Editor

ದ ಕ: ಅಶಕ್ತರ ಮನೆಗೆ ಬಾಗಿಲಿಗೆ ಬರಲಿದೆ ಕೊರೊನಾ ಲಸಿಕೆ

ಮಂಗಳೂರು: ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದ್ದು , ಈ ಹಿನ್ನಲೆ ಅನಾರೋಗ್ಯಕ್ಕೀಡಾವರರಿಗೆ ಮತ್ತು ಹಿರಿಯ ನಾಗರಿಕರಿರುವ ಮನೆಗೆ ತೆರಳಿ ಉಚಿತ ಲಸಿಕೆ ನೀಡಲು ಜಿಲ್ಲಾಧಿಕಾರಿ ಡಾ. ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಉಚಿತ ಲಸಿಕಾ ಶಿಬಿರ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಅನಾರೋಗ್ಯಕ್ಕೀಡಾದವರಿಗೆ ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ತೆರಳಿ ಲಸಿಕೆ […]

ದ ಕ: ಅಶಕ್ತರ ಮನೆಗೆ ಬಾಗಿಲಿಗೆ ಬರಲಿದೆ ಕೊರೊನಾ ಲಸಿಕೆ Read More »

ಪಕ್ಷಕ್ಕಿಂತ ಯಾರೂ ದೊಡ್ಡೋರಲ್ಲ, ಅದು ಸಿಎಂ ಆದ್ರೂ ಅಷ್ಟೇ- ಸಿ.ಟಿ ರವಿ

ಬೆಂಗಳೂರು: ನಮ್ಮದು ಸಿದ್ದಾಂತದಿಂದ ಬಂದ ಪಕ್ಷ. ಇಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹರನ್ನು ಕರೆದು ಸಂಸದರನ್ನಾಗಿ ಮಾಡಿದೆವು. ನಾನೂ ಸಾಮಾನ್ಯ ಕಾರ್ಯಕರ್ತ, ಪ್ರಹ್ಲಾದ್ ಜೋಶಿ, ಈಶ್ವರಪ್ಪನವರು ಸಾಮಾನ್ಯ ಕಾರ್ಯಕರ್ತರೇ. ಅದೇ ರೀತಿ ಯಡಿಯೂರಪ್ಪನವರು ಸಾಮಾನ್ಯ ಕಾರ್ಯಕರ್ತರೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದಲ್ಲಿ ಯಾರೂ ದೊಡ್ಡವರಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಪಕ್ಷದ ಸಿದ್ದಾಂತ ಮೆಚ್ಚಿ ಬಂದವರು ಮಾತ್ರ ಪಕ್ಷದಲ್ಲಿದ್ದೇವೆ. ಬೀದಿಯಲ್ಲಿ ನಿಂತು

ಪಕ್ಷಕ್ಕಿಂತ ಯಾರೂ ದೊಡ್ಡೋರಲ್ಲ, ಅದು ಸಿಎಂ ಆದ್ರೂ ಅಷ್ಟೇ- ಸಿ.ಟಿ ರವಿ Read More »

ಪಿರಿಯಾಪಟ್ಟಣ: ಮಗಳನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ

ಪಿರಿಯಾಪಟ್ಟಣ: ತನ್ನ ಸ್ವಂತ ಮಗಳನ್ನೇ ಕಡಿದು ಕೊಂದು ತಂದೆ ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮಹದೇಶ್ವರ ದೇವಸ್ಥಾನ ರಸ್ತೆ ಬಳಿಯ ನಿವಾಸಿ ಜಯರಾಮ್ ಮಗಳನ್ನು ಕೊಂದ ಆರೋಪಿ. ಆತ ತನ್ನ ಮಗಳು ಗಾಯತ್ರಿ ಎಂಬಾಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಗಾಯತ್ರಿ ಅನ್ಯಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತಂದೆ ಮತ್ತು ಮನೆಯವರು ಆಕೆಗೆ ಬುದ್ದಿವಾದ ಹೇಳಿದ್ದರು. ಆದರೆ ಅವರ ಮಾತಿಗೆ ಬಗ್ಗದ ಆಕೆ ಇತ್ತೀಚೆಗೆ ಆತನನ್ನು ಮದುವೆಯಾಗುವುದಾಗಿ ಹಠ

ಪಿರಿಯಾಪಟ್ಟಣ: ಮಗಳನ್ನು ಕಡಿದು ಕೊಂದು ಪೊಲೀಸರಿಗೆ ಶರಣಾದ ತಂದೆ Read More »

ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ : ಜೂ.30ರ ಮೊದಲು ಬುಕ್ ಮಾಡಿ

ನವದೆಹಲಿ: ಜೂನ್ 3೦ರ ಮೊದಲು ಆಪ್ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ ಅಗ್ಗವಾಗಿ ಸಿಲಿಂಡರ್ ನೀಡಲಿದೆ ಎಂದು ಪೇಟಿಎಂ ತನ್ನ ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡಿದೆ. 2021ರ ಜೂನ್‌ನಲ್ಲಿ 14.2 ಕೆಜಿ ಅನಿಲದ ಬೆಲೆ 809 ರೂ. ಇದೆ ಪೇಟಿಎಂ ಕೊಡುಗೆಯಲ್ಲಿ ನೀವು 800 ರೂ ಕ್ಯಾಶ್‌ಬ್ಯಾಕ್ ಪಡೆದ್ರೆ, ನೀವು ಸಿಲಿಂಡರ್ ಅನ್ನು ಬಹುತೇಕ ಉಚಿತವಾಗಿ ಪಡೆಯಬಹುದು. ಗ್ರಾಹಕರು ಜೂನ್ 30ರ ಮೊದಲು ಪೇಟಿಎಂ ಅಪ್ಲಿಕೇಶನ್‌ನಿಂದ ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಮತ್ತು ಇಂಡೇನ್ ಗ್ಯಾಸ್ ಸಿಲಿಂಡರ್‌ಗಳನ್ನು

ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ : ಜೂ.30ರ ಮೊದಲು ಬುಕ್ ಮಾಡಿ Read More »

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ

ಕೊಚ್ಚಿನ್: ಕೇರಳ ರಾಜ್ಯದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಗೂಗಲ್ ನಕ್ಷೆಯಲ್ಲಿ ಇತ್ತೀಚೆಗೆ ನಿಗೂಢ ದ್ವೀಪವೊಂದು ಪತ್ತೆಯಾಗಿದೆ. ಹುರುಳಿ ಆಕಾರದ ನೀರೊಳಗಿನ ದ್ವೀಪ ಗೂಗಲ್ ನಕ್ಷೆಯಲ್ಲಿ ಪತ್ತೆಯಾಗಿದ್ದು, ಭಾರೀ ಅಚ್ಚರಿಯನ್ನು ಮೂಡಿಸಿದೆ. ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ನಿಗೂಢ ದ್ವೀಪವನ್ನು ತೋರಿಸುವ ಉಪಗ್ರಹ ಚಿತ್ರವನ್ನು ಪತ್ತೆಹಚ್ಚಿದೆ. ಸೊಸೈಟಿ ಅಧ್ಯಕ್ಷ ವಕೀಲ ಕೆಎಕ್ಸ್ ಜುಲಪ್ಪನ್‌ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು ಇದು ವ್ಯಾಪಕವಾಗಿ ವೈರಲ್ ಆಗಿದೆ.ನಿಗೂಢ ದ್ವೀಪ ಪತ್ತೆಯಾದ ಬಗ್ಗೆ

ಅರಬ್ಬೀ ಸಮುದ್ರದಲ್ಲಿ ಪತ್ತೆಯಾಯ್ತು ನಿಗೂಢ ದ್ವೀಪ Read More »

ಪ್ರಪಾತಕ್ಕೆ ಬಿದ್ದ ಹಸುಗಳನ್ನು ರಕ್ಷಿಸಿದ ಮುಸ್ಲಿಂ ಯುವಕರು

ಕೊಪ್ಪಳ: ಗುಡ್ಡದ ಪ್ರಪಾತಕ್ಕಿಳಿದಿದ್ದ ನಾಲ್ಕು ಗೋವುಗಳು ನಾಲ್ಕು ಐದು ದಿನಗಳಿಂದ ಮೇಲಕ್ಕೆ ಬರಲು ಆಗದೆ ಪರದಾಡುತ್ತಿದ್ದವು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ತಂಡ ಶತಪ್ರಯತ್ನ ಮಾಡಿ ಎರಡು ಹಸುಗಳನ್ನು ರಕ್ಷಿಸಿದ್ದು ಎರಡು ಹಸುಗಳು ಹಸಿವಿನಿಂದ ನಿತ್ರಾಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಪ್ಪಳ ನಗರದ ಹುಲಿಕೆರೆಯ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದ ನಾಲ್ಕು ಹಸುಗಳು ಸುಮಾರು 300 ಆಳದ ಪ್ರಪಾತಕ್ಕೆ ಇಳಿದಿದ್ದವು. ನಗರದ ಗೋವು ಶಾಲೆಯಲ್ಲಿ ಗೋವುಗಳು ಐದು ದಿನಗಳ ಹಿಂದೆ ಗುಡ್ಡ ಪ್ರದೇಶದಲ್ಲಿ ಮೇಯಲು ಹೋಗಿದ್ದವು.

ಪ್ರಪಾತಕ್ಕೆ ಬಿದ್ದ ಹಸುಗಳನ್ನು ರಕ್ಷಿಸಿದ ಮುಸ್ಲಿಂ ಯುವಕರು Read More »

ಕನ್ನಡಿಗ ಬಾಲಕನಿಗೆ ಪ್ರಧಾನಿಯಿಂದ ಪ್ರಶಂಸಾ ಪತ್ರ

ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಅದ್ಭುತವಾಗಿ ಬಿಡಿಸಿ ಅವರಿಗೆ ಟ್ವೀಟ್ ಮಾಡಿದ್ದ ಧಾರವಾಡ ಮೂಲದ ಬಾಲಕನಿಗೆ ಪ್ರಧಾನಿ ಪ್ರಶಂಸಾ ಪತ್ರ ಕಳುಹಿಸಿದ್ದಾರೆ. ಜಿಲ್ಲೆಯ ಮಾಡರಗಿ ಗ್ರಾಮದ ವಿದ್ಯಾರ್ಥಿ 16 ವರ್ಷದ ಸಚಿನ್ ಮೋದಿಯವರಿಂದ ಮೆಚ್ಚುಗೆ ಪಡೆದ ಬಾಲಕ. ಈತ ಇದುವರೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವಾರು ಮಹನೀಯರ ಪೆನ್ಸಿಲ್ ಸ್ಕೆಚ್ ಚಿತ್ರ ಬಿಡಿಸಿದ್ದಾನೆ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಮನಸ್ಸು ಮಾಡಿದ್ದ ಸಚಿನ, ಬಾಲ್ಯದಲ್ಲಿ ಗೋಡೆಗಳಲ್ಲಿ ಗೀಚುತ್ತಿದ್ದನು. ಶಾಲೆಯಲ್ಲಿ ಚಿತ್ರಕಲೆ ತರಗತಿಯಲ್ಲೂ

ಕನ್ನಡಿಗ ಬಾಲಕನಿಗೆ ಪ್ರಧಾನಿಯಿಂದ ಪ್ರಶಂಸಾ ಪತ್ರ Read More »

ಲೂಟಿ ಹಣದ ಪಾಲು ಪಡೆಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ: ಎಚ್ ಡಿ ಕೆ

ಮಂಡ್ಯ: ರಾಜ್ಯ ಸರ್ಕಾರ ಕೊರೋನಾ ಹೆಸರಿನಲ್ಲಿ ಮಾಡಿದ ಲೂಟಿ ಹಣದಲ್ಲಿ ಪಾಲು ಕೊಂಡೊಯ್ಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ನಡೆದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವೊಂದನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕಳೆದೊಂದು ವರ್ಷಗಳಿಂದ ರಾಜ್ಯ ಸರ್ಕಾರ ಕೊರೋನದಿಂದ ಸಂಕಷ್ಟಕ್ಕೊಳಗಾಗಿರುವ ಜನರ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ನಿರಂತರವಾಗಿ ದೋಚುತ್ತಿದೆ. ಅದರಲ್ಲಿ ಕೇಂದ್ರಕ್ಕೆ ಪಾಲು ಕೊಡಲಾಗುತ್ತದೆ. ಆ ಪಾಲನ್ನು ದೆಹಲಿ ಕೊಂಡೊಯ್ಯಲು ಬಿಜೆಪಿ ರಾಜ್ಯ ಉಸ್ತುವಾರಿ

ಲೂಟಿ ಹಣದ ಪಾಲು ಪಡೆಯಲು ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾರೆ: ಎಚ್ ಡಿ ಕೆ Read More »

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ?

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಇರಲಿದೆ.ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ

19 ಜಿಲ್ಲೆಗಳಲ್ಲಿ ‌ಇಂದಿನಿಂದ ವೀಕೆಂಡ್ ‌ಕರ್ಪ್ಯೂ ಜಾರಿ. ಏನಿರುತ್ತೆ? ಏನಿರಲ್ಲ? Read More »

ದ.ಕ:ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಗುರುವಾರ 11 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 1009ಕ್ಕೆ ತಲುಪಿದೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ 7.17ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಗುರುವಾರ 679 ಮಂದಿಗೆ ಕೋವಿಡ್‌ ಪಾಸಿಟಿವ್ ಕಾಣಿಸಿಕೊಂಡಿದ್ದು, 657 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,605 ಸಕ್ರಿಯ ಪ್ರಕರಣಗಳಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 86,344 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೆ 3

ದ.ಕ:ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ Read More »