Editor

ಬಸ್ಸುಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಲಾರಿ ಪಲ್ಟಿ – ನಾಲ್ವರು ಸ್ಥಳದಲ್ಲೇ ಸಾವು.!

ಸಮಗ್ರ ನ್ಯೂಸ್ : ಶಾಲಾ ಮುಗಿಸಿ ಮನೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಬೃಹತ್ ಲಾರಿಯೊಂದು ಪಲ್ಟಿಯಾಗಿರುವ ದಾರುಣ ಘಟನೆ ಕೇರಳ ಪಾಲಕ್ಕಾಡ್‌ನಲ್ಲಿ ನಡೆದಿದೆ.ಮೃತರನ್ನು 14 ವರ್ಷ ವಯಸ್ಸಿನ ಇರ್ಫಾನಾ, ಮಿತಾ, ರಿಯಾ ಮತ್ತು ಆಯೇಶಾ ಎಂದು ಗುರುತಿಸಲಾಗಿದೆ.ಕೋಝಿಕ್ಕೋಡ್-ಪಾಲಕ್ಕಾಡ್ ರಾಜ್ಯ ಹೆದ್ದಾರಿ ಪನಯಂಪದಂನ ಕಲ್ಲಡಿಕೋಡ್ ನಲ್ಲಿ ಸಂಜೆ 4 ಗಂಟೆಗೆ ಈ ಘಟನೆಯಾಗಿದೆ. ಶಾಲೆ ಮುಗಿಸಿ ನಾಲ್ವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗಲು ಬಸ್ ಗಾಗಿ ಕಾಯುತ್ತಿದ್ದರು, ಈ ವೇಳೆ ಸಿಮೆಂಟ್ ಸಾಗಿಸುತ್ತಿದ್ದ […]

ಬಸ್ಸುಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಲಾರಿ ಪಲ್ಟಿ – ನಾಲ್ವರು ಸ್ಥಳದಲ್ಲೇ ಸಾವು.! Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ಪವಿತ್ರಾ ಸೇರಿ ದರ್ಶನ್ ಗ್ಯಾಂಗ್ ನ 7 ಮಂದಿಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ದರ್ಶನ್​​ ಮತ್ತು ಗ್ಯಾಂಗ್​ ಸೇರಿ 7 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ 130 ದಿನಗಳ ಮೇಲಾಗಿದ್ದವು. ಆ ಬಳಿಕ ಅವರು ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳಿಗೂ ಈಗ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣ| ಪವಿತ್ರಾ ಸೇರಿ ದರ್ಶನ್ ಗ್ಯಾಂಗ್ ನ 7 ಮಂದಿಗೆ ಜಾಮೀನು ಮಂಜೂರು Read More »

ಥಿಯೇಟರ್ ನ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣ| ನಟ ಅಲ್ಲು ಅರ್ಜುನ್ ‌ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ. ಮೃತರ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ ಚಿಕ್ಕಡ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 105 (ಕೊಲೆಗೆ ಕಾರಣವಲ್ಲದ ನರಹತ್ಯೆಗೆ ಶಿಕ್ಷೆ) ಮತ್ತು 118 (1) ಆರ್ / ಡಬ್ಲ್ಯೂ 3 (5) (ಸ್ವಯಂಪ್ರೇರಿತವಾಗಿ ಗಾಯ ಅಥವಾ ತೀವ್ರ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ನ ಕೇಂದ್ರ ವಲಯದ ಉಪ

ಥಿಯೇಟರ್ ನ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣ| ನಟ ಅಲ್ಲು ಅರ್ಜುನ್ ‌ಪೊಲೀಸ್ ವಶಕ್ಕೆ Read More »

ಮಂಡ್ಯ ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್

ಸಮಗ್ರ ನ್ಯೂಸ್: ಡಿ.13 ರಂದು ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋಗಿ ಅಪ್ಪ ಕೂಡ ಅರೆಸ್ಟ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿ ಶಿವಣ್ಣ ಎಂಬುವರ ಪುತ್ರ ಮಧುಸೂದನ್ ಜೈಲು ಸೇರಿದ್ದಾನೆ. ಜೈಲಿನಲ್ಲಿದ್ದ ಮಧುಸೂದನ್ ತಂದೆ ಶಿವಣ್ಣ ಅವರಿಗೆ ಕರೆ ಮಾಡಿ “ನನ್ನ ಪರಿಚಿತರೊಬ್ಬರು ಮಳವಳ್ಳಿಯಲ್ಲಿ ಬಟ್ಟೆ ಇದ್ದ ಬ್ಯಾಗ್ ಕೊಡುತ್ತಾರೆ, ತೆಗೆದುಕೊಂಡು ಬಾ” ಎಂದು ಹೇಳಿದ್ದಾನೆ.ಮಗನ ಮಾತಿನಂತೆ ಶಿವಣ್ಣ ಅವರು ಮಳ್ಳವಳ್ಳಿಯಲ್ಲಿ ಅಪರಿಚಿತನಿಂದ ಬಟ್ಟೆ ಇದ್ದ ಬ್ಯಾಗ್ ಪಡೆದು, ಮಂಡ್ಯದ ಕಾರಾಗೃಹಕ್ಕೆ ಬರುತ್ತಾರೆ.

ಮಂಡ್ಯ ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋದ ತಂದೆಯೂ ಅರೆಸ್ಟ್ Read More »

ಮದುವೆ ಮನೆಗೆ ಮಾಜಿ ಪ್ರೇಯಸಿ ಎಂಟ್ರಿ- ಯುವತಿಯ ಹೈಡ್ರಾಮಾಗೆ ಕುಟುಂಬಸ್ಥರು ಶಾಕ್

ಸಮಗ್ರ ನ್ಯೂಸ್ : ಯುವಕನೊಬ್ಬನ ಮದುವೆಯ ದಿನವೇ ಆತನ ಮಾಜಿ ಪ್ರಿಯತಮೆ ಮದುವೆ ಮನೆಗೆ ಎಂಟ್ರಿಕೊಟ್ಟು ಶಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆಸಿದ್ದು, ವರ ಸೇರಿದಂತೆ ಆತನ ಇಡೀ ಕುಟುಂಸ್ಥರು ಕಂಗಾಲಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಂದೇ ಮದುವೆಯಾಗಬೇಕಿದ್ದ ಯುವಕ ವರನ ಗೆಟಪ್‌ನಲ್ಲಿ ತಯಾರಾಗಿ ಕುಳಿತಿರುವುದು ಕಂಡು ಬಂದರೆ, ಆತನ ಮಾಜಿ ಪ್ರಿಯತಮೆ ಪಕ್ಕದಲ್ಲೇ ಕುಳಿತುಕೊಂಡು ಆತ ತನಗೆ ಮೋಸ

ಮದುವೆ ಮನೆಗೆ ಮಾಜಿ ಪ್ರೇಯಸಿ ಎಂಟ್ರಿ- ಯುವತಿಯ ಹೈಡ್ರಾಮಾಗೆ ಕುಟುಂಬಸ್ಥರು ಶಾಕ್ Read More »

ನಾಲ್ಕಲ್ಲ 15 ಜನರು ಮುಳುಗಿ ಹೋಗುತ್ತಿದ್ದೆವು : ಮುರುಡೇಶ್ವರ ದುರಂತದ ನೈಜ ಘಟನೆ ವಿವರಿಸಿದ ವಿದ್ಯಾರ್ಥಿನಿ!

ಸಮಗ್ರ ನ್ಯೂಸ್: ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಅದರಲ್ಲಿ ಬದುಕುಳಿದು ಬಂದಂತಹ ವಿದ್ಯಾರ್ಥಿನಿಯಾದ ಪಲ್ಲವಿ ಸಮುದ್ರದ ಅಲೆಗಳ ಹೊಡೆತಕ್ಕೆ ನಾವು ನಾಲ್ಕಲ್ಲ 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು ಎಂದು ಕಣ್ಣೆದುರಿಗೆ ನಡೆದ ನೈಜ ಘಟನೆ ವಿವರಿಸಿದ್ದಾಳೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ದೊಡ್ಡ ದೊಡ್ಡ ಅಲೆಗಳಿಗೆ

ನಾಲ್ಕಲ್ಲ 15 ಜನರು ಮುಳುಗಿ ಹೋಗುತ್ತಿದ್ದೆವು : ಮುರುಡೇಶ್ವರ ದುರಂತದ ನೈಜ ಘಟನೆ ವಿವರಿಸಿದ ವಿದ್ಯಾರ್ಥಿನಿ! Read More »

ಅಪಘಾತ ಸಂದರ್ಭ ಬ್ಯಾಗ್ ನೊಂದಿಗೆ ಬಸ್‌ನಿಂದ ಹೊರಗೆ ಹಾರಿದ್ದ ಚಾಲಕ

ಸಮಗ್ರ ನ್ಯೂಸ್ : ಡಿ. 09 ರಂದು ರಾತ್ರಿ ಕುರ್ಲಾದಲ್ಲಿ ನಡೆದ ವಿದ್ಯುತ್ ಚಾಲಿತ ಬಸ್‌ ಅಪಘಾತದ ಸಂದರ್ಭದಲ್ಲಿ ಬಸ್ ಚಾಲಕ ತನ್ನ ಬೆನ್ನಿಗೆ ಎರಡು ಬ್ಯಾಗ್ ಗಳನ್ನು ಕಟ್ಟಿಕೊಂಡು ಬಸ್‌ನ ಕಿಟಕಿಯಿಂದ ಹೊರಗೆ ಹಾರಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮುಂಬೈ ಮಹಾನಗರ ಪಾಲಿಕೆ ನಿರ್ವಹಿಸುವ ಬೆಸ್ಟ್ ವಿದ್ಯುತ್ ಚಾಲಿತ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಶ್ಚಿಮ ಕುರ್ಲಾದ ಎಸ್.ಜಿ.ಬರ್ವೆ ಮಾರ್ಗದ ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದ್ದರಿಂದ, 22 ವಾಹನಗಳು ಜಖಂಗೊಂಡು, ಕರ್ತವ್ಯದಲ್ಲಿದ್ದ

ಅಪಘಾತ ಸಂದರ್ಭ ಬ್ಯಾಗ್ ನೊಂದಿಗೆ ಬಸ್‌ನಿಂದ ಹೊರಗೆ ಹಾರಿದ್ದ ಚಾಲಕ Read More »

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಇನ್ನೆರಡು ದಿನವೂ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುರುವಾರ(ಡಿ.12) ತುಸು ಬಿರುಸಾಗಿ ವರ್ಷಧಾರೆಯಾಗಿದೆ. ಬೆಂಗಳೂರು ನಗರ, ಬೆಂ,ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಡಿ.13 ಮತ್ತು ಡಿ.18ರಂದು ಬಿರುಸಾಗಿ ವರ್ಷಧಾರೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 48

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಇನ್ನೆರಡು ದಿನವೂ ಭಾರೀ ಮಳೆ ಮುನ್ಸೂಚನೆ Read More »

ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಗುಕೇಶ್

ಸಮಗ್ರ ನ್ಯೂಸ್ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಗುರುವಾರ ವಿಶ್ವ ಚೆಸ್​ ಚಾಂಪಿಯನ್​ಶಿಪ್​ನಲ್ಲಿ ವಿನೂತನ ದಾಖಲೆ ಮಾಡಿದ್ದಾರೆ. ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಗುರುವಾರ ನಡೆದ 14ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಚೀನಾದ ಡಿಂಗ್ ಲಿರಿನ್ ಅವರನ್ನು ಮಣಿಸಿದರು. ಈ ಮೂಲಕ ೧೮ನೇ ವಯಸ್ಸಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. ಭಾರತದ ವಿಶ್ವನಾಥನ್ ಆನಂದ್ ೨೦೧೨ರಲ್ಲಿ ವಿಶ್ವ ಚಾಂಪಿಯನ್ ಪಟ್ಟ

ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಗುಕೇಶ್ Read More »

ಉಪ್ಪಿನಂಗಡಿ: ಅನಾಮಧೇಯ ಕರೆ ಸ್ವೀಕರಿಸಿದ ಕೂಡಲೇ ಖಾತೆಯಿಂದ ಹಣ ವರ್ಗಾವಣೆ| ಸೈಬರ್ ವಂಚಕರಿಂದ ಹುಷಾರಾಗಿರಿ…

ಸಮಗ್ರ ನ್ಯೂಸ್: ಸೈಬರ್‌ ವಂಚಕರು ಹಣ ದೋಚಲು ಹೊಸ ಹೊಸ ತಂತ್ರ ಹುಡುಕುತ್ತಿದ್ದು, ನಗರದಲ್ಲಿ ಪೋನ್‌ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ವ್ಯಕ್ತಿಯೋರ್ವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಮುಂಜಾನೆ ಪೋನ್‌ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ ಕೂಡಲೇ ಕರೆ ಕಡಿತಗೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಈ ದೂರವಾಣಿ ಸಂಖ್ಯೆ ಜೋಡಣೆ ಆಗಿದ್ದ ಬ್ಯಾಂಕಿನ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ದೂರು ಸಲ್ಲಿಸಿದಾಗ, 161 ರೂ. ವರ್ಗಾವಣೆಗೊಂಡಿದ್ದು, ಸಮರ್ಪಕ ಬ್ಯಾಲೆನ್ಸ್‌

ಉಪ್ಪಿನಂಗಡಿ: ಅನಾಮಧೇಯ ಕರೆ ಸ್ವೀಕರಿಸಿದ ಕೂಡಲೇ ಖಾತೆಯಿಂದ ಹಣ ವರ್ಗಾವಣೆ| ಸೈಬರ್ ವಂಚಕರಿಂದ ಹುಷಾರಾಗಿರಿ… Read More »