Editor

ವೈಕುಂಠದ ಹಾದಿ ತುಳಿದ ಗೋಕರ್ಣ ಪರ್ತಗಾಳಿ ಮಠಾದೀಶ

ಉತ್ತರಕನ್ನಡ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಮಹಾಸ್ವಾಮಿಗಳು ಹರಿಪಾದ ಸೇರಿದ್ದಾರೆ. ಗೋವಾದಲ್ಲಿನ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ ಬಗ್ಗೆ ವರದಿಯಾಗಿದೆ. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳನ್ನು ಅಭಿವೃದ್ಧಿ ಮಾಡಿ, ಸರಳತೆ, ಸಂಯಮ, ನಿರ್ವಿ ವಾದದಿಂದ ಕೂಡಿದ್ದ ಅವರು ಅಧ್ಯಾತ್ಮಿಕ ಸಾಧನೆಯಿಂದ ಸರ್ವರ ಪ್ರೀತಿಪಾತ್ರರಾಗಿದ್ದರು. ಶ್ರೀಗಳ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅನೇಕ ಗಣ್ಯರು ಶ್ರೀಗಳ ನಿಧನಕ್ಕೆ ಸಂತಾಪ […]

ವೈಕುಂಠದ ಹಾದಿ ತುಳಿದ ಗೋಕರ್ಣ ಪರ್ತಗಾಳಿ ಮಠಾದೀಶ Read More »

ಜು.20: ದ್ವಿತೀಯ ಪಿಯುಸಿ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ (Second PUC Results 2021) ಪ್ರಕಟವಾಗುತ್ತದೆ. ಸಂಜೆ 4.30ಕ್ಕೆ ಸುಮಾರಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಎಸ್‌ಎಸ್‌ಎಲ್​ಸಿ ಫಲಿತಾಂಶ ಮತ್ತು ಪ್ರಥಮ ಪಿಯುಸಿ ಫಲಿತಾಂಶವನ್ನು ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶವನ್ನು ನೀಡಲಾಗುತ್ತದೆ. ಗ್ರೇಡ್ ಬದಲಿಗೆ ಅಂಕಗಳ ಆಧಾರದಲ್ಲಿ ನಾಳೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶ ನೋಡುವುದು ಹೇಗೆ? ಫಲಿತಾಂಶ ನೀಡಲು ಪಿಯು ಬೋರ್ಡ್ ಮುಂದೆ ಸವಾಲೊಂದು

ಜು.20: ದ್ವಿತೀಯ ಪಿಯುಸಿ ಫಲಿತಾಂಶ Read More »

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿದ್ದು, ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್‌ ದೊರೆಯುವ ಸಾಧ್ಯತೆ ಇದೆ. ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು, ಈ ಸಂಗತಿಯನ್ನು ಬಹಿರಂಗ ಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆ. ಅಲ್ಲದೆ ಸದ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ. ಕಟೀಲ್‌ ಅವರು ತುಳುವಿನಲ್ಲಿ ಮಾತನಾಡಿದ್ದು, ‘ಯಾರಿಗೂ ಹೇಳಬೇಡಿ. ಶೆಟ್ಟರ್‌, ಈಶ್ವರಪ್ಪ

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ Read More »

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ|

ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ- ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಗೆಲುವು ಸಾಧಿಸಿದೆ.ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್, ಪೃಥ್ವಿ ಶಾ ದಿಟ್ಟ ಆರಂಭ, ಶಿಖರ್ ಧವನ್ ನಾಯಕತ್ವದ ಆಟಕ್ಕೆ ಶ್ರೀಲಂಕಾ ತಲೆ ಬಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ಭರ್ಜರಿ ವಿಕೆಟ್ ಗೆಲುವು ಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ ಶ್ರೀಲಂಕಾ ನೀಡಿದ 263

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ| Read More »

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…?

ಮಂಗಳೂರು: ಹೌದು, ಕಳೆದ ವಾರ ಸುಳ್ಯದ ಜಾಲ್ಸೂರು ಗ್ರಾಮದ ಮರಸಂಕದ ವೃದ್ದೆಯೊಬ್ಬರನ್ನು ತುಂಬಿದ ಹೊಳೆಯಲ್ಲಿ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಎಲ್ಲಾ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದು, ಕ್ಷೇತ್ರದ ಶಾಸಕರೂ, ಸದ್ಯ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರನ್ನು ತರಾಟೆಗೆ ತೆಗೆದುಕೊಂಡಿದ್ದವು. ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದರು. ಆದರೆ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಈ ಭಾಗದ ರೋಗಿಯೊಬ್ಬರು ಬಿದ್ದಾಗ‌ ಚಯರ್ ಮೂಲಕ ಎತ್ತಿಕೊಂಡು ಹೋದ

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…? Read More »

ಮಡಿಕೇರಿ: ಕಾಮಗಾರಿ ಸ್ಥಳದಲ್ಲಿ ಮಗುಚಿದ ಕಾಂಕ್ರೀಟ್ ಲಾರಿ | ಕಾರ್ಮಿಕರಿಬ್ಬರ ದಾರುಣ ಸಾವು

ಮಡಿಕೇರಿ: ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚೇರಂಬಾಣೆ ಕೊಳಗದಾಳು ಬಳಿಯ ಪಾಕ ಎಂಬಲ್ಲಿ ನಡೆದಿದೆ. ಗದಗ ಮೂಲದ ಸಂತೋಷ್ ಬಂಡಾರಿ(27) ಮತ್ತು ಪ್ರವೀಣ್(21) ಮೃತ ದುರ್ದೈವಿ ಕಾರ್ಮಿಕರು. ಕಳೆದ 2 ದಿನಗಳಿಂದ ಮಳೆ ಅಲ್ಪ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಶನಿವಾರ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ 10 ಚಕ್ರದ ಲಾರಿ

ಮಡಿಕೇರಿ: ಕಾಮಗಾರಿ ಸ್ಥಳದಲ್ಲಿ ಮಗುಚಿದ ಕಾಂಕ್ರೀಟ್ ಲಾರಿ | ಕಾರ್ಮಿಕರಿಬ್ಬರ ದಾರುಣ ಸಾವು Read More »

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ

ಬೆಳ್ತಂಗಡಿ: ಅಂಗಡಿಯ ಮುಂದೆ ನಿಲ್ಲಿಸಿದ್ದ ಓಮ್ನಿಯೊಂದು ಏಕಾಏಕಿ ಮುಂದೆ ಇದ್ದ ಅಂಗಡಿಗೆ ಅಪ್ಪಳಿಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉಜಿರೆಯ ಶಾರ್ವರಿ ಕಾಂಪ್ಲೆಕ್ಸ್ ಮುಂಭಾಗ ಓಮ್ನಿ ನಿಲ್ಲಿಸಿ ಚಾಲಕ ಹೊರಹೋಗಿದ್ದಾನೆ. ಜೊತೆಗೆ ಮಗುವನ್ನು ಕರೆದೊಯ್ಯದೆ ವಾಹನದೊಳಗೆ ಬಿಟ್ಟು ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಓಮ್ನಿ ಸಡನ್ ಮುಂದೆ ಚಲಿಸಿದೆ. ಮುಂದೆ ಇದ್ದ ತರಕಾರಿ ಅಂಗಡಿಗೆ ಅಪ್ಪಳಿಸಿದೆ. ಅದೇ ಜಾಗದಲ್ಲಿ ಇಬ್ಬರು ಹುಡುಗಿಯರು ನಿಂತಿದ್ದರು. ಆದರೆ ಚಾಲಕನಿಲ್ಲದೆ ವಾಹನ ತಮ್ಮೆಡೆಗೆ ಬರುತ್ತಿರುವುದನ್ನು

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ Read More »

ಉಳ್ಳಾಲ: ಹುಡುಗಿ ಸ್ನಾನ ಮಾಡುತ್ತಿದ್ದಾಗ ಕೈಚಳಕ ಪ್ರದರ್ಶಿಸಿದ ವಿಕೃತ ಕಾಮಿ | ಕಿಟಕಿ ಮೂಲಕ ವಿಡಿಯೋ ಮಾಡಿ ಯುವಕ ಪರಾರಿ

ಮಂಗಳೂರು: ಯುವತಿ ಸ್ನಾನ ಮಾಡುತ್ತಿದ್ದಾಗ ಯುವಕನೊಬ್ಬ ಬಾತ್ರೂಮ್ ಕಿಟಕಿಯಿಂದ ವಿಡಿಯೋ ಚಿತ್ರೀಕರಿಸಿದ ಘಟನೆ ನಿನ್ನೆ ನಗರ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಈ ಬಗ್ಗೆ ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೋಟೆಕಾರು ಸಮೀಪದ ಮಾಡೂರು ನಿವಾಸಿ ಯುವತಿಯೊಬ್ಬಳು ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಬಳಿಕ ಎಂದಿನಂತೆ ಮನೆಯ ಪಕ್ಕದ ಸ್ನಾನಗೃಹಕ್ಕೆ ಸ್ನಾನಕ್ಕೆ ತೆರಳಿದ್ದಾರೆ. ಯುವತಿ ಸ್ನಾನಕ್ಕೆ ತೆರಳುವ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಕಾಮಿ, ಯುವತಿ ಒಳಹೊಕ್ಕುತ್ತಿದ್ದಂತೆ

ಉಳ್ಳಾಲ: ಹುಡುಗಿ ಸ್ನಾನ ಮಾಡುತ್ತಿದ್ದಾಗ ಕೈಚಳಕ ಪ್ರದರ್ಶಿಸಿದ ವಿಕೃತ ಕಾಮಿ | ಕಿಟಕಿ ಮೂಲಕ ವಿಡಿಯೋ ಮಾಡಿ ಯುವಕ ಪರಾರಿ Read More »

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ

ಮಂಗಳೂರು: ವಿಮಾನ ನಿಲ್ದಾಣ ಸಿಬ್ಬಂದಿ, ತಾಯಿಯೊಂದಿಗೆ ತವರಿಗೆ ಹೊರಟ ಆರು ತಿಂಗಳ ಮಗುವಿನ ನೆಗೆಟಿವ್ ರಿಪೋರ್ಟ್ ಕೇಳಿ ಗೊಂದಲ ಉಂಟಾದ ಘಟನೆ ಕುವೈತ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಭಾರತೀಯ ವಿದೇಶಾಂಗ ಇಲಾಖೆ ತಾಯಿ-ಮಗುವಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಕುವೈತ್ ನಲ್ಲಿದ್ದ ಮಂಗಳೂರು ಮೂಲದ ಅದಿತಿ ಸುದೇಶ್ ಎಂಬ ಮಹಿಳೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತಾಗಿ ಮಂಗಳೂರಿಗೆ ಆಗಮಿಸುವವರಿದ್ದರು. ಇದಕ್ಕಾಗಿ ತನ್ನ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದಿದ್ದರು. ಆದರೆ ಜೊತೆಗಿದ್ದ ತನ್ನ

6 ತಿಂಗಳ ಮಗುವಿನ ಕೋವಿಡ್ ರಿಪೋರ್ಟ್ ಕೇಳಿದ ಏರ್ಪೋರ್ಟ್ ಸಿಬ್ಬಂದಿ | ತಕ್ಷಣ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ | 20 ನಿಮಿಷ ತಡವಾಗಿ ಹೊರಟ ಏರ್ ಇಂಡಿಯಾ Read More »

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ

ಪುತ್ತೂರು ಜುಲೈ 18: ಚಲಿಸುತ್ತಿದ್ದ ರೈಲಿನ ಮೇಲೆ ಧರೆ ಕುಸಿದು ರೈಲಿನ ಎದುರಿನ ಗಾರ್ಡ್ ಗೆ ಹಾನಿಯಾಗಿರುವ ಘಟನೆ ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ನಡೆದಿದೆ. ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು-ಬೆಂಗಳೂರು ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ ಕುಸಿದಿದ್ದು,ಮಣ್ಣು ರೈಲು ಎಂಜಿನ್ ನ ಮುಂಭಾಗಕ್ಕೆ ಕುಸಿದಿದ್ದು,ರೈಲಿನ ಗಾರ್ಡ್ ಗೆ ಹಾನಿಯಾಗಿದೆ. ರೈಲು ಈಗ ಹಳಿಯಲ್ಲಿ ಬಾಕಿಯಾಗಿದ್ದು,ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು,ಮಣ್ಣು ತೆರವು ಕಾರ್ಯಾಚರಣೆ

ಪುತ್ತೂರು: ವಿಸ್ಟಾಡೋಂ ರೈಲಿನ ಮೇಲೆ ಕುಸಿದ ಧರೆ, ಗಾರ್ಡ್ ಗೆ ಹಾನಿ Read More »