Editor

ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬೇಟೆ| 69 ಕಡೆ ದಾಖಲೆಗಳ ಪರಿಶೀಲನೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ 69 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವಿವಿಯ ಅಧಿಕಾರಿಗಳು, ಸಿಬ್ಬಂದಿ ಮನೆಗಳು, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೀದರ್ ಜಿಲ್ಲೆಯ 24 ಕಡೆ, ಬೆಂಗಳೂರಿನ 31 ಕಡೆ, ಕೊಪ್ಪಳ 2 ಕಡೆ, ಚಿಕ್ಕಮಗಳೂರು 2 ಕಡೆ, ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದಂತ 69 ಕಡೆ ಲೋಕಾಯುಕ್ತ ದಾಳಿ ನಡೆದಿದೆ.

ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬೇಟೆ| 69 ಕಡೆ ದಾಖಲೆಗಳ ಪರಿಶೀಲನೆ Read More »

ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ| ಉದ್ವಿಗ್ನಗೊಂಡ ಮಂಡ್ಯ ಜಿಲ್ಲೆಯ ಮದ್ದೂರು| ನಾಳೆ ಬಂದ್ ಗೆ ಕರೆ

ಸಮಗ್ರ ನ್ಯೂಸ್: ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ನಾಳೆ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮದ್ದೂರಿನಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 21 ಮಂದಿಯನ್ನ ಬಂಧಿಸಲಾಗಿದೆ. ಮದ್ದೂರಿನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸಿಎಂ ಸೂಚನೆ ಮೇರೆಗೆ ಮದ್ದೂರಿಗೆ ಹೋಗುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ

ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ| ಉದ್ವಿಗ್ನಗೊಂಡ ಮಂಡ್ಯ ಜಿಲ್ಲೆಯ ಮದ್ದೂರು| ನಾಳೆ ಬಂದ್ ಗೆ ಕರೆ Read More »

ಶೇ.5 ಮತ್ತು ಶೇ.15ರ ತೆರಿಗೆ ಸ್ಲ್ಯಾಬ್ ಗೆ ಜಿಎಸ್ಟಿ ಮಂಡಳಿ ಅನುಮೋದನೆ| ಸೆ.22ರಿಂದ ನೂತನ ತೆರಿಗೆ ಜಾರಿಗೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ GST ಮಂಡಳಿ ಅನುಮೋದನೆ ನೀಡಿದೆ. GST ದರಗಳ ತರ್ಕಬದ್ಧಗೊಳಿಸುವಿಕೆಯನ್ನು GST ಮಂಡಳಿ ಅನುಮೋದಿಸಿದೆ. ಶೇಕಡ 12 ಮತ್ತು ಶೇಕಡಾ 28 ದರಗಳನ್ನು ರದ್ದುಗೊಳಿಸಲು ಮಂಡಳಿ ಅನುಮೋದನೆ ನೀಡಿದೆ. ಷಾರಾಮಿ ಸರಕುಗಳಿಗೆ ಶೇಕಡಾ 40 ರ ಹೊಸ ಸ್ಲ್ಯಾಬ್ ಅನ್ನು ಕೌನ್ಸಿಲ್ ಅನುಮೋದಿಸಿದೆ. GST ಮಂಡಳಿಯ ನಿರ್ಧಾರವು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ: ದೆಹಲಿಯಲ್ಲಿ 56

ಶೇ.5 ಮತ್ತು ಶೇ.15ರ ತೆರಿಗೆ ಸ್ಲ್ಯಾಬ್ ಗೆ ಜಿಎಸ್ಟಿ ಮಂಡಳಿ ಅನುಮೋದನೆ| ಸೆ.22ರಿಂದ ನೂತನ ತೆರಿಗೆ ಜಾರಿಗೆ Read More »

ರಾಜ್ಯದಲ್ಲಿ ನಿಲ್ಲದ ಮಳೆಯಬ್ಬರ| ರೆಡ್ ಅಲರ್ಟ್ ಘೋಷಣೆ; 3 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕಳೆದ‌‌ ಕೆಲ ದಿನಗಳಿಂದ ರಾಜ್ಯದಲ್ಲಿ ‌ಭಾರೀ ಮಳೆಯಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಚಿಕ್ಕಮಗಳೂರು ಸೇರಿ ಹಲವೆಡೆ ಆಗಸ್ಟ್ 30ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಗನವಾಡಿ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿದೆ. ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ರಜೆ ಘೋಷಣೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು

ರಾಜ್ಯದಲ್ಲಿ ನಿಲ್ಲದ ಮಳೆಯಬ್ಬರ| ರೆಡ್ ಅಲರ್ಟ್ ಘೋಷಣೆ; 3 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ Read More »

ದ.ಕ ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ| ಆ.30ರಂದೂ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಹಾಗೂ ಅನುದಾನಿತ, ಮತ್ತು ಖಾಸಗಿ ಶಾಲೆಗಳಿಗೆ ಆ.30ರ ಶನಿವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ| ಆ.30ರಂದೂ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ Read More »

ಭಾರೀ ಮಳೆ ಹಿನ್ನಲೆ| ದ.ಕ ಜಿಲ್ಲೆಯಾದ್ಯಂತ ಆ.29ರಂದು ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆ ಕಾರಣದಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರು ನದಿತೀರಗಳಿಗೆ, ಸಮುದ್ರ ಕಿನಾರೆಗಳತ್ತ ತೆರಳದಂತೆ ಸೂಚಿಸಲಾಗಿದೆ.

ಭಾರೀ ಮಳೆ ಹಿನ್ನಲೆ| ದ.ಕ ಜಿಲ್ಲೆಯಾದ್ಯಂತ ಆ.29ರಂದು ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ರಾಜ್ಯಾದ್ಯಂತ ಭಾರೀ ಮಳೆ| 3 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದು(ಆ.28) ರಜೆ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಇಂದು ಕೂಡ ವರುಣಾರ್ಭಟ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ, ಶಿವಮೊಗ್ಗ ಹಾಗು ಉತ್ತರಕನ್ನಡ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಯ ಟಿಕೆ ಸ್ವರೂಪ ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಶಿವಮೊಗ್ಗ

ರಾಜ್ಯಾದ್ಯಂತ ಭಾರೀ ಮಳೆ| 3 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದು(ಆ.28) ರಜೆ ಘೋಷಣೆ Read More »

‘ತಾನು ಹೇಳಿದ್ದೆಲ್ಲಾ ಸುಳ್ಳು’| ಸತ್ಯ ಒಪ್ಪಿಕೊಂಡ ಸುಜಾತಾ ಭಟ್

ಸಮಗ್ರ ನ್ಯೂಸ್: ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್ಐಟಿ ಸುಜಾತಾ ಭಟ್ ಗೆ ನೋಟೀಸ್ ನೀಡಿರುವ ಬೆನ್ನಲ್ಲೇ ಸುಜಾತಾ‌ಭಟ್ ಪ್ರಕರಣದಲ್ಲಿ ಉಲ್ಟಾ ಹೊಡೆದಿದ್ದಾರೆ. Insightrush ಎಂಬ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ‘ಅನನ್ಯ ಭಟ್ ಕುರಿತಂತೆ ನಾನು‌ ಹೇಳಿದ್ದೆಲ್ಲಾ ಸುಳ್ಳು. ಜಾಗದ ವಿಚಾರವಾಗಿ ನಾನು ಆ ರೀತಿ ಹೇಳಿದ್ದೆ. ಕೇಸನ್ನು ವಾಪಾಸು ಪಡೆಯುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ. ನನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿರುವುದಾಗಿ ಸುಜಾತಾ ಭಟ್ ದೂರು ನೀಡಿದ್ದರು. ತಮ್ಮ ಪುತ್ರಿಯ

‘ತಾನು ಹೇಳಿದ್ದೆಲ್ಲಾ ಸುಳ್ಳು’| ಸತ್ಯ ಒಪ್ಪಿಕೊಂಡ ಸುಜಾತಾ ಭಟ್ Read More »

ಮೈಸೂರು: ಈ ಬಾರಿಯ ದಸರಾ ಉದ್ಘಾಟಕರಾಗಿ ಭಾನು ಮುಷ್ತಾಕ್

ಸಮಗ್ರ ನ್ಯೂಸ್: ಲೇಖಕಿ ಬಾನು ಮುಷ್ತಾಕ್ ಈ ಬಾರಿಯ ‘ಮೈಸೂರು ದಸರಾ’ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದಸರಾ ಮಹೋತ್ಸವ ಉದ್ಘಾಟನೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರು ಉದ್ಘಾಟಿಸಲಿದ್ದಾರೆ.ಅವರ ಹೃದಯ ದೀಪ ಕೃತಿಗೆ ಬೂಕರ್

ಮೈಸೂರು: ಈ ಬಾರಿಯ ದಸರಾ ಉದ್ಘಾಟಕರಾಗಿ ಭಾನು ಮುಷ್ತಾಕ್ Read More »

ಕೊಟ್ಟಿಗೆಹಾರ : ಡೆಮೋ ಕಾರಿನಿಂದ ಡೀಸೆಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ

ಸಮಗ್ರ ನ್ಯೂಸ್: ಶೋ ರೂಂ ಸಿಬ್ಬಂದಿಗಳೇ ಡೆಮೋ ಕಾರಿನಿಂದ ಡಿಸೇಲ್ ಕಳವು ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ರಸ್ತೆ ಮಧ್ಯೆ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಕಡೂರಿನತ್ತ ಹೊಸ ಟಾಟಾ ಯೋಧ ಕಾರನ್ನು ಶೋ ರೂಂಗೆ ತಲುಪಿಸಲು ಹೊರಟಿದ್ದ ಸಿಬ್ಬಂದಿಗಳು ಮಾರ್ಗ ಮಧ್ಯೆ ಕಾರಿನ ಇಂಜಿನ್ ಪಕ್ಕದ ಪಂಪ್ ಪೈಪ್ ಬಿಚ್ಚಿ ಸುಮಾರು 10 ಲೀಟರ್ ಡಿಸೇಲ್ ಇಳಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ. ಕಳ್ಳತನ ಮಾಡಿದ ಹಣದಿಂದ ಮದ್ಯ‌ ಸೇವಿಸಿ, ನಾನ್ ವೆಜ್ ಊಟ

ಕೊಟ್ಟಿಗೆಹಾರ : ಡೆಮೋ ಕಾರಿನಿಂದ ಡೀಸೆಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ Read More »