ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ರೌಡಿಶೀಟರ್ ಯಾಕೆ ಅಧ್ಯಕ್ಷನಾಗಬಾರದು? ಸಚಿವ ದಿನೇಶ್ ಗುಂಡೂರಾವ್
ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟ್ ಗೆ ಮಾಜಿ ರೌಡಿ ಶೀಟರ್, ಕಾಂಗ್ರೆಸ್ ನಾಯಕ ಹರೀಶ್ ಗೌಡರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ದಿನೇಶ್ ಗುಂಡೂರಾವ್ ಯಾಕೆ ಆಗಬಾರದು ಎಂದಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹರೀಶ್ ಗೌಡ ಈಗ ರೌಡಿ ಶೀಟರ್ ಅಲ್ಲ. ಮಾಜಿ ರೌಡಿ ಶೀಟರ್. ರೌಡಿ ಶೀಟರ್ ಗಳು ಸುಧಾರಣೆಯಾಗಬಾರದಾ? ಅವರು ಈಗ ಹಾಗಿಲ್ಲ. ಹಾಗಾಗಿ ಅವರು […]










