ಇದೊಂದು ಪಿಕ್ ಪಾಕೇಟ್ ಸರ್ಕಾರ, ತೆರಿಗೆ ಏರಿಸಿ ತಿಗಣೆಗಳಂತೆ ಜನರ ರಕ್ತ ಕುಡಿಯುತ್ತಿರುವ ಬಿಜೆಪಿ – ಕೇಂದ್ರದ ಮೇಲೆ ಹರಿಹಾಯ್ದ ಕಾಂಗ್ರೆಸ್.
ಬೆಂಗಳೂರು. ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಇದು ಪಿಕ್‌ಪಾಕೆಟ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆಸಿರುವ 100 ನಾಟ್‌ಔಟ್ ಆಂದೋಲನದ ಭಾಗವಾಗಿ ಇಂದು ಬೆಂಗಳೂರಿನ ಶಿವಾನಂದ ವೃತ್ತ ಪೆಟ್ರೋಲ್ ಬಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕೇವಲ ವಾಹನ ಹೊಂದಿರುವವರಿಗೆ ಮಾತ್ರ ಹೊರೆಯಾಗುತ್ತಿಲ್ಲ. ಈ ದರ ಏರಿಕೆಯಿಂದ […]