್ಬರೂ ಒಡಹುಟ್ಟಿದವರು! ತೆಲಂಗಾಣ ರಾಜ್ಯದ ಮೆದಕ್​ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮದುವೆ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ. ಅಕ್ಕ […]

ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ! Read More »

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ

ಮುಲ್ಕಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೇಲ್ ಪರ ಬರಹಗಳಿದ್ದ ಪೋಸ್ಟರ್ ಹಂಚಿಕೊಂಡ ಯುವಕನಿಗೆ ಪ್ಯಾಲೆಸ್ತೀನ್ ಪರವಾದಿ ಯುವಕರ ತಂಡ ಬೆದರಿಕೆಯೊಡ್ಡಿದ ಘಟನೆ ಇಲ್ಲಿಗೆ ಸಮೀಪದ ಕಾರ್ನಾಡ್ ಎಂಬಲ್ಲಿ ನಡೆದಿದೆ. ಕಾರ್ನಾಡ್ ನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದ ಯುವಕ ಇಸ್ರೇಲ್ ಪರ ಘೋಷಣೆಗಳಿದ್ದ ಪೋಸ್ಟರ್ ಹಂಚಿಕೊಂಡ ಕಾರಣಕ್ಕಾಗಿ ಕೆಲ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು. ನಂತರ ಹಿಂದೂ ಸಂಘಟನೆಗಳ ಮುಖಂಡರು ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಬೆದರಿಕೆಯೊಡ್ಡಿದ ಯುವಕರನ್ನು ಬಂಧಿಸಿ ಬುದ್ಧಿವಾದ ತಿಳಿಸಿ

ಮೂಲ್ಕಿ: ಇಸ್ರೇಲ್ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಾತನಿಗೆ ಬೆದರಿಕೆ Read More »

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ

ಬೆಂಗಳೂರು.ಮೇ.24: ಹೊಸ ಮರಳು ನೀತಿ ಹಾಗೂ ಗಣಿ ನೀತಿಯು ಇನ್ನು 15 ದಿನದೊಳಗೆ ಜಾರಿಗೆ ಬರಲಿದೆ. ಈಗಾಗಲೇ ಈ ಸಂಬಂಧ ಕರಡು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗಿದ್ದು, ಈ ಕುರಿತು ವ್ಯಕ್ತವಾಗುವ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದು ನೂತನ ಮರಳು ನೀತಿ ಹಾಗೂ ಗಣಿ ನೀತಿಯನ್ನು ಜಾರಿಗೆ ತರಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ

15 ದಿನಗಳಲ್ಲಿ ಹೊಸ ಮರಳು‌ ನೀತಿ ಜಾರಿ: ಸಚಿವ ನಿರಾಣಿ Read More »

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು

ಕಡಬ: ಕಬ್ಬಿಣದ ಸಲಾಕೆ ಸಹಾಯದಿಂದ ಮರದಿಂದ ತೆಂಗಿನಕಾಯಿ ಕೇಳುತ್ತಿದ್ದಾಗ ಸಲಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಡಬೆಟ್ಟು ಎಂಬಲ್ಲಿ ನಡೆದಿದೆ. ಕುಟ್ರುಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ 35 ವರ್ಷದ ಲಿಜು ಮೃತಪಟ್ಟ ದುರ್ದೈವಿ. ಲಿಜು ತನ್ನ ಮನೆಯಲ್ಲಿ ಇಂದು ಬೆಳಿಗ್ಗೆ  ತೆಂಗಿನಕಾಯಿ ಕೀಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಡಬ: ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ತಗುಲಿ ತೆಂಗಿನಕಾಯಿ ಕೊಯ್ಯುತ್ತಿದ್ದ ಯುವಕ ಮೃತ್ಯು Read More »

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ

ಸುಳ್ಯ: ಕೊರೊನಾ ಮಾರ್ಗ ಸೂಚಿ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಜೂಜಾಟ ಆಡುತಿದ್ದ ಮಾಜಿ ಜಿಲ್ಲಾ ಪಂಚಾಯತ್ ಸೇರಿದಂತೆ 10 ಮಂದಿಯನ್ನು ಸುಳ್ಯ ಪೊಲೀಸ್ ಬಂಧಿಸಿದ ಘಟನೆ ನೆಡೆದಿದೆ. ಮಾಜಿ ಜಿ.ಪಂ.ಸದಸ್ಯ, ಬಿ.ಜೆ.ಪಿ ಕಾರ್ಯಕರ್ತ ಗಂಗಾಧರ ಕೇಪಳಕಜೆ ಸಹಿತ, ಗೋಪಾಲಕೃಷ್ಣ, ಗಂಗಾಧರಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್ , ಮೋಹನ್ ದಾಸ್, ಅಶೋಕ, ದಯಾನಂದ ಬಂಧಿತ ಆರೋಪಿಗಳು. ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕದಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತು ನಿರತ ಸುಳ್ಯ

ಸುಳ್ಯ: ‘ಉಲಾಯಿ-ಪಿದಾಯಿ’, ಬಿಜೆಪಿ ಮಾಜಿ ಜಿ.ಪಂ.ಸದಸ್ಯ ಸಹಿತ ೧೦ ಮಂದಿ ಉಲಾಯಿ Read More »

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು

ಮೂಡಿಗೆರೆ: ಮಹಿಳೆ ನಾಪತ್ತೆ ಪ್ರಕರಣದಲ್ಲಿ ಆರೋಪಿ ಎನ್ನಲಾಗಿದ್ದ ದಲಿತ ಯುವಕನೋರ್ವನಿಗೆ ತಲೆಕೆಳಗಾಗಿ ಕಟ್ಟಿಹಾಕಿ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ ಆರೋಪ ಎದುರಿಸುತ್ತಿರುವ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ. ಮೇ10ರಂದು ಪುನೀತ್ ಎಂಬವನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಈ ಘಟನೆ ನಡೆದಿತ್ತು. ನಂತರ ಪಿಎಸ್ ಐ ಅರ್ಜುನ್ ಅವರ ಈ ಅಮಾನವೀಯ ವರ್ತನೆ ತಿಳಿಯುತ್ತಿದ್ದಂತೆ ಹಲವೆಡೆ ಪಿಎಸೈ ಅಮಾನತಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಅದರಂತೆ ಅರ್ಜುನ್ ಅವರನ್ನು ಪಶ್ಚಿಮ ವಲಯ ಐಜಿಪಿ ನಿನ್ನೆ ಸೇವೆಯಿಂದ ಅಮಾನತುಗೊಳಿಸಿ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪಿ ಗೋಣಿಬೀಡು ಪಿಎಸ್ಐ ಅಮಾನತು Read More »

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು.

ಬೆಂಗಳೂರು:ಮೇ.24: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಜಾರಿಯಲ್ಲಿದೆ. ಮೇ 24 ರಂದು 6 ಬೆಳಗ್ಗೆ ಗಂಟೆಯವರೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಜೂನ್ 7 ರವರೆಗೆ ವಿಸ್ತರಿಸಲಾಗಿದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನಕ್ಕೆ ಪೊಲೀಸರು ಸ್ಥಳೀಯ ಆಡಳಿತಗಳಿಂದ ಕ್ರಮಕೈಗೊಳ್ಳಲಾಗಿದೆ. ಅನಗತ್ಯವಾಗಿ ಸಂಚರಿಸುವವರಿಗೆ ಬ್ರೇಕ್ ಹಾಕಲಾಗುತ್ತಿದ್ದು, ವಾಹನ ವಶ, ದಂಡ ವಸೂಲಿ ಸೇರಿ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯಾದ್ಯಂತ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ

ಬೇಕಾಬಿಟ್ಟಿ ಓಡಾಡಿದ್ರೆ ಕಠಿಣ ಕ್ರಮ: ಇಂದಿನಿಂದ ಲಾಕ್ ಡೌನ್ ಕಟ್ಟುನಿಟ್ಟು. Read More »

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ

ಮಂಗಳೂರು.ಮೇ23:‌ ಇಲ್ಲಿನ ಮೂಡುಬಿದಿರೆ ಪುರಸಭಾ ವ್ಯಾಪ್ತಿ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್ ನಲ್ಲಿ ನಡೆದಕಾರು ಅಪಘಾತದಲ್ಲಿ ಮೃತಪಟ್ಟಿದೆ. ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ದಂಪತಿ ರಿಯಾದ್ ನಲ್ಲಿ ವಾಸವಾಗಿದ್ದಾರೆ. ಆದಿಲ್ ಅವರು ಟ್ರಾವೆಲ್ ಏಜೆನ್ಸಿ ಹೊಂದಿದ್ದಾರೆ. ಅವರ ಕುಟುಂಬ ತಮ್ಮ ಕಾರಿನಲ್ಲಿ ದಮ್ಮಾಮ್ ಗೆ ತೆರಳಿತ್ತು. ಕೆಲಸ ಮುಗಿಸಿ ರಿಯಾದ್ ಗೆ ವಾಪಾಸಾಗುತ್ತಿದ್ದಾಗ ಆದಿಲ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳ ಒಂದು ವರ್ಷದ ಗಂಡು ಮಗು ಓವೈಸಿ ಆದಿಲ್ ಗೆ ಗಂಭೀರ

ರಿಯಾದ್ ನಲ್ಲಿ ರಸ್ತೆ ಅಪಘಾತಕ್ಕೆ ಕರಾವಳಿ ಮೂಲದ ಮಗು ‌ಬಲಿ Read More »

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ..

ಹಾಸನ.ಮೇ23: ಎರಡು ವಾರದ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಒಬ್ಬನ ತಲೆಯನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ, ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯ ನಿವಾಸಿ ಭರತ್ ಎಂಬುವನೇ ಕೊಲೆಯಾದ ಯುವಕ. ಇಂದು ಹಾಸನ ಸಂತೆಪೇಟೆಯ 80 ಫೀಟ್ ರಸ್ತೆಯಲ್ಲಿ ಭರತ್​​ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಮಚ್ಚಿನಿಂದ ಕೊಚ್ಚಿರುವ ಹಂತಕರು ತಲೆಯನ್ನು ಎರಡು ಹೋಳು ಮಾಡಿದ್ದಾರೆ ಎನ್ನಲಾಗಿದೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೂರ್ವದ್ವೇಷದಿಂದಲೇ‌

ಜೈಲಿನಿಂದ ಬಿಡುಗಡೆಯಾದವನ ರುಂಡ ಚೆಂಡಾಡಿದ ಹಂತಕರು. ಏನಿದು ಭೀಬತ್ಸ ಕೃತ್ಯ? ಮುಂದೆ ಓದಿ.. Read More »

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್….

ಮಂಡ್ಯ.ಮೇ.23: ಈ ಮುದ್ದಾದ ಕಂದಮ್ಮನ ಹೆಸರು ಮನಸ್ವಿ. ಮಂಡ್ಯದ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಹೆಚ್.ಡಿ ಸುಧಾಕರ್ ಎಂಬುವರ ಮಗಳು. ಈಕೆಗಿನ್ನೂ ಐದೂವರೆ ವರ್ಷ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಸುಧಾಕರ್ ಅವರಿಗೆ ಮಗಳ ಸಮಸ್ಯೆ ಎರಡೂವರೆ ತಿಂಗಳು ಇದ್ದಾಗಲೇ  ಮನವರಿಕೆ ಆಗಿತ್ತು. ಅಂದಿನಿಂದ ಇಲ್ಲೀವರೆಗೂ ಮಗಳ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಸುಧಾಕರ್ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವಾರು ರೀತಿಯ ಕೆಲಸ ಮಾಡಿಕೊಂಡಿದ್ದರು. ಕಳೆದ 5 ವರ್ಷದಿಂದ ಕಾರು ಚಾಲಕನಾಗಿ ಕುಟುಂಬವನ್ನು ಸಾಕುತ್ತಿದ್ದಾರೆ. ಮದುವೆಯಾದ

ಈ‌ ಕಂದನ ನಗುವನ್ನು ಉಳಿಸಿಕೊಡುವಿರಾ ಪ್ಲೀಸ್…. Read More »