ಸಮಗ್ರ ಸಮಾಚಾರ

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು 

ಪಡುಬಿದ್ರೆ: ತೌಕ್ತೆ ಚಂಡಮಾರುತಕ್ಕೆ ಸಿಲುಕಿದ ಬೋಟು ಪಲ್ಟಿಯಾಗಿ ಓರ್ವ ಮೃತಪಟ್ಟು, ಐವರು ನಾಪತ್ತೆಯಾದ ಘಟನೆ ಪಡುಬಿದ್ರೆ ಬಿಚ್‌ನಲ್ಲಿ ನಡೆದಿದೆ. ಬೆಳಿಗ್ಗೆ 10ಗಂಟೆಯಿಂದ ಈ ಸಿಂಗಲ್ ಮೆಂಟೆನೆನ್ಸ್ ಬೋಟ್ ಸಂಪರ್ಕ ಕಡಿದು ಕಂಡಿತ್ತು. ಬೋಟಿನಲ್ಲಿ ಎಂಟು ಜನರಿದ್ದು ಇಬ್ಬರು ಈಜಿಕೊಂಡು ಮಟ್ಟು ಬೀಚಿನಲ್ಲಿ ದಡ ಸೇರಿದ್ದಾರೆ. ಇನ್ನು ಒಂದು ಮೃತ ದೇಹ ಪತ್ತೆಯಾಗಿದ್ದು, ಕಾಣೆಯಾದ ಐವರಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕರಾವಳಿ ಪೋಲೀಸ್ ಅಧಿಕಾರಿ ಚೇತನ್ ಐಪಿಎಸ್ ತಿಳಿಸಿದ್ದಾರೆ. ಇನ್ನು  ಚಂಡಮಾರುತ ಬೀಸಿದ ಪರಿಣಾಮ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಸಮುದ್ರ […]

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬೋಟ್ ಪಲ್ಟಿ – ಓರ್ವ ಸಾವು  Read More »

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ

ಮಂಗಳೂರು.ಮೇ.15: ತೌಖ್ತೆ ಚಂಡಮಾರುತ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ತೀವ್ರ ಪರಿಣಾಮ ಬೀರುತ್ತಿದ್ದು, ಶನಿವಾರದಿಂದಲೇ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದೆ. ಮುಂಜಾನೆಯಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಕಡಲ ಕಿನಾರೆಯುದ್ದಕ್ಕೂ ಭೀಮ ಶಕ್ತಿಯ ಭಾರೀ ಗಾತ್ರದ ಅಲೆಗಳು ದಡವನ್ನು ನುಂಗಿಹಾಕಿವೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್‌ ಸರಬರಾಜು ಕಡಿತವಾಗಿದೆ. ಉಡುಪಿ, ಬ್ರಹ್ಮಾವರ, ಕಾರ್ಕಳ, ಕಾಪು ಭಾಗದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಭಾರೀ

ತೌಖ್ತೆ ಅಬ್ಬರ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರಾಜ್ಯಾದ್ಯಂತ ಬಿರುಸುಗೊಂಡ ಮಳೆ Read More »

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ

ನೇಪಾಳ: ಜಗತ್ತಿನ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 25 ಬಾರಿ ಏರುವ ಮೂಲಕ ನೇಪಾಳದ ಕಮಿ ರೀಟಾ ಶೆರ್ಪಾರವರು ಹಲವು ವರ್ಷಗಳಿಂದ ತಾವೇ ಸೃಷ್ಠಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಕಮಿ ರೀಟಾ ಶೆರ್ಪಾರವರ ವಯಸ್ಸು 49. ಇವರು 1994ರಲ್ಲಿ ಮೊದಲ ಬಾರಿಗೆ 8848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ್ದ ಬಳಿಕ ಪ್ರತಿ ವರ್ಷವೂ ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ Read More »

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ

ನಾವು ಸೇವಿಸುವ ಪ್ರಾಣವಾಯು ದಿನೇದಿನೇ ಹಾಳಾಗುತ್ತಿದೆ. ಇದಕ್ಕೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಮನುಷ್ಯನ ಅಪರಾಧಗಳ ಬಗ್ಗೆ ಈಗೀಗ ಅರಿವಾಗುತ್ತಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಅಲ್ಲವೇ.ಜಗತ್ತಿನಲ್ಲಿ ಜನಸಮೂಹ ಇಂದು ನರಳುತ್ತಿರುವುದು ವೈರಸ್ ಗಳ ಹಾವಳಿಯಿಂದ. ಕೃತಕ ಮತ್ತು ನೈಸರ್ಗಿಕ ವೈರಸ್ ಗಳು ಮನುಷ್ಯನ ಇರುವನ್ನೇ ಪ್ರಶ್ನಿಸುವಂತಿವೆ. ಹಾಗಾದರೆ ಈ ವೈರಸ್ ಗಳ ನಿವಾರಣೆ ಹೇಗೆ? ಇದಕ್ಕೆ ಉಪಾಯ ಇಲ್ಲಿದೆ ನೋಡಿ. ವೈರಸ್ ಶ್ವಾಸಕೋಶ ಸೇರೋ ಮೊದಲು ಉಗಿ

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ Read More »

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು

ದಾಸವಾಳ ಹೂವು ಗಿಡದಲ್ಲಿ ನೋಡುವುದಕ್ಕೂ ಚಂದ, ದೇವರ ಪೂಜೆಗೂ ಚಂದ. ಇದರ ಜೊತೆಗೆ ಇದು ಔಷಚಧಿ ಸಸ್ಯವು ಹೌದು. ಯಾಕಂದರೆ ಅದರಲ್ಲಿ ಅನೇಕೆ ಬಗೆಯ ಆರೋಗ್ಯಕಾರಿ ಗುಣಗಳಿವೆ. ಅತಂಹ ದಾಸವಾಳ ಹೂವಿನ ಪ್ರಯೋಜನಗಳು ಯಾವುದೆಲ್ಲ ಎಂದು ಈ ತಿಳಿದುಕೊಳ್ಳೊಣ. ಶೀತ- ವೈರಸ್ ಬಾಧೆ ದೂರ:ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ ಚಿಟಿಣi anti oxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು Read More »

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು Read More »

ಭೂಮಿಗಾಗಿ ಒಂದಾಗೋಣ ಬನ್ನಿ:

ಕೊರೊನಾ ವೈರಾಣು ಮನುಕುಲಕ್ಕೆ ತಂದೊಡ್ಡಿರುವ ಆತಂಕದಿಂದ, ವಿಶ್ವದ ಚಟುವಟಿಕೆಗಳೇ ಸ್ತಬ್ಧವಾದಂತಿವೆ. ಆದರೆ, ಇದಕ್ಕಿಂತಲೂ ಅಪಾಯಕಾರಿಯಾದದ್ದು ಹವಾಮಾನ ಬದಲಾವಣೆ. ಈ ಬಗ್ಗೆ ಗಮನಹರಿಸಲೇಬೇಕಾದ ಜರೂರನ್ನು ‘ವಿಶ್ವ ಭೂ ದಿನ’ (ಏ. 22) ನಮಗೆ ನೆನಪಿಸುತ್ತಿದೆ. ಅಮೆರಿಕದ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯದ ಸ್ಥಿತಿಯಲ್ಲಿದ್ದ 60ರ ದಶಕದಲ್ಲಿ, ಬರಡಾಗುತ್ತಿದ್ದ ಭೂಮಿಗಾಗಿ ಮರುಗಿದ ದಿನವಿದು. ವಿಪರೀತವೆಂಬಂತೆ ಹೆಚ್ಚುತ್ತಿದ್ದ ಕಾರ್ಖಾನೆಗಳು, ಆಟೊಮೊಬೈಲ್ ಉದ್ದಿಮೆಯಿಂದ ಕಲುಷಿತಗೊಳ್ಳುತ್ತಿದ್ದ ಗಾಳಿ, ಮಲಿನವಾಗುತ್ತಿದ್ದ ನೀರು, ಇಂತಹ ಬೆಳವಣಿಗೆಯು ತಂದೊಡ್ಡುತ್ತಿದ್ದ ಅನಾರೋಗ್ಯದಿಂದ ಮನುಷ್ಯರನ್ನು ಪಾರು ಮಾಡುವ ಪ್ರಯತ್ನವಾಗಿ ಹುಟ್ಟಿಕೊಂಡಿತು. ಹೀಗೆ, 50

ಭೂಮಿಗಾಗಿ ಒಂದಾಗೋಣ ಬನ್ನಿ: Read More »

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ.

ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೀಗೆ ಹತ್ತು ಹಲವು ಪಾರಂಪರಿಕ ತಾಣಗಳನ್ನು ತನ್ನೊಡಲಲ್ಲಿ ಹೊತ್ತುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಾಸನ ಪರಂಪರಾಗತ ಕೃಷಿ, ರಾಜಕೀಯ ವಿದ್ಯಮಾನ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಪ್ರಸಿದ್ದವಾಗಿದೆ. ವರ್ಷಕ್ಕೊಮ್ಮೆ ಭಕ್ತಾದಿಗಳ ದರುಶನಕ್ಕೆ ತೆರೆಯುವ ಹಾಸನಾಂಬ ದೇಗುಲವು ಹಾಸನದ ಮತ್ತೊಂದು ವಿಶೇಷ. ಇವೆಲ್ಲದರ ನಡುವೆ ಹೇಮಾವತಿ ನದಿಯ ಹಿನ್ನೀರಿನಲ್ಲಿ ನಿಂತಿರುವ ಶೆಟ್ಟಿಹಳ್ಳಿ ಚರ್ಚ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಮುಳುಗದ ಟೈಟಾನಿಕ್ ಹಡಗು ಎಂದೇ ಹೆಸರು ಪಡೆದಿರುವ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ನ್ನು

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ. Read More »

ಅಸ್ಪರ್ಶ ಹುಡುಗ ಅಸಾಮಾನ್ಯನಾದ ಕಥೆ. ಈ‌ ಭೀಮ‌ ಸಂವಿಧಾನದ ಬಲಭೀಮ

ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿ, ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನೇ ನೀಡಿದ ಪ್ರಸಿದ್ಧ ನಾಯಕರು.ಆದರೆ ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ನಿಲ್ಲುವಂತಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು ೧೮೯೧ರ ಏಪ್ರಿಲ್ ೧೪ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್‌ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿರವರ ಪುತ್ರರಾಗಿ ಜನಿಸಿದರು. ಅವರು ದಲಿತರ ಮತ್ತು

ಅಸ್ಪರ್ಶ ಹುಡುಗ ಅಸಾಮಾನ್ಯನಾದ ಕಥೆ. ಈ‌ ಭೀಮ‌ ಸಂವಿಧಾನದ ಬಲಭೀಮ Read More »

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ

ಟ್ರಕ್ಕಿಂಗ್ ಅಥವಾ ಚಾರಣವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಷಯ. ಹಲವರು ಚಾರಣದ ಬಗ್ಗೆ ಕೇಳಿರಬಹುದು, ಬಹಳಷ್ಟು ಮಂದಿ‌ ಅದರ ಅನುಭವ ಪಡೆದಿರಬಹುದು. ಬೆಟ್ಟ ಗುಡ್ಡಗಳ ನಡುವೆ ಕಲ್ಲು ಬಂಡೆಗಳ ಮಧ್ಯೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಾದಯಾತ್ರೆ ಸುಂದರ ಅನುಭವವನ್ನೇ ಕೊಡುತ್ತದೆ. ಸದಾ ಬ್ಯುಸಿಯಾಗಿರುವ ಪೇಟೆ ಮಂದಿ ಚಾರಣವನ್ನು ವರ್ಷಕ್ಕೊಮ್ಮೆಯಾದರೂ ಮಾಡಲೇಬೇಕು. ಹಳ್ಳಿ ಜನಕ್ಕೆ ದಿನವೂ ಚಾರಣವೇ ಬಿಡಿ…. ಆದರೆ ಇಲ್ಲೊಂದು ಹೊಸ ಕಾನ್ಸೆಪ್ಟ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತಲೆಎತ್ತುತ್ತಿದೆ. ಅದೇ ಬೀಚ್ ಟ್ರಕ್ಕಿಂಗ್ ಅಥವಾ ಸಮುದ್ರ

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ Read More »