‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ
ಬೆಂಗಳೂರು. ಅಕ್ರಮ ಭೂ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಿನ್ನಡೆಯಾಗಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಎಸ್‌ವೈ ವಿರುದ್ಧ ಮರು ತನಿಖೆಗೆ ಆದೇಶಿಸಿದೆ. ಅಕ್ರಮ ಭೂ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ತನಿಖಾ ಅಧಿಕಾರಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸಮರ್ಪಕ ತನಿಖೆಯನ್ನು ನಡೆಸದೇ ಕ್ಲೀನ್ ಚೀಟ್ ನೀಡಿರುವುದು ಸರಿಯಲ್ಲ ಎಂದಿರುವ ನ್ಯಾಯಾಲಯ ಹೆಚ್ಚಿನ ತನಿಖೆಗೆ ಇಂದು ಆದೇಶ ನೀಡಿತು. ನ್ಯಾಯಮೂರ್ತಿ ಶ್ರೀಧರ್ ಗೋಪಾಲಕೃಷ್ಣ ಭಟ್ ಪ್ರಕರಣದ ತನಿಖೆ ಕುರಿತು […]










