Editor

ಎಸ್ಸೆಸ್ಸೆಲ್ಸಿ ‌ಪರೀಕ್ಷೆ‌‌ ನಡೆಸಲು ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್’ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡು ದಿನ ಮಾತ್ರ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿರುವ ಶಿಕ್ಷಣ ಇಲಾಖೆ, ಕೋವಿಡ್ ನಿಂದ ಎಸ್‌ಎಸ್‌ಎಲ್’ಸಿ ವಿದ್ಯಾರ್ಥಿಗಳ ಹಿಂದಿನ ಸಾಲಿನ (9ನೇ ತರಗತಿ) ಪರೀಕ್ಷೆ ನಡೆದಿಲ್ಲ. ಎಸ್‌ಎಸ್‌ಎಲ್’ಸಿ ಪ್ರಿಪರೇಟರಿ ಸೇರಿ ಯಾವುದೇ ಪರೀಕ್ಷೆಗಳೂ ನಡೆದಿಲ್ಲ. ಹೀಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಪರೀಕ್ಷೆ ಸರಳೀಕರಿಸಿ ಒಂದು ದಿನ ಕೋರ್ […]

ಎಸ್ಸೆಸ್ಸೆಲ್ಸಿ ‌ಪರೀಕ್ಷೆ‌‌ ನಡೆಸಲು ಮಾರ್ಗಸೂಚಿ ಪ್ರಕಟ Read More »

ಕೊರೊನ ಲಸಿಕೆಯಿಂದ ಪುರುಷತ್ವ ಕಡಿಮೆಯಾಗುತ್ತಾ? ಇಲ್ಲಿದೆ ಅಧ್ಯಯನ ವರದಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಜನವರಿಯಿಂದಲೇ ಲಸಿಕಾ ಅಭಿಯಾನ ಆರಂಭವಾಗಿದೆ. ಆದರೆ ಲಸಿಕೆ ತೆಗೆದುಕೊಂಡ ನಂತರ ಆರೋ ಗ್ಯದ ಮೇಲಾಗುವ ಪರಿಣಾಮಗಳ ಕುರಿತು ಕೆಲವು ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಕೊರೊನಾ ಲಸಿಕೆ ಪಡೆದುಕೊಂಡ ನಂತರ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ. ವೀರ್ಯದ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ಕೊರೊನಾ ಲಸಿಕೆ ಪರಿಣಾಮ ಬೀರುತ್ತದೆ ಎಂಬ ಕೆಲವು ಮಾತುಗಳು ಕೇಳಿಬಂದಿದ್ದವು. ಈ ಕುರಿತು ಮಿಯಾಮಿ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. 45 ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು,

ಕೊರೊನ ಲಸಿಕೆಯಿಂದ ಪುರುಷತ್ವ ಕಡಿಮೆಯಾಗುತ್ತಾ? ಇಲ್ಲಿದೆ ಅಧ್ಯಯನ ವರದಿ Read More »

ಇನ್ ಮುಂದೆ ಗಂಡ್ಮಕ್ಳೂ‌ ತಾಯಿಯಾಗಬಹುದಂತೆ!, ಚೈನಾ ವಿಜ್ಞಾನಿಗಳಿಂದ ತಲೆಕೆಟ್ಟ ಪ್ರಯೋಗ

ಬೀಜಿಂಗ್:ಚೀನೀ ವಿಜ್ಞಾನಿಗಳು ವಿಚಿತ್ರ, ಕೇಳಲು ಭಯಾನಕ ಹಾಗೂ ವಿಲಕ್ಷಣ ಪ್ರಯೋಗವೊಂದನ್ನು (Weired Experiment) ನಡೆಸುತ್ತಿದ್ದಾರೆ. ಇತ್ತೀಚೆಗೆ, ಚೀನಾದ ವುಹಾನ್ ಲ್ಯಾಬ್‌ನಿಂದ (Wuhan Lab) ಹೊರಬಂದ ವಿಜ್ಞಾನಿಯೊಬ್ಬರು ಚೀನಾ ಚಿತ್ರ ವಿಚಿತ್ರ ಸಂಶೋಧನೆ ನಡೆಸುತ್ತಿರುತ್ತದೆ ಎಂದು ಹೇಳಿದ್ದಾರೆ. ಚೀನಾದಲ್ಲಿ ನಡೆಸಲಾಗುವ ಇಂತಹ ಹಲವು ಸಂಶೋಧನೆಗಳನ್ನು ಸಾಮಾನ್ಯವಾಗಿ ಇತರ ದೇಶಗಳಲ್ಲಿ ನಿಷೇಧಿಸಲಾಗಿದೆ. ಈ ನಡುವೆ ಚೀನಾದ ವಿಜ್ಞಾನಿಗಳು ಪುರುಷರನ್ನು ಗರ್ಭಿಣಿಯನ್ನಾಗಿಸುವ ಪವಾಡದಲ್ಲಿ ಯಶಸ್ವಿಯಗಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ಪ್ರಯೋಗ ಇದೀಗ ಯಶಸ್ವಿಯಾಗಿದೆ

ಇನ್ ಮುಂದೆ ಗಂಡ್ಮಕ್ಳೂ‌ ತಾಯಿಯಾಗಬಹುದಂತೆ!, ಚೈನಾ ವಿಜ್ಞಾನಿಗಳಿಂದ ತಲೆಕೆಟ್ಟ ಪ್ರಯೋಗ Read More »

ಅಥ್ಲೆಟಿಕ್ ದಂತಕಥೆ ಮಿಲ್ಖಾ ಸಿಂಗ್ ವಿಧಿವಶ

ಚಂಡೀಗಢ: ಒಂದು ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟ ನಡೆಸಿದ್ದ ಮಿಲ್ಖಾ ಸಿಂಗ್ (91) ಜೂ.19 ನಿಧನರಾಗಿದ್ದಾರೆ.ಈ ಮಾಹಿತಿಯನ್ನು ಕುಟುಂಬದ ವಕ್ತಾರರು ದೃಢಪಡಿಸಿದ್ದಾರೆ. ಜೂ.14 ರಂದು ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾದಿಂದ ಸಾವನ್ನಪ್ಪಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಿಲ್ಖಾ ಸಿಂಗ್ (91) ಗಾಲ್ಫರ್ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.ಕೊರೊನಾದಿಂದ ತೀವ್ರವಾಗಿ ಅನಾರೋಗ್ಯ ಎದುರಿಸಿದ್ದ ಮಿಲ್ಖಾ ಸಿಂಗ್ ಚೇತರಿಸಿಕೊಂಡು ಜೂ.16 ರಂದು ಐಸಿಯುನಿಂದ ಹೊರ ಬಂದಿದ್ದರು.

ಅಥ್ಲೆಟಿಕ್ ದಂತಕಥೆ ಮಿಲ್ಖಾ ಸಿಂಗ್ ವಿಧಿವಶ Read More »

ಆಂದ್ರದಲ್ಲೂ ಗುಲ್ಲೆಬ್ಬಿಸ್ತಿದೆ ಟಿಪ್ಪು ವಿವಾದ: ಪ್ರತಿಮೆ ರಚಿಸಿದರೆ ನಾಶ ಮಾಡ್ತೇವೆ ಎಂದ ಬಿಜೆಪಿ

ಹೈದರಾಬಾದ್: ಓಟಿಗಾಗಿ ಟಿಪ್ಪು ಪ್ರತಿಮೆಯನ್ನು ನಿರ್ಮಿಸುವುದಾದರೆ ಅದನ್ನು ನಶಿಸುವುದಾಗಿ ಆಂದ್ರ ಬಿಜೆಪಿ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಾ, ಆಂಧ್ರದ ಬಿಜೆಪಿ ನಾಯಕರು ಆಂದೋಲನ ಮಾಡಿ ಟಿಪ್ಪುವಿನ ಪ್ರತಿಮೆ ನಿರ್ಮಿಸಿದರೆ ನೆಲಸಮಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಆಂಧ್ರದ ಕಡಪದಲ್ಲಿ ಟಿಪ್ಪುವಿನ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದನ್ನು ಖಂಡಿಸಿ ಜಿನ್ನಾ ರಸ್ತೆ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಹೋದಾಗ ಪೊಲೀಸರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಮತ್ತು ಇತರರನ್ನು ವಶಕ್ಕೆ ತೆಗೆದುಕೊಂಡರು. ವೈಎಸ್ಆರ್ಸಿಪಿ ಕೋಮು

ಆಂದ್ರದಲ್ಲೂ ಗುಲ್ಲೆಬ್ಬಿಸ್ತಿದೆ ಟಿಪ್ಪು ವಿವಾದ: ಪ್ರತಿಮೆ ರಚಿಸಿದರೆ ನಾಶ ಮಾಡ್ತೇವೆ ಎಂದ ಬಿಜೆಪಿ Read More »

ಕಾಂಗ್ರೆಸಿಗರು ಸಿಎಂ ಆಗಲು ಸೂಟ್ ಹೊಲಿಸಿಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ: ಎಚ್.ಡಿ.ಕೆ

ಕೋಲಾರ: ಕಾಂಗ್ರೆಸ್‌ನಲ್ಲೂ ಸೂಟ್ ಹೊಲಿಸಿಕೊಂಡು ಮುಖ್ಯಮಂತ್ರಿ ಆಗುವುದಕ್ಕೆ ರೆಡಿ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿಯಾಗಲು ಸೂಟ್ ಹೊಲಿಸಿಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ. 2023ರಲ್ಲಿ ಏನು ಆಗುತ್ತದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷದ ಶಾಸಕರಲ್ಲೇ ಹೊಂದಾಣಿಕೆ ಇಲ್ಲ. ನಾಯಕತ್ವ ಗೊಂದಲ ಒಂದು ದುರಾದೃಷ್ಟಕರ. ಈಗಾಗಲೇ ಒಬ್ಬ ಶಾಸಕ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕೇವಲ ನೀರಾವರಿ ಇಲಾಖೆಯಲ್ಲಿ ಮಾತ್ರ

ಕಾಂಗ್ರೆಸಿಗರು ಸಿಎಂ ಆಗಲು ಸೂಟ್ ಹೊಲಿಸಿಕೊಂಡು ತುದಿಗಾಲಿನಲ್ಲಿ ನಿಂತಿದ್ದಾರೆ: ಎಚ್.ಡಿ.ಕೆ Read More »

ಮಡಿಕೇರಿ: ಅಂಚೆ ಕಛೇರಿ ಬಳಿ ನಿರಂತರ ಭೂಕುಸಿತ | ಕಾಟಾಚಾರಕ್ಕೆ ನೋಟೀಸ್ ಕೊಟ್ಟಿದ್ದ ಅಧಿಕಾರಿಗಳು

ಮಡಿಕೇರಿ: ಅಂಚೆ ಕಚೇರಿ ಸಮೀಪ ಇರುವ ಹಾಪ್ ಕಾಮ್ಸ್ ಕಟ್ಟಡದ ಸಮೀಪ ಭೂಕುಸಿತ ಉಂಟಾಗಿದೆ. ಸ್ಥಳದಲ್ಲಿ ಖಾಸಗಿ ಕಟ್ಟಡ ನಿರ್ಮಾಣದ ಸಂದರ್ಭ ಸುಮಾರು 30ರಿಂದ 40 ಅಡಿ ಎಷ್ಟು ಮಣ್ಣು ತೆಗೆದು ತೆಗೆದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಮಣ್ಣು ತೆಗೆಯುವ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸು ಕೊಟ್ಟು ಕಟ್ಟಡದ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಡೆಗೋಡೆ ನಿರ್ಮಿಸಿದ ನಂತರವೇ ಕಟ್ಟಡದ ಕಾಮಗಾರಿಯನ್ನು ಮುಂದುವರಿಸುವಂತೆ

ಮಡಿಕೇರಿ: ಅಂಚೆ ಕಛೇರಿ ಬಳಿ ನಿರಂತರ ಭೂಕುಸಿತ | ಕಾಟಾಚಾರಕ್ಕೆ ನೋಟೀಸ್ ಕೊಟ್ಟಿದ್ದ ಅಧಿಕಾರಿಗಳು Read More »

ದ ಕ: ಹೆಚ್ಚುತ್ತಿರುವ ಸಾವಿನ ಸಂಖ್ಯೆ: ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಹೇರಿದರೂ ಸೋಂಕಿನ ಅರ್ಭಟ ತಗ್ಗಿಲ್ಲ. ಇಂದು ಈ ಮಹಾಮಾರಿಗೆ 15 ಮಂದಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 1,024 ಕ್ಕೆ ಏರಿದೆ. ಜಿಲ್ಲೆಯ ಇಂದಿನ ಪಾಸಿಟಿವಿಟಿ ರೇಟ್ 10.07% ಆಗಿದೆ. ಜತೆಗೆ ಇಂದು 665 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 6,931ಆಕ್ವೀವ್ ಕೇಸ್ ಇದ್ದು ಹಾಗೂ ಈವರೆಗೆ

ದ ಕ: ಹೆಚ್ಚುತ್ತಿರುವ ಸಾವಿನ ಸಂಖ್ಯೆ: ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ Read More »

ಸಿದ್ದರಾಮಯ್ಯರೇನು ಮಹಾನ್ ಹರಿಶ್ಚಂದ್ರರೇ…? ಕುಮಾರಸ್ವಾಮಿ ಆಕ್ರೋಶ

ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರು ಮಹಾನ್ ಹರಿಶ್ಚಂದ್ರರೇ? ರಾಜಕೀಯವನ್ನು ನಾನು ಅವರಿಂದ ಕಲಿಯಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದ ಮಾಲೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು‌ ನಗರದಲ್ಲಿ 400 ಎಕರೆ ರೀಡೋ(Re Do) ಮಾಡಿದ್ರಲ್ಲಾ, ಕೆಂಪಣ್ಣ ಅಯೋಗ ವರದಿ ಮಾಡಿದ್ರಲ್ಲ, ಏನಾಯ್ತು ಅದು? 400-500 ಕೋಟಿ ರೂಪಾಯಿ ಲೂಟಿ ಹೊಡೆದ , ಅವರೇನ್ ಸಾಚಾನ?, ಸಿದ್ದರಾಮಯ್ಯರಿಂದ ರಾಜಕೀಯ ಮಾಡೋದನ್ನ ನಾನು ಕಲಿಯಬೇಕಿಲ್ಲ ಎಂದು ಎಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 2008ರ ಚುನಾವಣೆಯಲ್ಲಿ ಯಡಿಯೂರಪ್ಪ

ಸಿದ್ದರಾಮಯ್ಯರೇನು ಮಹಾನ್ ಹರಿಶ್ಚಂದ್ರರೇ…? ಕುಮಾರಸ್ವಾಮಿ ಆಕ್ರೋಶ Read More »

ಬಕೆಟ್ ಗೆ ಬಿದ್ದು ಮಗು ಮೃತ್ಯು

ಹುಣಸೂರು: ಮನೆಯೊಳಗೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ತರಿಕಲ್ ಗ್ರಾಮದ ಸುಂದರರಾಜ್ ಎಂಬವರ ಎರಡೂವರೆ 2 ವರ್ಷದ ಮಗು ಸಮರ್ಥ್ ಮೃತಪಟ್ಟ ದುರ್ದೈವಿ ಕಂದ. ತನ್ನ ಇಬ್ಬರು ಅಕ್ಕಂದಿರೊಂದಿಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಮನೆಯವರೆಲ್ಲರೂ ಸತ್ತ ಮತ್ತ ಹುಡುಕಾಡಿದ್ದು ಬಾತ್ರೂಮ್ ನ ಬಕೆಟ್ ನಲ್ಲಿ ಮಗು ಪತ್ತೆಯಾಗಿದೆ. ತಕ್ಷಣ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ ಅದಾಗಲೇ ಮಗು ಮೃತಪಟ್ಟಿತ್ತು.

ಬಕೆಟ್ ಗೆ ಬಿದ್ದು ಮಗು ಮೃತ್ಯು Read More »