Editor

ಅಗತ್ಯ ವಸ್ತು ಖರೀದಿಗೆ ಮದ್ಯಾಹ್ನ 1 ರವರೆಗೆ ಅವಕಾಶ: ದಕ ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್‌ ಡೌನ್ ಜೂ.21 ರಿಂದ ಜೂ.28 ರವರೆಗೆ ಸೆಮಿ ಲಾಕ್‌ಡೌನ್ ಮಾದರಿಯಲ್ಲಿ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಶನಿವಾರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಾಕ್‌ ಡೌನ್ ತೆರವು ಕುರಿತಂತೆ ರಾಜ್ಯ ಸರಕಾರ ಶನಿವಾರ ಹೊರಡಿಸಿದೆ ಆದೇಶದಂತೆ ಜೂ.11ರಂದು ಹೊರಡಿಸಿದ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಹಾಗಾಗಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ. ಆದಾಗ್ಯೂ […]

ಅಗತ್ಯ ವಸ್ತು ಖರೀದಿಗೆ ಮದ್ಯಾಹ್ನ 1 ರವರೆಗೆ ಅವಕಾಶ: ದಕ ಜಿಲ್ಲಾಧಿಕಾರಿ Read More »

ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನೇ ಅಗೆದರು | ಅರ್ಚಕ, ಜ್ಯೋತಿಷಿ, ಸರ್ಕಾರಿ ಉದ್ಯೋಗಿ ಸಹಿತ ಏಳು ಜನರ ಬಂಧನ

ಹಾಸನ: ನಿಧಿ ಸಿಗುತ್ತದೆ ಎಂಬ ಆಸೆಯಿಂದ ದೇವಾಲಯವನ್ನೇ ಅಗೆದ ಅರ್ಚಕ, ಜ್ಯೋತಿಷ್ಯ ಮತ್ತು ಸರ್ಕಾರಿ ನೌಕರ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಆಲೂರು ತಾಲ್ಲೂಕಿನ ದೈತಾಪುರ ಹೊರವಲಯದ ಪಾರ್ವತಮ್ಮನ ಬೆಟ್ಟದ ಮೇಲಿರುವ ಪುರಾತನ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಈ ಆರೋಪದ ಮೇಲೆ ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾರಾಯಣ, ಗಣಪತಿ ದೇವಾಲಯದ ಅರ್ಚಕ ತಿಪ್ಪೇಸ್ವಾಮಿ, ಜೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ತಾಲ್ಲೂಕಿನ ಜಯರಾಮ, ಚೇತನ್, ಮಂಜುನಾಥ, ಹಾಸನ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದ

ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನೇ ಅಗೆದರು | ಅರ್ಚಕ, ಜ್ಯೋತಿಷಿ, ಸರ್ಕಾರಿ ಉದ್ಯೋಗಿ ಸಹಿತ ಏಳು ಜನರ ಬಂಧನ Read More »

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ’ವಿರಾಟ ದರ್ಶನ’, ಹೊಸ ದಾಖಲೆ ಬರೆದ ಕೊಹ್ಲಿ

ಇಂಗ್ಲೆಂಡ್: ಇಲ್ಲಿನ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ನಡೆಯದೇ ಎರಡನೇ ದಿನ ಆರಂಭವಾಗಿದೆ. ಭಾರತ 146 ರನ್ ಗೆ 3 ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಜೇಯ 44 ರನ್ ಮತ್ತು ಅಜಿಂಕ್ಯಾ ರೆಹಾನೆ ಅಜೇಯ 29 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ’ವಿರಾಟ ದರ್ಶನ’, ಹೊಸ ದಾಖಲೆ ಬರೆದ ಕೊಹ್ಲಿ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ವಾರಭವಿಷ್ಯಜೂ.21/2021 ರಿಂದ ಜೂ.27/2021 ರ ವರೆಗೆ ಮೇಷ ರಾಶಿ:-ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯಾಗಿ ಕಂಟ್ರಾಕ್ಟ್ ವೃತ್ತಿಯವರಿಗೆ ಧನಾಗಮನ ನಿರಂತರವಿದೆ. ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಹೊಸ ಉತ್ಸಾಹ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಅದರಾಚೆಗೂ…

ಅಪ್ಪ ಎಂಬ ದೈವತ್ವದ ಸಾಕಾರ ಮೂರ್ತಿಯನ್ನು ಹಿಡಿಯಷ್ಟಾದರೂ ಅರ್ಥಮಾಡಿಕೊಳ್ಳಬೇಕೆಂಬ ಪ್ರಯತ್ನಗಳೆಲ್ಲ ಲೆಕ್ಕವಿಲ್ಲದಷ್ಟು ಬಾರಿ ವಿಫಲವಾಗಿದೆ. ಆಗೆಲ್ಲ ಈ ಅಪ್ಪ ಎಂಬ ವ್ಯಕ್ತಿತ್ವದ ಗಹನತೆ ನಮ್ಮ ವಿವೇಚನಕ್ಕೆ ದಕ್ಕುವಂಥದಲ್ಲ ಎಂದು ಸುಮ್ಮನಾಗಿದ್ದೆ. ಆದ್ರೆ ಅಪ್ಪನ ಮಹತ್ವ ಗೊತ್ತಾಗಿದ್ದು ನಾ ಅಪ್ಪನಾದಾಗ. ತನ್ನ ಮಗುವಿನ ಬಾಯಲ್ಲಿ ‘ಪಪ್ಪಾ’ ಎಂದು ಕರೆಸಿಕೊಂಡಾಗ…. ಅಪ್ಪ ಅಂದ್ರೆ ಯಾರು? ನಮ್ಮ ಬದುಕಿನಲ್ಲಿ ಅಪ್ಪತನದ ಪಾತ್ರವೇನು ಎಂಬುದನ್ನು ಯೋಚಿಸುವುದಕ್ಕೆ ಮತ್ತೊಮ್ಮೆ ಸಮಯಬಂದಿದೆ.ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾನೆ!

ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಅದರಾಚೆಗೂ… Read More »

ಬಂಟ್ವಾಳ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಇಂದು ನಡೆದಿದೆ. ಸಿಮೆಂಟ್ ಮಿಕ್ಸರ್ ಯಂತ್ರವನ್ನು ಸಾಗಾಟ ಮಾಡುತ್ತಿದ್ದ ಲಾರಿಯಾಗಿದ್ದು ಉಪ್ಪಿನಂಗಡಿ ಕಡೆಯಿಂದ ಮಂಗಳೂರಿನ ಬೈಕಂಪಾಡಿಗೆ ತೆರಳುತ್ತಿತ್ತು. ಮಾಣಿ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಚಾಲಕ ಲಾರಿ, ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.ಇನ್ನು ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದು, ಲಾರಿ ಹಾಗೂ ಯಂತ್ರಗಳಿಗೆ

ಬಂಟ್ವಾಳ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ

ಸುಳ್ಯ: ನ್ಯೂಜಿಲೆಂಡ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅರಂತೋಡು ಮೇರ್ಕಜೆಯ ಮೂಲದ ಜಯಪ್ರಕಾಶ್(45) ಅವರು ಜೂನ್ 15 ರ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಶುಕ್ರವಾರ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಜಯಪ್ರಕಾಶ್ ಅವರ ಪತ್ನಿ ಪುಷ್ಪಾ ಇವರೂ ನ್ಯೂಝಿಲೆಂಡ್‌ನಲ್ಲಿದ್ದು,

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ Read More »

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ

ಬಿಹಾರ: ನರ್ಸ್ ಗಳು ಮಾಡಿದ ಯಡವಟ್ಟಿನಿಂದ ಮಹಿಳೆಯೊಬ್ಬರು ಒಂದೇ ದಿನ ಎರಡು ಕೋವಿಡ್ ವ್ಯಾಕ್ಸಿನ್ ಗಳನ್ನು ಚುಚ್ಚಿಸಿಕೊಂಡ ಘಟನೆ ಜೂನ್ 16ರಂದು ನಡೆದಿದೆ. ಈ ಹಿನ್ನಲೆಯಲ್ಲಿ ತಪ್ಪೆಸಗಿದ ಶುಶ್ರೂಷಕಿಯರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ. ಪಾಟ್ನಾದ ಫುನ್’ಫುನ್ ಬ್ಲಾಕ್ ಎಂಬಲ್ಲಿ ಸುನೀಲಾ ದೇವಿ ಎಂಬ ಮಹಿಳೆ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದಿದ್ದರು. ರಿಜಿಸ್ಟರ್​ ಬಳಿಕ ನರ್ಸ್​ ಒಬ್ಬರು ಆಕೆಗೆ ಕೋವಿಶೀಲ್ಡ್​ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು ಎಂದು ಹೇಳಿ

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ Read More »

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ

ಮಿಲ್ಕಾ ಸಿಂಗ್..ಈ ಹೆಸರೇ ಸ್ಫೂರ್ತಿಯ ಚಿಲುಮೆ. ಟ್ರ್ಯಾಕ್ ನಲ್ಲಿ ಓಡಲು ಶುರು ಮಾಡುವ ಪ್ರತಿ ಅಥ್ಲೀಟ್ ಗೆ ಭರವಸೆಯ ಬೆಳಕು ಈ ಒಂದು ಹೆಸರು. ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್.. ಅಂತಹುದ್ದೊಂದು ಮಾಂತ್ರಿಕತೆ ಮಿಲ್ಕಾ ಸಿಂಗ್ ಹೆಸರಿನಲ್ಲಿದೆ.ಭಾಘ್ ಮಿಲ್ಕಾ.. ಭಾಘ್ ಮಿಲ್ಕಾ.. ಹೌದು ಮಿಲ್ಕಾ ಸಿಂಗ್ ಮೊದಲು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದರು. ನಂತರ ಅಕ್ಷರ ಕಲಿಯಲು ಕಿಲೋ ಮೀಟರ್‌ ಗಟ್ಟಲೇ ಓಡುತ್ತಿದ್ದರು. ಬಳಿಕ ದಂಗೆಯ ಭಯದಿಂದ ಓಡುತ್ತಾ ಗಡಿ

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ Read More »

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ

ಧರ್ಮಸ್ಥಳ: ನಾನು ಸಿಎಂ ಯಡಿಯೂರಪ್ಪ ಅವರ ಪಿಎ ಎಂದು ಹೇಳಿ ಯುವಕನೊಬ್ಬ ಕೆಎಸ್ಆರ್ಟಿಸಿ ಚಾಲಕರೊಬ್ಬರಿಗೆ ಲಕ್ಷ ರೂ. ವಂಚಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಡಿಪೋದ ಬಸ್ ಚಾಲಕ ಪುರುಷೋತ್ತಮ್ ವಂಚಗೊಳಗಾದವರು. ಅವರಿಗೆ ಧರ್ಮಸ್ಥಳದ ಹೋಟೆಲೊಂದರಲ್ಲಿ ಶೈಲೇಶ್ ಎಂಬ ಯುವಕನ ಪರಿಚಯವಾಗಿತ್ತು. ಆತ ಸಿಎಂ ಯಡಿಯೂರಪ್ಪ ನನಗೆ ತುಂಬಾ ಆತ್ಮೀಯರು ಎಂದು ನಂಬಿಸಿದ್ದಾನೆ. ಮೊಬೈಲ್ನಲ್ಲಿ ಹಲವಾರು ಫೋಟೋಗಳನ್ನು ತೋರಿಸಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹಣ ಹಂಚಲು ನನ್ನಲ್ಲಿ ನೀಡುತ್ತಾರೆ ಎಂದು ಸುಳ್ಳು ಬಿಟ್ಟಿದ್ದಾನೆ. ಯುವಕ ನಾನು

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ Read More »