Editor

ದ.ಕ ದಲ್ಲಿ ಶೀಘ್ರ ಆನೆ ಕಾರ್ಯಪಡೆ‌ ಸ್ಥಾಪನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಗೆ ಮೀಸಲಾದ ಆನೆ ಕಾರ್ಯಪಡೆ (ಇಟಿಎಫ್) ರಚನೆಯನ್ನು ಸರ್ಕಾರ ಅಂತಿಮಗೊಳಿಸಲು ನಿರ್ಧರಿಸಿದೆ. ಆದಾಗ್ಯೂ, ಆನೆ ಶಿಬಿರದ ಪ್ರಸ್ತಾವನೆಗೆ ಗಣನೀಯವಾಗಿ ಹೆಚ್ಚಿನ ಹೂಡಿಕೆಯ ಅಗತ್ಯವಿರುತ್ತದೆ ಮತ್ತು ಉದ್ದೇಶಿತ ಗುಂಡ್ಯ ಪ್ರದೇಶದಲ್ಲಿ ಸ್ಥಳೀಯರಿಂದ ವಿರೋಧವನ್ನು ಎದುರಿಸಿದೆ. ಈ ಅಡೆತಡೆಗಳನ್ನು ಪರಿಗಣಿಸಿ, ಅಧಿಕಾರಿಗಳು ಈಗ ಇಟಿಎಫ್ ಸ್ಥಾಪನೆಗೆ ಆದ್ಯತೆ ನೀಡುತ್ತಿದ್ದಾರೆ, ಸುಳ್ಯ ಮತ್ತು ಗುಂಡ್ಯವನ್ನು ಕೇಂದ್ರ ಕಾರ್ಯಾಚರಣೆಯ ವಲಯಗಳಾಗಿ ಗುರುತಿಸಲಾಗಿದೆ. ಪ್ರಸ್ತಾವನೆಗೆ ಈಗಾಗಲೇ ಸಚಿವ […]

ದ.ಕ ದಲ್ಲಿ ಶೀಘ್ರ ಆನೆ ಕಾರ್ಯಪಡೆ‌ ಸ್ಥಾಪನೆ Read More »

ಬಜ್ಪೆ: ಯುವಕನ ಮೇಲೆ‌ ಚೂರಿ ಇರಿತ| ಆರೋಪಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಮಂಗಳೂರಿನ ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಎಡಪದವಿನಲ್ಲಿ ಸೋಮವಾರ ಬೈಕಿನಲ್ಲಿ ಸಾಗುತ್ತಿದ್ದ ನಾಲ್ವರು ಯುವಕರ ಗುಂಪು ಚೂರಿ ಇರಿದು ಯುವಕನನ್ನು ಕೊಲ್ಲಲು ಯತ್ನಿಸಿದೆ. ಈ ಕೃತ್ಯದಲ್ಲಿ ಭಾಗಿಯಾದ ಒಬ್ಬ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಖಿಲೇಶ್‌ ಹಲ್ಲೆಗೊಳಗಾದ ಯುವಕ. ಒಂದೇ ಬೈಕಿನಲ್ಲಿ ನಾಲ್ವರು ಕುಳಿತುಕೊಂಡು, ಕೈಯಲ್ಲಿ ಚೂರಿ ಹಿಡಿದುಕೊಂಡು ಸಾಗುತ್ತಿದ್ದುದ್ದನ್ನು ಅಖಿಲೇಶ್‌ ನೋಡಿದ್ದರು. ಈ ಕುರಿತು ವಿಡಿಯೊ ಚಿತ್ರೀಕರಿಸಲು ಅವರನ್ನು ಹಿಂಬಾಲಿಸಿದ್ದರು. ಬೈಕಿನಲ್ಲಿ ಸಾಗುತ್ತಿದ್ದ ಕಿಡಿಗೇಡಿಗಳು ಅಖಿಲೇಶ್‌ ಅವರತ್ತ ಚೂರಿ ಬೀಸಿದ್ದು, ಅವರ

ಬಜ್ಪೆ: ಯುವಕನ ಮೇಲೆ‌ ಚೂರಿ ಇರಿತ| ಆರೋಪಿ ಪೊಲೀಸ್ ವಶಕ್ಕೆ Read More »

ಸುರತ್ಕಲ್ – ನಂತೂರು – ಬಿಸಿರೋಡ್ ಹೆದ್ದಾರಿ NHAI ಗೆ ಹಸ್ತಾಂತರ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಸುರತ್ಕಲ್-ನಂತೂರು-ಬಿ.ಸಿ. ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅನ್ನು ಸುಧಾರಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿರುವ ಸುರತ್ಕಲ್-ನಂತೂರು-ಬಿಸಿ ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅನುಮೋದನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಜಾಲವನ್ನು ಸುಧಾರಣೆ ಮಾಡುವ ಬೇಡಿಕೆ ತುಂಬಾ ವರ್ಷಗಳಿಂದ ಕೇಳಿಬಂದಿತ್ತು. ಕೊನೆಗೂ ಎನ್‌ಎಂಪಿಟಿ ವ್ಯಾಪ್ತಿಯ

ಸುರತ್ಕಲ್ – ನಂತೂರು – ಬಿಸಿರೋಡ್ ಹೆದ್ದಾರಿ NHAI ಗೆ ಹಸ್ತಾಂತರ Read More »

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಸಮಗ್ರ ನ್ಯೂಸ್: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ‘ಬಾಲಿವುಡ್ ಹೀ ಮ್ಯಾನ್’ ಎಂದೇ ಖ್ಯಾತಿಯಾಗಿದ್ದ ಧರ್ಮೇಂದ್ರ ನಿಧನಕ್ಕೆ ಹಲವು ನಟರು ಕಂಬನಿ ಮಿಡಿದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 89 ವರ್ಷದ ಧರ್ಮೇಂದ್ರ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಅವರ ಸಾವಿನ ವದಂತಿಗಳು

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ Read More »

ಕರಾವಳಿಯಾದ್ಯಂತ ಕಾಡಿದ ವರುಣ| ಇಂದೂ ಮಳೆ ಮನ್ಸೂಚನೆ

ಸಮಗ್ರ ನ್ಯೂಸ್: ಮಲಕ್ಕಾ ಮತ್ತು ದಕ್ಷಿಣ ಅಂಡಮಾನ್‌ ಸಮುದ್ರ, ಬಂಗಾಲಕೊಲ್ಲಿ ಮತ್ತು ಶ್ರೀಲಂಕಾದಲ್ಲಿ ನಿಮ್ನ ಒತ್ತಡ ನಿರ್ಮಾಣಗೊಂಡಿದ್ದು, ಪಶ್ಚಿಮ ವಾಯುವ್ಯ ದಿಕ್ಕಿನತ್ತ ಸಾಗುತ್ತಿದೆ. ನ. 24ರಂದು ಇದರ ತೀವ್ರತೆ ಇನ್ನಷ್ಟು ಹೆಚ್ಚಾಗಿ ಮುಂದಿನ 48 ಗಂಟೆಗಳಲ್ಲಿ ಇದು ಚಂಡಮಾರುತವಾಗಿ ಪರಿವರ್ತನೆ ಯಾಗುವ ಸಾಧ್ಯತೆ ಇದೆ. ನಿಮ್ನ ಒತ್ತಡದ ಪರಿಣಾಮ ಮತ್ತು ಹಿಂಗಾರು ಕಾರಣದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ರವಿವಾರವೂ ಮಳೆ

ಕರಾವಳಿಯಾದ್ಯಂತ ಕಾಡಿದ ವರುಣ| ಇಂದೂ ಮಳೆ ಮನ್ಸೂಚನೆ Read More »

ನ.23 ಕ್ಯಾಂಪ್ಕೋ‌ಗೆ ಚುನಾವಣೆ| 6 ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿ

ಸಮಗ್ರ ನ್ಯೂಸ್: ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ)ದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆಯಲಿದೆ. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ ಆರು ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿದ್ದಾರೆ. ಕರ್ನಾಟಕ ಮತ್ತು ಕೇರಳದ ಅಡಿಕೆ ಮತ್ತು ಕೊಕ್ಕೊ ಬೆಳೆಗಾರರ ಸಂಘಟನೆಯಾಗಿರುವ ಕ್ಯಾಂಪ್ಕೊಗೆ 15 ವರ್ಷಗಳ ನಂತರ ಮತ್ತೆ ಚುನಾವಣೆ ನಡೆಯುತ್ತಿದೆ. 2010ರಲ್ಲಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಂತರದ ಎರಡು ಅವಧಿಗೆ ಎಲ್ಲ

ನ.23 ಕ್ಯಾಂಪ್ಕೋ‌ಗೆ ಚುನಾವಣೆ| 6 ಸ್ಥಾನಗಳಿಗೆ ಎಂಟು ಮಂದಿ ಕಣದಲ್ಲಿ Read More »

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಕಾರು ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ 21 ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಪೃಥ್ವಿ ರಾವ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಬೆಳ್ತಂಗಂಡಿಯಿಂದ ಕಾಲೇಜಿಗೆ

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು Read More »

ಭಾರತೀಯ ನೌಕಾಪಡೆಯ ರಹಸ್ಯ ಪಾಕ್ ಗೆ ರವಾನೆ| ಉಡುಪಿಯಲ್ಲಿ ಇಬ್ಬರು ದೇಶದ್ರೋಹಿಗಳು ಅರೆಸ್ಟ್

ಸಮಗ್ರ ನ್ಯೂಸ್: ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟ ದುರಂತಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಒಂದು ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಗೌಪ್ಯ ಮಾಹಿತಿ ಹಾಗೂ ಕೆಲವು ರಹಸ್ಯಗಳನ್ನು ಕಳುಹಿಸಿರುವ ಆರೋಪದ ಮೇರೆಗೆ ಶಿಪ್ ಯಾರ್ಡ್ ನ ಇಬ್ಬರು ನೌಕರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಗಳನ್ನು ವಾಟ್ಸಪ್‌ ಹಾಗೂ ಫೇಸ್‌ಬುಕ್ ಮೂಲಕ ಅನಧಿಕೃತವಾಗಿ ಶೇರ್‌ ಮಾಡಿ, ಅಕ್ರಮ ಲಾಭ

ಭಾರತೀಯ ನೌಕಾಪಡೆಯ ರಹಸ್ಯ ಪಾಕ್ ಗೆ ರವಾನೆ| ಉಡುಪಿಯಲ್ಲಿ ಇಬ್ಬರು ದೇಶದ್ರೋಹಿಗಳು ಅರೆಸ್ಟ್ Read More »

ಮೆಕ್ಯಾನಿಕ್ ನ ಜೊತೆಗೆ ಕಾಡುಹಂದಿ ಸಖ್ಯ| ಕುದುರೆಮುಖ ಕಾಡಂಚಿನಲ್ಲೊಂದು ಅಪರೂಪದ ದೃಶ್ಯ

ಸಮಗ್ರ ನ್ಯೂಸ್: ಕುದುರೆಮುಖ ಕಾಡಂಚಿನಲ್ಲಿ ಇಡೀ ಜೀವನವನ್ನು ಪ್ರಾಣಿಗಳಿಗಾಗಿ ಮೀಸಲಿಟ್ಟಿರುವ ಮೆಕ್ಯಾನಿಕ್ ಒಬ್ಬರು, ಸದ್ದಿಲ್ಲದೆ ಅವುಗಳೊಂದಿಗೆ ಸಹಜೀವನ ನಡೆಸುತ್ತಿದ್ದಾರೆ. ಇವರ ಪ್ರೀತಿ ಅರಸಿ ಕಾಡುಹಂದಿಯೂ ನಿತ್ಯ ಬರುವುದು ವಿಶೇಷ. ಕುದುರೆಮುಖ ಎಂದರೆ ಥಟ್ಟನೆ ನೆನಪಿಗೆ ಬರುವುದು ಪಶ್ಚಿಮಘಟ್ಟಗಳ ಪರ್ವತಶ್ರೇಣಿ, ಅಲ್ಲಿದ್ದ ಅದಿರು ಕಂಪನಿ, ರಾಷ್ಟ್ರೀಯ ಉದ್ಯಾನ, ಗುಡ್ಡಗಳ ನಡುವೆ ಪ್ರಶಾಂತವಾಗಿ ಹರಿಯುವ ನದಿಗಳು. ಅದಿರು ಕಂಪನಿ ಸ್ಥಗಿತಗೊಂಡ ಬಳಿಕ ಪಾಳುಬಿದ್ದಿರುವ ಕೇಂದ್ರೀಯ ವಿದ್ಯಾಲಯ, ಆಸ್ಪತ್ರೆ ಕಟ್ಟಡ, ನೆಹರೂ ಪ್ರತಿಮೆಗಳು, ಟೌನ್‌ಶಿಪ್‌ ಇದ್ದ ವೈಭವದ ಕುರುಹುಗಳನ್ನು ಹೇಳುತ್ತವೆ. ಅಳಿದುಳಿದಿರುವ

ಮೆಕ್ಯಾನಿಕ್ ನ ಜೊತೆಗೆ ಕಾಡುಹಂದಿ ಸಖ್ಯ| ಕುದುರೆಮುಖ ಕಾಡಂಚಿನಲ್ಲೊಂದು ಅಪರೂಪದ ದೃಶ್ಯ Read More »

ಹವಾಮಾನ ವರದಿ| ಕರಾವಳಿ, ದ.ಒಳನಾಡಿನಲ್ಲಿ ಹಗುರ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆಯ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರನದೊಂದಿಗೆ ಲಘು ಪ್ರಮಾಣದಲ್ಲಿ ಮಳೆಯಾಗಬಹುದು ಎಂಬ ಮುನ್ಸೂಚನೆಯಿದೆ. ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ತುಮಕೂರು, ಹಾಸನ

ಹವಾಮಾನ ವರದಿ| ಕರಾವಳಿ, ದ.ಒಳನಾಡಿನಲ್ಲಿ ಹಗುರ ಮಳೆ ಮುನ್ಸೂಚನೆ Read More »