Editor

ಶಾಸಕ ಅಶೋಕ್ ರೈ ಜನಪ್ರಿಯತೆ ‌ಬೆನ್ನಲ್ಲೇ ಪುತ್ತೂರಿಗೆ ದಾಂಗುಡಿಯಿಟ್ಟ ಬಿ.ವೈ ವಿಜಯೇಂದ್ರ| ಕರಾವಳಿ ರಾಜಕೀಯದಲ್ಲಿ ಹೊಸ ಸಂಚಲನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಈ ಮೊದಲು ಕಟ್ಟಾ ಬಿಜೆಪಿ ಕ್ಷೇತ್ರವಾಗಿತ್ತು. ಆದರೆ ಈಗ ಬಿಜೆಪಿಯಿಂದಲೇ ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ಅಶೋಕ್ ರೈ ಇಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪುತ್ತೂರಿಗೆ ಭೇಟಿ ನೀಡಿದ್ದಾರೆ. ಬಿಜೆಪಿ ಘಟಾನುಘಟಿ ನಾಯಕರು ಪುತ್ತೂರಿಗೆ ಭೇಟಿ ನೀಡಿದ್ದು ಅಪರೂಪ. ಕೇವಲ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಂದು ಹೋಗಿರಬಹುದು. ಆದರೆ ಇದೀಗ ಬಿವೈ ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್, ಡಿವಿ ಸದಾನಂದ ಗೌಡ ಜೊತೆಗೂಡಿ […]

ಶಾಸಕ ಅಶೋಕ್ ರೈ ಜನಪ್ರಿಯತೆ ‌ಬೆನ್ನಲ್ಲೇ ಪುತ್ತೂರಿಗೆ ದಾಂಗುಡಿಯಿಟ್ಟ ಬಿ.ವೈ ವಿಜಯೇಂದ್ರ| ಕರಾವಳಿ ರಾಜಕೀಯದಲ್ಲಿ ಹೊಸ ಸಂಚಲನ Read More »

ಧರ್ಮಸ್ಥಳ ಬುರುಡೆ ಪ್ರಕರಣ| ತಿಮರೋಡಿ, ಮಟ್ಟಣ್ಣನವರ್ ಸೇರಿ‌ 6 ಮಂದಿ ವಿರುದ್ಧ ಇಂದು ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಲಾಗಿದೆ ಎಂದು ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಂದು ಎಸ್‌ಐಟಿ ವತಿಯಿಂದ 4000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗುವುದು. ಎಸ್‌ಐಟಿಯ ಮುಖ್ಯ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರು ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಒಟ್ಟು ಆರು ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್, ವಿಠಲ್ ಗೌಡ ಸೇರಿ

ಧರ್ಮಸ್ಥಳ ಬುರುಡೆ ಪ್ರಕರಣ| ತಿಮರೋಡಿ, ಮಟ್ಟಣ್ಣನವರ್ ಸೇರಿ‌ 6 ಮಂದಿ ವಿರುದ್ಧ ಇಂದು ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ Read More »

ಶಬರಿಮಲೆ ಭಕ್ತಸಂದಣಿಗೆ ಸುಗಮ ದರ್ಶನ ಕಲ್ಪಿಸಲು ಕೇರಳಕ್ಕೆ ಕರ್ನಾಟಕ ಮನವಿ

ಸಮಗ್ರ ನ್ಯೂಸ್: ನವೆಂಬರ್ ನಿಂದ ಜನವರಿವರೆಗೆ ವಾರ್ಷಿಕ ಕರ್ನಾಟಕದಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕೇರಳದ ಸಹಕಾರವನ್ನು ಕೋರಿದೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೇರಳದ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ಅವರಿಗೆ ಪತ್ರ ಬರೆದು ಯಾತ್ರಿಕರ ಕಲ್ಯಾಣಕ್ಕಾಗಿ ಸಂಘಟಿತ ಪ್ರಯತ್ನಗಳನ್ನು ಕೋರಿದ್ದಾರೆ. ಕರ್ನಾಟಕದಿಂದ ಪ್ರತಿ ವರ್ಷ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಹೀಗಾಗಿ ನಮ್ಮ ರಾಜ್ಯದಿಂದ, ವಿಶೇಷವಾಗಿ ನವೆಂಬರ್ ನಿಂದ ಜನವರಿ

ಶಬರಿಮಲೆ ಭಕ್ತಸಂದಣಿಗೆ ಸುಗಮ ದರ್ಶನ ಕಲ್ಪಿಸಲು ಕೇರಳಕ್ಕೆ ಕರ್ನಾಟಕ ಮನವಿ Read More »

ಬೆಂಗಳೂರಿನಲ್ಲಿ ಹಾಡುಹಗಲೇ 7 ಕೋಟಿ ರೂ ದರೋಡೆ| ಶಂಕಿತರ ಫೋಟೋ ರಿಲೀಸ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ. ಹಣ ತುಂಬಿಕೊಂಡಿದ್ದ ಸಿಎಂಎಸ್ ಚಾಲಕನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ 7 ಕೋಟಿ 11ಲಕ್ಷ ರಾಬರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ. ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ. ಹಳೆ ಆರೋಪಿಗಳು ಹಾಗು

ಬೆಂಗಳೂರಿನಲ್ಲಿ ಹಾಡುಹಗಲೇ 7 ಕೋಟಿ ರೂ ದರೋಡೆ| ಶಂಕಿತರ ಫೋಟೋ ರಿಲೀಸ್ Read More »

ದತ್ತ ಜಯಂತಿ ಹಿನ್ನಲೆ| ಡಿ.1ರಿಂದ 4 ದಿನ ಮುಳ್ಳಯ್ಯನ‌ಗಿರಿ ಪ್ರವಾಸಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ದತ್ತ ಜಯಂತಿ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರು ಪ್ರವಾಸಕ್ಕೆ ಪ್ಲಾನ್ ಮಾಡಿರೋ ಜನರು ನೋಡಲೇಬೇಕಾದ ಸುದ್ದಿ ಹೊರಬಿದ್ದಿದೆ. ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಮಾಣಿಕ್ಯಧಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.ಡಿಸೆಂಬರ್ 2, 3 ಹಾಗೂ 4ರಂದು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 5ರ ಬೆಳಗ್ಗೆ

ದತ್ತ ಜಯಂತಿ ಹಿನ್ನಲೆ| ಡಿ.1ರಿಂದ 4 ದಿನ ಮುಳ್ಳಯ್ಯನ‌ಗಿರಿ ಪ್ರವಾಸಕ್ಕೆ ನಿರ್ಬಂಧ Read More »

ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ವಾಪಾಸಾತಿಗೆ ಕ್ರಮ | ಅಲ್ಪಸಂಖ್ಯಾತ ನಿಯೋಗಕ್ಕೆ ಸಿಎಂ ಭರವಸೆ

ಸಮಗ್ರ ನ್ಯೂಸ್: ಕಳೆದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅತಿ ವಿವಾದಿತ ಮತ್ತು ಪ್ರಚೋದಿತ `ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 2021 (ಗೋ ಹತ್ಯೆ ನಿಷೇಧ ಕಾಯ್ದೆ) ಹಾಗೂ ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ 2021 (ಮತಾಂತರ ನಿಷೇಧ ಕಾಯ್ದೆ) ಅನ್ನು ವಾಪಸ್ ಪಡೆಯುವ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಗಾಟದ

ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ವಾಪಾಸಾತಿಗೆ ಕ್ರಮ | ಅಲ್ಪಸಂಖ್ಯಾತ ನಿಯೋಗಕ್ಕೆ ಸಿಎಂ ಭರವಸೆ Read More »

ಯಕ್ಷಗಾನ ಕಲಾವಿದರಲ್ಲಿ ಬಹುತೇಕ ಸಲಿಂಗ ಕಾಮಿಗಳು| ವಿವಾದಾತ್ಮಕ ಹೇಳಿಕೆ ನೀಡಿದ ಡಾ. ಪುರುಷೋತ್ತಮ ಬಿಳಿಮಲೆ

ಸಮಗ್ರ ನ್ಯೂಸ್: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದರು. ಸತ್ಯವನ್ನು ಹೇಳಲು ಹಿಂಜರಿಯಬಾರದು.

ಯಕ್ಷಗಾನ ಕಲಾವಿದರಲ್ಲಿ ಬಹುತೇಕ ಸಲಿಂಗ ಕಾಮಿಗಳು| ವಿವಾದಾತ್ಮಕ ಹೇಳಿಕೆ ನೀಡಿದ ಡಾ. ಪುರುಷೋತ್ತಮ ಬಿಳಿಮಲೆ Read More »

ಸಿಎಂ ಸ್ಥಾನ ಇಲ್ಲದಿದ್ದರೆ ಈ ಬೇಡಿಕೆಗಳನ್ನು ಈಡೇರಿಸಿ| ಹೈಕಮಾಂಡ್ ಮುಂದೆ ಹೊಸ ದಾಳ ಉರುಳಿಸಿದ ಡಿಕೆಶಿ

ಸಮಗ್ರ ನ್ಯೂಸ್: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಭವಿಷ್ಯ ಮತ್ತು ಪಕ್ಷದಲ್ಲಿನ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಲು ದೆಹಲಿ ಅಂಗಳದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಆಸೆ ಕೈಗೂಡದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ

ಸಿಎಂ ಸ್ಥಾನ ಇಲ್ಲದಿದ್ದರೆ ಈ ಬೇಡಿಕೆಗಳನ್ನು ಈಡೇರಿಸಿ| ಹೈಕಮಾಂಡ್ ಮುಂದೆ ಹೊಸ ದಾಳ ಉರುಳಿಸಿದ ಡಿಕೆಶಿ Read More »

ಶಬರಿಮಲೆಯಲ್ಲಿ ಭಾರೀ ಜನಸಾಗರ| ಅವ್ಯವಸ್ಥೆ, ನೂಕುನುಗ್ಗಲಿಗೆ ಮಹಿಳೆ ಸಾವು

ಸಮಗ್ರ ನ್ಯೂಸ್: ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ ‘ಮಂಡಲ ಮಕರವಿಳಕ್ಕು’ ಯಾತ್ರೆ ಆರಂಭವಾದ 2ನೇ ದಿನವೇ ಭಾರಿ ಅವ್ಯವಸ್ಥೆ ಉಂಟಾಗಿದ್ದು, 48 ಗಂಟೆಯಲ್ಲಿ ಕರ್ನಾಟಕದ ಭಕ್ತರು ಸೇರಿ 2 ಲಕ್ಷ ಭಕ್ತರು ಆಗಮಿಸಿದ ಕಾರಣ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಈ ವೇಳೆ ಸರದಿಯಲ್ಲಿ ನಿಂತಿದ್ದ 58 ವರ್ಷದ ಮಹಿಳಾ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಗಮಿಸಿದ ಭಕ್ತರನ್ನು ನಿಯಂತ್ರಿಸಲು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಶಬರಿಮಲೆಯಲ್ಲಿ ಭಾರೀ ಜನಸಾಗರ| ಅವ್ಯವಸ್ಥೆ, ನೂಕುನುಗ್ಗಲಿಗೆ ಮಹಿಳೆ ಸಾವು Read More »

ಹಳೆ ವಾಹನ ಓಡ್ಸೋದು ಇನ್ನಷ್ಟು ದುಬಾರಿ| ಫಿಟ್ನೆಸ್ ದರ 10 ಪಟ್ಟು ಏರಿಕೆ ಮಾಡಿದ ಕೇಂದ್ರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಕೇಂದ್ರ ಮೋಟಾರು ವಾಹನ ನಿಯಮಗಳನ್ನು ತಿದ್ದುಪಡಿ ಮಾಡಿದೆ ಮತ್ತು ದೇಶಾದ್ಯಂತ ವಾಹನಗಳ ಫಿಟ್‌ನೆಸ್ ಪರೀಕ್ಷೆಯ ಶುಲ್ಕವನ್ನು ಪ್ರಸ್ತುತ ಮಟ್ಟಕ್ಕಿಂತ 10 ಪಟ್ಟು ಹೆಚ್ಚಿಸಿದೆ. ಹೊಸ ನಿಯಮಗಳ ಅಡಿಯಲ್ಲಿ, ಹೆಚ್ಚಿನ ಫಿಟ್‌ನೆಸ್ ಪರೀಕ್ಷಾ ಶುಲ್ಕದ ವಯಸ್ಸಿನ ಶ್ರೇಣಿಯನ್ನು 15 ವರ್ಷಗಳಿಂದ 10 ವರ್ಷಗಳಿಗೆ ಬದಲಾಯಿಸಲಾಗಿದೆ. ಸರ್ಕಾರವು ಮೂರು ಸ್ಪಷ್ಟ ವಯಸ್ಸಿನ ವರ್ಗಗಳನ್ನು ಪರಿಚಯಿಸಿದೆ: 10-15 ವರ್ಷಗಳು, 15-20 ವರ್ಷಗಳು ಮತ್ತು 20 ವರ್ಷಗಳಿಗಿಂತ ಹೆಚ್ಚು. ವಾಹನವು ಹಳೆಯದಾಗುತ್ತಿದ್ದಂತೆ ಪ್ರತಿಯೊಂದು ವರ್ಗವು ಈಗ ಹೆಚ್ಚಿನ

ಹಳೆ ವಾಹನ ಓಡ್ಸೋದು ಇನ್ನಷ್ಟು ದುಬಾರಿ| ಫಿಟ್ನೆಸ್ ದರ 10 ಪಟ್ಟು ಏರಿಕೆ ಮಾಡಿದ ಕೇಂದ್ರ Read More »