Editor

ಮಡಿಕೇರಿ:ತನ್ನ ಕಾಲನ್ನು ತಾನೇ ಕಡಿದುಕೊಂಡ ಮದ್ಯಪ್ರಿಯ

ವಿರಾಜಪೇಟೆ: ಮದ್ಯ ಸಿಗಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಕಾಲನ್ನು ತಾನೇ ಕಡಿದುಕೊಂಡ ಘಟನೆ ತಾಲೂಕಿನ ಅಮ್ಮತ್ತಿ ಎಂಬಲ್ಲಿ ನಡೆದಿದೆ. ಅಮ್ಮತ್ತಿ ಕಾರ್ಮಾಡು ನಿವಾಸಿ 42 ವರ್ಷದ ಪಾಪಣ್ಣ ಕಾಲು ಕತ್ತರಿಸಿಕೊಂಡ ವ್ಯಕ್ತಿ. ಪಾಪಣ್ಣ ಮದ್ಯವ್ಯಸನಿಯಾಗಿದ್ದ. ನಿತ್ಯ ಬೆಳಗಾದಂತೆ ಕಾಫಿ ಕುಡಿಯುವ ಬದಲು ಎಣ್ಣೆ ಹೊಡೆಯುವುದೇ ಈತನ ಅಭ್ಯಾಸವಾಗಿತ್ತು. ಇನ್ನು ಕೆಲದಿನಗಳಿಂದ ಈತನಿಗೆ ಯಾವುದೋ ಕಾರಣದಿಂದ ಮದ್ಯ ಸಿಗುತ್ತಿರಲಿಲ್ಲ ಎನ್ನಲಾಗಿದೆ. ಮದ್ಯ ಸಿಗದೇ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪಾಪಣ್ಣ ದಿನಾಲು ತಾಯಿಯೊಂದಿಗೆ ಜಗಳವಾಡುತ್ತಿದ್ದ. ಕಳೆದೆರಡು ದಿನಗಳ ಹಿಂದೆ ಕುಪಿತಗೊಂಡು […]

ಮಡಿಕೇರಿ:ತನ್ನ ಕಾಲನ್ನು ತಾನೇ ಕಡಿದುಕೊಂಡ ಮದ್ಯಪ್ರಿಯ Read More »

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್

ಸೌತಾಪ್ಟನ್: ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇಂದು ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಜೂನ್ 22 ರ ವರೆಗೆ ನಡಲಿರುವ ಹಣಾಹಣಿ ಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಸೆಣಸಾಡಲಿವೆ. ಸೀಮಿತ ಓವರ್ಗಳಲ್ಲಿ ವಿಶ್ವ ಕಪ್ ನಡೆಸುತ್ತಿರುವಂತೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಯುದ್ಧ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಅದರಂತೆ 2019 ರಲ್ಲಿ ಜಗತ್ತಿನ 9 ಬಲಿಷ್ಠ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್

ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ WTC ಫೈನಲ್ ಹಣಾಹಣಿ | ಬಲಿಷ್ಠ ವಿರಾಟ್ ಬಳಗವೇ ಗೆಲ್ಲೊ ಫೇವರಿಟ್ Read More »

ಈ ತೆಲುಗು ಸಿನಿಮಾಗಾಗಿ ವಿಜಯ್ ದಳಪತಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ವಿಜಯ್ ದಳಪತಿ, ತಮಿಳು ಚಿತ್ರರಂಗದ ಸಾಮ್ರಾಟ. ಇವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸ್ಟಾರ್​ ಆಗಿ ಮೆರೆಯುತ್ತಿರುವ ಅವರು ಗಮನಾರ್ಹ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ ವಿಜಯ್​ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ. ಸ್ಟಾರ್​ ನಿರ್ದೇಶಕ, ನಿರ್ಮಾಪಕರೆಲ್ಲ ವಿಜಯ್​ ಕಾಲ್​ಶೀಟ್​ಗಾಗಿ ಕಾದು ಕುಳಿತಿರುತ್ತಾರೆ. ಇಷ್ಟು ದಿನ ತಮಿಳುನಲ್ಲಿ ಬ್ಯುಸಿ ಆಗಿದ್ದ ವಿಜಯ್​ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆ ಸಿನಿಮಾದಲ್ಲಿ ಅವರು ಪಡೆಯಲಿರುವ ಸಂಭಾವನೆ

ಈ ತೆಲುಗು ಸಿನಿಮಾಗಾಗಿ ವಿಜಯ್ ದಳಪತಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ? Read More »

ಪ್ರವಾಸಿಗರಿಗೆ ಶಾಕ್ ನೀಡಿದ ಗೋವಾ ಸರಕಾರ

ಪಣಜಿ: ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಗೋವಾ ಬಲು ಫೇಮಸ್. ಭಾರತೀಯರಲ್ಲದೆ ವಿದೇಶಿ ಪ್ರವಾಸಿಗರಿಗೂ ಗೋವಾ ಟ್ರಿಪ್ ಡ್ರೀಮ್ ಟ್ರಿಪ್. ಆಧುನಿಕ ಸಮಾಜದ ಯುವಜನರಿಗಂತು ಗೋವಾ ವೇ ಸ್ವರ್ಗ. ಆದರೆ ಇದೀಗ ಕೋವಿಡ್ ಎರಡನೇ ಅಲೆ ಬಳಿಕ ಗೋವಾ ಬೀಚ್ ರಿಓಪನ್ ಖುಷಿಯಲ್ಲಿದ್ದ ಪ್ರವಾಸಿಗರಿಗೆ ಅಲ್ಲಿನ ರಾಜ್ಯ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಕಟ್ಟನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಶಾಕ್ ನೀಡಿದ ಗೋವಾ ಸರಕಾರ Read More »

ವಿಶ್ವನಾಥ್‌ರವರದ್ದು ಕುಟುಂಬ ರಾಜಕಾರಣ ಅಲ್ವಾ: ಹೆಚ್‌ಡಿಕೆ ತಿರುಗೇಟು

ಮಂಡ್ಯ: ಕುಟುಂಬ ರಾಜಕಾರಣದ ಬಗ್ಗೆ ಆಗಾಗ ಮಾತನಾಡುತ್ತಿರುವ ರಾಜ್ಯ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕೆಆರ್‌ಪೇಟೆಯಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಫುಡ್‌ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕೆ., ವಿಶ್ವನಾಥ್ ಗೆ ಯಾವ ಪಕ್ಷದಲ್ಲೂ ಸರಿಯಾಗಿ ಇರೋಕೆ ಆಗಲ್ಲ. ವಿಶ್ವನಾಥ್ ಮಗ ಜಿ.ಪಂ. ಸದಸ್ಯ ಅಲ್ವಾ, ವಿಶ್ವನಾಥ್ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ವಾ. ಅದು ಕುಟಂಬ ರಾಜಕೀಯ ಅಲ್ವಾ

ವಿಶ್ವನಾಥ್‌ರವರದ್ದು ಕುಟುಂಬ ರಾಜಕಾರಣ ಅಲ್ವಾ: ಹೆಚ್‌ಡಿಕೆ ತಿರುಗೇಟು Read More »

ಮಂಗಳೂರು: ಪಾಲಿಕೆ ಹೆಸರಿನಲ್ಲಿ ಅಂಗಡಿಗೆ 50,000 ದಂಡ | ಮಾನವ ಹಕ್ಕು ಕಾರ್ಯಕರ್ತನ ಬಂಧನ | ಮತ್ತಿಬ್ಬರು ಪರಾರಿ

ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವು ಅಂಗಡಿಗಳಿಗೆ ತೆರಳಿದ ತಂಡವೊಂದು 50 ಸಾವಿರ ಹಣ ಕೇಳಿ ಸಿಕ್ಕಿ ಬಿದ್ದಿದ್ದು, ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ(೪೫) ಎಂದು ಗುರುತಿಸಲಾಗಿದೆ. ಮೂವರು ಯುವಕರ ತಂಡವೊಂದು ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಅಂಗಡಿಗೆ ನುಗ್ಗಿ ನಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ವೇಳೆ ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸಿರುವುದು ಕಾನೂನಿಗೆ ವಿರುದ್ಧವಾಗಿದ್ದು,

ಮಂಗಳೂರು: ಪಾಲಿಕೆ ಹೆಸರಿನಲ್ಲಿ ಅಂಗಡಿಗೆ 50,000 ದಂಡ | ಮಾನವ ಹಕ್ಕು ಕಾರ್ಯಕರ್ತನ ಬಂಧನ | ಮತ್ತಿಬ್ಬರು ಪರಾರಿ Read More »

ಬಿಜೆಪಿಯಲ್ಲೂ ಕುಟುಂಬ ರಾಜಕಾರಣವಿದೆ | ಅಚ್ಚರಿಯ ಹೇಳಿಕೆ‌ ನೀಡಿದ ಹಳ್ಳಿಹಕ್ಕಿ

ಬೆಂಗಳೂರು: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ ಎಂದಿದ್ದಾರೆ. ಹಾಗೇ ಯಡಿಯೂರಪ್ಪ ಮಾಡಿದ ಕೆಲಸಗಳ ಬಗ್ಗೆ ಗೌರವ ಇದೆ. ಅಲ್ಲದೆ ಬಿಜೆಪಿಯಲ್ಲಿ ಆಗುತ್ತಿರುವ ಬದಲಾವಣೆಗೆ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಇದೇ ವೇಳೆ ‘ ನಾನು ಅರುಣ್ ಸಿಂಗ್ ಭೇಟಿ ಮಾಡಿದೆ. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಸ್ತುಸ್ಥಿತಿ ಹೇಳಿದ್ದೇನೆ. ನಮಗೆ ಮಂತ್ರಿಗಿರಿ ಸಿಕ್ಕಿಲ್ಲ ಅನ್ನೋ ಬೇಸರವಿಲ್ಲ. ಈ ಬಗ್ಗೆ ನಾನು ದೂರುತ್ತಿಲ್ಲ. ಅರುಣ್

ಬಿಜೆಪಿಯಲ್ಲೂ ಕುಟುಂಬ ರಾಜಕಾರಣವಿದೆ | ಅಚ್ಚರಿಯ ಹೇಳಿಕೆ‌ ನೀಡಿದ ಹಳ್ಳಿಹಕ್ಕಿ Read More »

ಮಂಗಳೂರು: ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ

ಮಂಗಳೂರು: ಸ್ವತಃ ತಂದೆ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರಗೈದು ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ತಂದೆ ಅತ್ಯಾಚಾರ ನಡೆಸಿದ್ದಾನೆ. ಈತನ ಪತ್ನಿ ಮನೆಯಿಂದ ಹೊರಗೆ ಹೋದ ಕೂಡಲೇ ತನ್ನ ಇಬ್ಬರು ಪುತ್ರಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇನ್ನೂ ಈ ಕಿರಿಕುಳ ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಅದರೆ ಇತ್ತೀಚೆಗೆ ಪುತ್ರಿಯರು ತಾಯಿ ಜೊತೆ

ಮಂಗಳೂರು: ತಂದೆಯಿಂದಲೇ ಇಬ್ಬರು ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ Read More »

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ

ಮಂಗಳೂರು: 10 ರೂ. ಪಾವತಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ್ದ. ಆತ ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿoದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಇದರೊಂದಿಗೆ ಹಣ ಪಾವತಿಸಲು

ಮಂಗಳೂರು: 10 ರೂ. ಕೊಟ್ಟು ಹಂತ ಹಂತವಾಗಿ ಲಕ್ಷ ರೂ. ಕಳೆದುಕೊಂಡ ವ್ಯಕ್ತಿ…! | ನೀವು ಈ ರೀತಿ ಮೋಸ ಹೋಗದಿರಿ Read More »

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು

ಕಾರವಾರ: ಮೀನುಗಾರಿಕೆ ವೇಳೆ ಸಮುದ್ರದಲ್ಲಿ ವಾಸಿಸುವ ವಿಷಕಾರಿ ಹಾವೊಂದು ಮೀನುಗರರ ಬಲೆಗೆ ಬಿದ್ದಿದೆ. ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಲಾಗಿದೆ. ಇದನ್ನು ‘ಹೈಡ್ರೋಫಿಸ್ ಸ್ಕಿಸ್ಟೋಸಸ್’ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿ ಹೊಂದಿರುವ ಹಾವು ನೋಡಲು ವಿಶೇಷವಾಗಿದೆ.‌ ಅಪರೂಪವಾಗಿ ಕಾಣಸಿಗುವ ಈ ಹಾವನ್ನು ನೋಡಿ ಮೀನುಗರಾರು ಮತ್ತು ಸ್ಥಳೀಯರು ಖುಷಿಪಟ್ಟಿದ್ದಾರೆ. ಇದು ಸಮುದ್ರದಲ್ಲಿ ಕ್ಯಾಟ್ ಫಿಶ್‌ಗಳ ಮರಿಗಳನ್ನು ತಿಂದು ಜೀವಿಸುತ್ತದೆ. ಬಹಳ ಶಾಂತ ಸ್ವಭಾವದ ಈ ಹಾವುಗಳು ಕೆಲವೊಮ್ಮೆ ಆಕಸ್ಮಿಕವಾಗಿ ಮೀನುಗಾರರ

ಮೀನುಗಾರರ ಬಲೆಗೆ ಬಿತ್ತು ಸಮುದ್ರವಾಸಿ ವಿಷಕಾರಿ ಹಾವು Read More »