Editor

ಕೇರಳದಲ್ಲಿ ಕೊರೊನಾ ಸೋಂಕು ಏರಿಕೆ: ಇಂದಿನಿಂದ ಕರ್ನಾಟಕದಿಂದ ಸರ್ಕಾರಿ, ಖಾಸಗಿ ಬಸ್ ಸಂಚಾರ ಸ್ಥಗಿತ

ಮಂಗಳೂರು: ನೆರೆಯ ರಾಜ್ಯವಾದ ಕೆರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಇಂದಿನಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದರಾದ ನಳೀನ್ ಕುಮಾರ್ ಕಟೀಲು ಅವರು ತಿಳಿಸಿದರು. ಅವರು ಜುಲೈ 31ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ಪಾಸಿಟಿವಿಟಿ ಪ್ರಕರಣಗಳು ಕಳೆದ ಕೆಲವು ದಿನಗಳಿಂದ […]

ಕೇರಳದಲ್ಲಿ ಕೊರೊನಾ ಸೋಂಕು ಏರಿಕೆ: ಇಂದಿನಿಂದ ಕರ್ನಾಟಕದಿಂದ ಸರ್ಕಾರಿ, ಖಾಸಗಿ ಬಸ್ ಸಂಚಾರ ಸ್ಥಗಿತ Read More »

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಕನ್ನ ಹಾಕಿದ ಖದೀಮರು

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಖದೀಮರು ಕನ್ನ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಎಸಗಿದವನನ್ನು ಐವಾನ್ ಎಂದು ಗುರುತಿಸಲಾಗಿದೆ. ಈತನ ಜಮೀನಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್‍ಲೈನ್ ಹಾದು ಹೋಗಿತ್ತು. ಈ ಪೈಪ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಾಗ ಕಂಪನಿಯವರು ಹುಡುಕಾಟ ನಡೆಸಿದಾಗ ಐವಾನ್ ಕೃತ್ಯ ಬೆಳಕಿಗೆ ಬಂದಿದೆ. 20

ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್‍ಗೆ ಕನ್ನ ಹಾಕಿದ ಖದೀಮರು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಇತರರ ನೆರವಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಸಹಾಯ ಮಾಡಿದಲ್ಲಿ ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವ ಮೂಡುತ್ತದೆ. ಆರ್ಥಿಕ ಪರಿಸ್ಥಿತಿಯು ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಮುಂದಾಲೋಚನೆ ಮಾಡಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್| ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾದರೂ ಅಚ್ಚರಿಯಿಲ್ಲ- ಡಿ.ಸಿ ಎಚ್ಚರಿಕೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೋಂಕು ಹೆಚ್ಚಾದಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾತಾನಾಡಿರುವ ಅವರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಒಂದು ವೇಳೆ ಸೋಂಕು ಹೆಚ್ಚದಲ್ಲಿ ಮತ್ತೆ ಲಾಕ್ಡೌನ್, ವೀಕೆಂಡ್ ಕರ್ಪ್ಯೂ ನಿಯಮಗಳನ್ನು ಕೂಡಾ ಜಾರಿ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಾದ ಕ್ರಮಗಳನ್ನು

ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್| ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾದರೂ ಅಚ್ಚರಿಯಿಲ್ಲ- ಡಿ.ಸಿ ಎಚ್ಚರಿಕೆ Read More »

ಕೋವಿಡ್ ಮೂರನೇ ಅಲೆ : ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ

ಬೆಂಗಳೂರು : ಕೇರಳದಲ್ಲಿ ಕೊರೊನಾ ಆವಳಿ ಹೆಚ್ಚಾಗಿದ್ದು, ಮೂರನೇ ಅಲೆ ಕಾಣಿಸಿಕೊಂಡಿದ್ಯಾ ಅನ್ನೋ ಚರ್ಚೆಗಳು ನಡೆಯುತ್ತಿರುವಾಗಲೇ ರಾಜ್ಯದಲ್ಲೂ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗ ತೊಡಗಿದೆ. ರಾಜ್ಯದಲ್ಲಿ ನಿಧಾನವಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಯ ಎಚ್ಚರಿಕೆಯ ಗಂಟೆ ಎಂದು ಅಂದಾಜಿಸಲಾಗುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಮೈಕ್ರೋಕಂಟೈನ್ ಮೆಂಟ್, ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸುವ, ಗಡಿ ಭಾಗಗಳಲ್ಲಿಯೂ ಹೆಚ್ಚಿನ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೋವಿಡ್ ಮೂರನೇ ಅಲೆ : ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ Read More »

ಸುಬ್ರಹ್ಮಣ್ಯ: ಶ್ರೀ ಹೋಮ್’ಕೇರ್ ಕ್ಲಿನಿಕ್’ನಲ್ಲಿ ಇನ್ನು ಮದ್ಯಾಹ್ನದ ಬಳಿಕವೂ ವೈದ್ಯಕೀಯ ಸೇವೆ ಲಭ್ಯ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೋಮ್’ಕೇರ್ ಕ್ಲಿನಿಕ್ ನಲ್ಲಿ ಇನ್ನು ಅಪರಾಹ್ನವೂ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಕ್ಲಿನಿಕ್ ನ ವೈದ್ಯರು ತಿಳಿಸಿದ್ದಾರೆ. ಸುಬ್ರಹ್ಮಣ್ಯದ ಕಾರ್ತಿಕೇಯ ಬಿಲ್ಡಿಂಗ್ ನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಸ್ಥಳೀಯ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಹೋಮಿಯೋ ಕ್ಲಿನಿಕ್ ಇದುವರೆಗೆ ಬೆಳಿಗ್ಗೆ 9:00 ಗಂಟೆಯಿಂದ ಮದ್ಯಾಹ್ನ 1:00 ರ ವರೆಗೆ ಕ್ಲಿನಿಕ್ ತೆರೆದಿರುತ್ತಿತ್ತು. ಇದೀಗ ಜನತೆಯ ಅನುಕೂಲಕ್ಕಾಗಿ ಕ್ಲಿನಿಕ್ ನ್ನು ಅಪರಾಹ್ನವೂ ತೆರೆಯಲು ನಿರ್ಧರಿಸಲಾಗಿದೆ. ಕ್ಲಿನಿಕ್ ಇನ್ನು ಬೆಳಗಿನ

ಸುಬ್ರಹ್ಮಣ್ಯ: ಶ್ರೀ ಹೋಮ್’ಕೇರ್ ಕ್ಲಿನಿಕ್’ನಲ್ಲಿ ಇನ್ನು ಮದ್ಯಾಹ್ನದ ಬಳಿಕವೂ ವೈದ್ಯಕೀಯ ಸೇವೆ ಲಭ್ಯ Read More »

ಬೊಮ್ಮಾಯಿ ಕ್ಯಾಬಿನೆಟ್ ಗುರುವಾರ ಅಸ್ತಿತ್ವಕ್ಕೆ? ಒಂದೇ ಬಾರಿಗೆ ‘ಸಮಗ್ರ’ ಸಚಿವ ಸಂಪುಟ

ಬೆಂಗಳೂರು: ಮಂತ್ರಿಗಿರಿಗಾಗಿ ನಾಯಕರ ಕಸರತ್ತು, ಶಾಸಕರ ಲಾಬಿ, ಸಿಎಂ ಬೊಮ್ಮಾಯಿ ದೆಹಲಿ ಪ್ರಯಾಣ, ಹೈಕಮಾಂಡ್ ಭೇಟಿ ಬೆನ್ನಲ್ಲೇ ಸಚಿವ ಸಂಪುಟ ರಚನೆ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಿಎಂ ಆದ ಬಳಿಕ ಮೊದಲ ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿರುವ ಬಸವರಾಜ್ ಬೊಮ್ಮಾಯಿ, ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬೊಮ್ಮಾಯಿ ತೆಗೆದುಕೊಂಡು ಹೋಗಿದ್ದ 21 ಜನರ ಲಿಸ್ಟ್ ನಲ್ಲಿ ಕೇವಲ 6 ಜನರ ಹೆಸರನ್ನು

ಬೊಮ್ಮಾಯಿ ಕ್ಯಾಬಿನೆಟ್ ಗುರುವಾರ ಅಸ್ತಿತ್ವಕ್ಕೆ? ಒಂದೇ ಬಾರಿಗೆ ‘ಸಮಗ್ರ’ ಸಚಿವ ಸಂಪುಟ Read More »

ನಾಟಕ ಅಭ್ಯಾಸದ ವೇಳೆ ನೇಣು ಬಿಗಿದು ಬಾಲಕ ಸಾವು

ಉ.ಪ್ರದೇಶ: ಸ್ವಾತಂತ್ರ್ಯ ದಿನಾಚರಣೆಗಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನಾಟಕ ಅಭ್ಯಾಸದ ವೇಳೆ ಬಾಲಕನೊಬ್ಬ ನೇಣಿನ ಕುಣಿಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಬದೌನ್ ಜಿಲ್ಲೆಯ ಬಾಬತ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಭಗತ್ ಸಿಂಗ್ ಅವರನ್ನು ಗಲ್ಲಿಗೆ ಹಾಕುವ ದೃಶ್ಯದ ಅಭ್ಯಾಸದ ವೇಳೆ ನೇಣು ಕುಣಿಕೆ ಹಾಕಿದಾಗ ಆಕಸ್ಮಿಕವಾಗಿ ಸ್ಟೂಲ್ ನಿಂದ ಬಾಲಕ ಬಿದ್ದಿದ್ದಾನೆ. ಮೃತ ಬಾಲಕ ಶಿವಂ ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಭಗತ್ ಸಿಂಗ್, ರಾಜ್ ಗುರು ಮತ್ತು

ನಾಟಕ ಅಭ್ಯಾಸದ ವೇಳೆ ನೇಣು ಬಿಗಿದು ಬಾಲಕ ಸಾವು Read More »

ಯುವತಿ ಕೈಗೆ ಮಗುನೀಡಿ‌ ಮೋಸ ಮಾಡಿದ ಕಿರುತೆರೆ ನಟ

ಬೆಂಗಳೂರು: ಕನ್ನಡದ ಕಿರುತೆರೆ ನಟ (ವಿಲನ್ ಪಾತ್ರಧಾರಿ) ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಕಳಸಾಪುರ ನಿವಾಸಿ ಉಮೇಶ್, ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಉಮೇಶನ ಬಣ್ಣದ ಮಾತುಗಳಿಗೆ ಮರುಳಾದ ಯುವತಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಯುವತಿ ಉಮೇಶ್ ನಿಂದ ಮೋಸಕ್ಕೊಳಗಾಗಿದ್ದಾಳೆ. ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ಮಗುವಿಗೆ ಕಾರಣನಾಗಿದ್ದಾನೆ ವಂಚಕನಿಂದ ಮೋಸಹೋಗಿರುವ ಯುವತಿ ಆತನ ಮನೆ ಎದುರು ತನ್ನ 5 ತಿಂಗಳ ಮಗುವಿನ ಜೊತೆ ಧರಣಿ ಕುಳಿತಿದ್ದಾಳೆ. ಆತನೊಂದಿಗೆ ಮದುವೆ ಮಾಡಿಸಿ

ಯುವತಿ ಕೈಗೆ ಮಗುನೀಡಿ‌ ಮೋಸ ಮಾಡಿದ ಕಿರುತೆರೆ ನಟ Read More »

ಎನ್.ಮಹೇಶ್ ಬಿಜೆಪಿಗೆ ಸೇರ್ತಾರಂತೆ!

ಚಾಮರಾಜನಗರ: ಬಿಎಸ್​ಪಿ ಪಕ್ಷದಿಂದ ಅಮಾನತುಗೊಂಡಿರುವ ಕೊಳ್ಳೇಗಾಲ ಶಾಸಕ ಎನ್​.ಮಹೇಶ್ ಅವರು ಬಿಜೆಪಿ ಸೇರುವುದು ಖಚಿತವಾಗಿದೆ. ಕಳೆದ ಹಲವು ದಿನಗಳಿಂದ ಬಿಜೆಪಿ ಸೇರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೂಚನೆ ನೀಡಿದ್ದ ಎನ್​.ಮಹೇಶ್ ಇಂದು ಅಧಿಕೃತ ಹೇಳಿಕೆ ನೀಡಿದ್ದಾರೆ. ಗುಂಡ್ಲುಪೇಟೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಬಿಜೆಪಿ ಸೇರುವ ಬಗ್ಗೆ ಬಹಿರಂಗವಾಗಿ ಹೇಳಿದರು. ಬಿಜೆಪಿಗೆ ಬರುವಂತೆ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಎನ್.ಮಹೇಶ್ ಬಿಜೆಪಿಗೆ ಸೇರ್ತಾರಂತೆ! Read More »