ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ
ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ. ಅಧಿಕಾರಿಗಳ ಬೇಜವಾಬ್ದಾರಿ, ಮುಜುರಾಯಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಕ್ಕೆ ಪ್ರತೀವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ […]










