Editor

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಪರೀಕ್ಷೆ ಇಲ್ಲದೇ ಗ್ರೇಡ್ ಮೂಲಕ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್ Read More »

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ?

ಎಂಥ ಅಚ್ಚರಿಯಲ್ಲವೇ! ಎಲ್ಲಾದರೂ ಉಂಟೇ? ನಮಗೆ ತಿಳಿದಿರುವ ಹಾಗೆ ಮದುವೆ ಎಂದರೆ ಮನುಷ್ಯರ ನಡುವೆ ಆಗುತ್ತದೆ. ಆದರೆ ಇಲ್ಲೊಂದು ವಿಶೇಷ ಸುದ್ದಿ ಇದೆ. ಪ್ರಪಂಚದಲ್ಲಿ ಈ ರೀತಿಯ ವಿಚಿತ್ರಗಳು ನಡೆಯುತ್ತಿರುತ್ತವೆ .ಇಂತಹ ಅನಿರೀಕ್ಷಿತ ಸನ್ನಿವೇಶಗಳು ಸಾಮಾನ್ಯ ಜನರಿಗೆ ಪ್ರೇರೇಪಿಸುತ್ತಿರುತ್ತವೆ. ಇಂತಹ ಸುದ್ದಿ ಗಳನ್ನು ಓದಿದಾಗ ಇಂತಹದ್ದೂ ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಸಂಗತಿ ಓದಿದರೇ ನಿಜಕ್ಕೂ ಆಶ್ಚರ್ಯವೆನಿಸಬಹುದು. ಈ ಘಟನೆ ಜಾರ್ಖಂಡ್ ನಲ್ಲಿ ಮಂಗಳಿ ಮುಂಡ ಎಂಬ 18 ವರ್ಷದ ಯುವತಿ ನಾಯಿಯೊಂದನ್ನು ಮದುವೆಯಾದ ವಿಚಿತ್ರ

ಹೀಗೂ ಉಂಟು: ನಾಯಿಯನ್ನು‌ ವರಿಸಿದ ಯುವತಿ: ನಂತರ ಏನಾಯ್ತು ಗೊತ್ತಾ? Read More »

ಹಿರಿಯ ನಟಿ ಬಿ.ಜಯಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು. ಸ್ಯಾಂಡಲ್​ವುಡ್​ ನ ಹಿರಿಯ ನಟಿ ಬಿ. ಜಯಾ ಮೃತರಾಗಿದ್ದಾರೆ. ಗುರುವಾರ (ಜೂನ್​ 3) ಮಧ್ಯಾಹ್ನ 3:30 ಸುಮಾರಿಗೆ ಕೊನೆಯುಸಿರೆಳೆದರು. ಕೆಲ ದಿನದಿಂದ ಜಯಾ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಜಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರನ್ನು ಚಿತ್ರರಂಗ ಕಳೆದುಕೊಂಡಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಹಿರಿಯ ನಟಿ ಬಿ.ಜಯಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ Read More »

ರಾಜ್ಯದಲ್ಲಿ ಜೂ.14ರವರೆಗೆ ಲಾಕ್ ಡೌನ್ ವಿಸ್ತರಣೆ: ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದ ಸಿ.ಎಂ

ಬೆಂಗಳೂರು. ಜೂ.3: ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಅನ್ನು ಜೂ.14ರವರೆಗೆ ವಿಸ್ತರಿಸಿ ಸಿಎಂ ಯಡಿಯೂರಪ್ಪ ಆದೇಶಸಿದ್ದಾರೆ. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ ಜೂ.14ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ

ರಾಜ್ಯದಲ್ಲಿ ಜೂ.14ರವರೆಗೆ ಲಾಕ್ ಡೌನ್ ವಿಸ್ತರಣೆ: ಎರಡನೇ ಕೋವಿಡ್ ಪ್ಯಾಕೇಜ್ ಘೋಷಿಸಿದ ಸಿ.ಎಂ Read More »

ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ,

ಬೆಳಗಾವಿ: ಇವರಿಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ವರ್ಷದಿಂದ ಪರಸ್ಪರ ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿ ಬದುಕಲಾರದಷ್ಟು ಹತ್ತಿರವಾಗಿದ್ದರು. ಆದರೂ ಒಂದು ತಿಂಗಳ ಹಿಂದಷ್ಟೇ ಯುವತಿಯನ್ನ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿಬಿಟ್ಟರು. ಇದೀಗ ಗಂಡನ ಮನೆಯಲ್ಲಿರಬೇಕಿದ್ದ ನವವಿವಾಹಿತೆ, ಪ್ರಿಯಕರನೊಟ್ಟಿಗೆ ದುರಂತ ಅಂತ್ಯ ಕಂಡಿದ್ದಾಳೆ. ಇಂತಹ ದುರಂತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಧೋಗಿಯಲ್ಲಿ ನಡೆದಿದೆ. ಪಂಚಪ್ಪ ಕಣವಿ(25) ಮತ್ತು ಸಕ್ಕುಬಾಯಿ ಕರಿಗಾರ(23) ಮೃತ ಪ್ರೇಮಿಗಳು.ಆದರೂ ಮತ್ತೊಬ್ಬನೊಂದಿಗೆ ಕುಟುಂಬಸ್ಥರು ಸಕ್ಕುಬಾಯಿಗೆ ಒಂದು ತಿಂಗಳ ಹಿಂದೆ ಮದುವೆ ಮಾಡಿದ್ದರು.

ನವವಿವಾಹಿತೆ ಮತ್ತು ಮಾಜಿ ಪ್ರಿಯಕರ ಆತ್ಮಹತ್ಯೆ, Read More »

ಜೂ. 14ರವರೆಗೆ ರಾಜ್ಯದಲ್ಲಿ ಲಾಕ್ ಡೌನ್? ಏನಿರುತ್ತೆ? ಏನಿರಲ್ಲ…

ಬೆಂಗಳೂರು, ಜೂನ್ 3: ಕೋವಿಡ್19 ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ವಿಸ್ತರಣೆ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಈ ಕುರಿತಂತೆ ಅಧಿಕೃತ ಪ್ರಕಟಣೆ, ಮಾರ್ಗಸೂಚಿ ಶೀಘ್ರವೇ ಹೊರ ಬರಲಿದೆ. ಇಂದು ಸಂಜೆ 5 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವರವಾಗಿ ತಿಳಿಸಲಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಮೇ 10 ರಿಂದ 14ರ ತನಕ ಲಾಕ್‌ಡೌನ್ ಮಾಡಲಾಗಿತ್ತು. ಪುನಃ ಮೇ 24ರಿಂದ ಜೂನ್ 7ರ ತನಕ ಲಾಕ್‌ಡೌನ್ ಮುಂದುವರೆದಿದೆ. ಈಗ

ಜೂ. 14ರವರೆಗೆ ರಾಜ್ಯದಲ್ಲಿ ಲಾಕ್ ಡೌನ್? ಏನಿರುತ್ತೆ? ಏನಿರಲ್ಲ… Read More »

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಸಿಎಂ ಬಿಎಸ್‌ವೈ, ಎರಡನೇ ಹಂತದ ಕೋವಿಡ್ ಪ್ಯಾಕೇಜ್ ರೆಡಿ ಆಗುತ್ತಿದೆ. ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ ಕೋವಿಡ್ ಎರಡನೇ ಹಂತದ ಲಾಕ್‌ಡೌನ್ ಹಿನ್ನೆಲೆಯಲ್ಲಿ ೧೨೫೦ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಈ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಇದೀಗ ರಾಜ್ಯ ಸರ್ಕಾರ ಎರಡನೇ ಹಂತದ ಪ್ಯಾಕೇಜ್ ಘೋಷಣೆ ಮಾಡಲು ನಿರ್ಧರಿಸಿದೆ ಎಂದಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಲಾಕ್ಡೌನ್ ವಿಸ್ತರಣೆ: ಇನ್ನು ಲಾಕ್‌ಡೌನ್

ಇನ್ನೆರಡು ದಿನಗಳಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ: ಸಿಎಂ Read More »

ಮಂಗಳೂರು: ಬ್ಲ್ಯಾಕ್ ಫಂಗಸ್​ಗೆ ಮತ್ತೆ ಮೂವರು ಬಲಿ | 25 ಸಕ್ರಿಯ ಪ್ರಕರಣಗಳು

ಮಂಗಳೂರು: ನಗರದ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಹೆಚ್ಚಾಗುತ್ತಿದ್ದು, ಇಂದು ಮೂವರು ಕಪ್ಪು ಶಿಲೀಂದ್ರ ಮಾರಿಗೆ ಜೀವ ತೆತ್ತಿದ್ದು ಸಾವಿನ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಇಂದು ಮೃತರಾದವರಲ್ಲಿ ಬೆಳ್ತಂಗಡಿ ತಾಲೂಕಿನ ಓರ್ವ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಒಬ್ಬ ಸೋಂಕಿತ೮ ಸೇರಿದ್ದಾರೆ. ಇವರೆಲ್ಲರೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಕೆ.ಎಸ್.ಹೆಗ್ಡೆ, ಎ‌.ಜೆ.ಆಸ್ಪತ್ರೆಗಳಲ್ಲಿ ಸೋಂಕಿಗೊಳಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 30 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿದ್ದು, ಸದ್ಯ 8 ದ.ಕ ಜಿಲ್ಲೆಯ ಪ್ರಕರಣಗಳು ಸೇರಿದಂತೆ ಒಟ್ಟು 25

ಮಂಗಳೂರು: ಬ್ಲ್ಯಾಕ್ ಫಂಗಸ್​ಗೆ ಮತ್ತೆ ಮೂವರು ಬಲಿ | 25 ಸಕ್ರಿಯ ಪ್ರಕರಣಗಳು Read More »