Editor

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ

ಬರಾಮುಲ್ಲ: ಲಷ್ಕರ್ -ಇ- ತಾಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಇಂದು ಮುಂಜಾನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸುಪೋರ್ ನಲ್ಲಿ ಉಗ್ರರು ಇರುವ ಮಾಹಿತಿ ಪಡೆದ ಸೇನೆ ಯೋಜಿತ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಆರಂಭವಾದ ಸೇನಾಕಾರ್ಯಾಚರಣೆ ಇಂದು ಮುಂಜಾನೆ ಉಗ್ರ ಸಂಘಟನೆಯ ಕಮಾಂಡರ್ ಮುದಾಸಿರ್ ಪಂಡಿತ್ ಹತ್ಯೆಯಾಗುವ ಮೂಲಕ ಕೊನೆಗೊಂಡಿದೆ ಎಂದು ತಿಳಿದುಬಂದಿದೆ. ಈ ಉಗ್ರರು ವಾರದ ಹಿಂದೆ ಇಬ್ಬರು ನಾಗರಿಕರು ಮತ್ತು […]

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ Read More »

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ

ಮಂಗಳೂರು: ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದ್ದು ಚಾಲಕರಿಬ್ಬರು ಲಾರಿ ಸಹಿತ ಕಣ್ಮರೆಯಾಗಿದ್ದಾರೆ. ಎನ್ಎಂಪಿಟಿ ಯ 14ನೇ ಬರ್ತ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಕಣ್ಮರೆಯಾದ ವರನ್ನು ಚಾಲಕ ರಾಜೇಶಾಬ್ (25) ಮತ್ತು ಬದಲಿ ಚಾಲಕ ಮಾಲಕಪ್ಪ (35) ಎಂದು ಗುರುತಿಸಲಾಗಿದೆ. ಇಬ್ಬರೂ ಚಾಲಕರು ಸಾವವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಾರಿಗೆ ಹಡಗಿನಿಂದ ಸರಕು ತುಂಬಿಸಲು ತರುತ್ತಿದ್ದಾಗ ಆಕಸ್ಮಿಕವಾಗಿ ಲಾರಿ ನೀರಿಗೆ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ Read More »

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ

ಬೆಂಗಳೂರು: ಆರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಇದೀಗ ಲೋಕಸಭೆ ಸಚಿವಾಲಯದ ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡಿಸಿ ಆದೇಶ ಹೊರಡಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಪ್ರೈಡ್‌ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತೆಲುಗು, ಬಂಗಾಳಿ, ಮರಾಠಿ, ತಮಿಳು ಸೇರಿದಂತೆ ಬಹುತೇಕ ಭಾಷೆಗಳನ್ನು ಸೇರ್ಪಡೆ ಮಾಡಿ ಕನ್ನಡವನ್ನು ನಿರ್ಲಕ್ಷ್ಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಲೋಕಸಭೆ ಕನ್ನಡ ಭಾಷೆಯನ್ನು ಸೇರ್ಪಡಿಸಿಕೊಂಡಿದೆ. ಲೋಕಸಭಾ ಸಚಿವಾಲಯದ

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ Read More »

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ

ನವದೆಹಲಿ : ಕೊರೊನಾ ಸಂಕಷ್ಟ ತೊಲಗಿಸಲು ಯೋಗ ಆಶಾಕಿರಣವಾಗಿದೆ. ಯೋಗದಿಂದ ಜನರ ಉತ್ಸಾಹ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರಿಂದ ಯೋಗ ನಡೆಯುತ್ತಿದೆ. ಕೊರೊನಾದ ವಿರುದ್ಧ ಹೋರಾಡಲು ಯೋಗ ಸಹಕಾರಿಯಾಗಿದೆ. ಕೊರೊನಾದಿಂದ ಇಂದು ವಿಶ್ವವೇ ನರಳುತ್ತಿದೆ. ಹೀಗಾಗಿ ದೊಡ್ಡ ಕಾರ್ಯಕ್ರಾಮ ಆಯೋಜನೆ ಮಾಡಲಾಗುತ್ತಿಲ್ಲ.ಆದರೂ ಯೋಗ ದಿನದ ಹುಮ್ಮಸ್ಸು ಮಾತ್ರ ಕಡಿಮೆಯಾಗಲ್ಲ. ಈ ಬಾರಿಯ

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ Read More »

ಜೂ.21ರಿಂದ ವ್ಯಾಕ್ಸಿನೇಷನ್‌ ಹೊಸ ಅಭಿಯಾನ, ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ವ್ಯಾಕ್ಸಿನ್

ನವದೆಹಲಿ: ಜೂನ್ 7 ರಂದು ಪ್ರಧಾನಿ ಮೋದಿ ಘೋಷಿಸಿದಂತೆ, ಕೋವಿಡ್ -19 ವ್ಯಾಕ್ಸಿನೇಷನ್‌ನ ಹೊಸ ಅಭಿಯಾನ ಜೂನ್ 21 ರಿಂದ ಪ್ರಾರಂಭವಾಗಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲಾಗುವುದು. ವ್ಯಾಕ್ಸಿನೇಷನ್ ಡ್ರೈವ್‌ ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ -19 ಲಸಿಕೆಗಳನ್ನು ನೀಡಲಿದ್ದು, ಲಸಿಕೆ ನೀತಿಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ, ರಾಜ್ಯಗಳು ಲಸಿಕೆ ಉತ್ಪಾದಕರಿಂದ ಲಸಿಕೆಗಳನ್ನು ಸಂಗ್ರಹಿಸಬೇಕಾಗಿಲ್ಲ. ಕೇಂದ್ರವು ಶೇಕಡ 75 ರಷ್ಟು ಲಸಿಕೆಗಳನ್ನು ಖರೀದಿಸಿ

ಜೂ.21ರಿಂದ ವ್ಯಾಕ್ಸಿನೇಷನ್‌ ಹೊಸ ಅಭಿಯಾನ, ಪ್ರತಿಯೊಬ್ಬರಿಗೂ ಸಿಗುತ್ತೆ ಉಚಿತ ವ್ಯಾಕ್ಸಿನ್ Read More »

ಮಾದಕ ಚೆಲುವೆಯ ಸೆಕ್ಸಿ ಶೋ | ಪಂದ್ಯವನ್ನೇ ಮರೆತ ಕ್ಯಾಮರಾಮ್ಯಾನ್ |ಹಾಡುಗಾರನಾದ ಕಮೆಂಟೇಟರ್

ಇತ್ತೆಚಿನ ದಿನಗಳಲ್ಲಿ ಪ್ರಮುಖ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಸುಂದರಿಯರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಫುಟ್ಬಾಲ್ ಪಂದ್ಯ, ಕ್ರಿಕೆಟ್ ಪಂದ್ಯಗಳ ವೇಳೆ ಕ್ಯಾಮರಾ ಮ್ಯಾನ್ ಕಣ್ಣಿಗೆ ಸುಂದರಿಯರು ಬಿದ್ದರೆ ಆದಿನ ಪಡ್ಡೆ ಹುಡುಗರಿಗೆ ಹಬ್ಬವಾಗುತ್ತದೆ. ಈ ಹಿಂದೆ ಹಲವಾರು ಸುಂದರಿಯರು ಕ್ರೀಡಾಂಗಣದ ಕ್ಯಾಮರಾ ಮ್ಯಾನ್ ಕಣ್ಣಿಗೆ ಬಿದ್ದು ಪಂದ್ಯ ನೋಡುತ್ತಿದ್ದ ಕ್ರೀಡಾಭಿಮಾನಿಗಳು ಪಂದ್ಯವನ್ನೇ ಮರೆಯುವಂತೆ ಮಾಡಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳಾಗಿ ಮೆರೆದ್ದಾರೆ. ಐಪಿಎಲ್ ನ ಇತ್ತೀಚಿನ ಸೀಸನ್ ಗಳಲ್ಲಿ ಒಬ್ಬೊಬ್ಬ ಚೆಲುವೆಯರು ಕಾಣಿಸಿಕೊಂಡು ಯುವಕರ ಕ್ರಶ್ ಗಳಾಗಿದ್ದಾರೆ. ಅರೇಬಿಯನ್ ದೇಶದಲ್ಲಿ ನಡೆದ

ಮಾದಕ ಚೆಲುವೆಯ ಸೆಕ್ಸಿ ಶೋ | ಪಂದ್ಯವನ್ನೇ ಮರೆತ ಕ್ಯಾಮರಾಮ್ಯಾನ್ |ಹಾಡುಗಾರನಾದ ಕಮೆಂಟೇಟರ್ Read More »

ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿಗೆ ಭಾಜನರಾದ ಶೈಲಜಾ ಟೀಚರ್

ತಿರುವನಂತಪುರ: ಭಾರತಕ್ಕೆ ಕೋವಿಡ್ ಕಾಲಿಟ್ಟ ಆರಂಭದಲ್ಲಿ ಉತ್ತಮ ರೀತಿಯ ನಿರ್ವಹಣೆ ತೋರಿದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಅವರಿಗೆ ಪ್ರತಿಷ್ಠಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿ, ಓಪನ್ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಿದೆ. ಸಾರ್ವಜನಿಕ ಆರೋಗ್ಯ ಸೇವೆಗಳ ಬದ್ಧತೆಯನ್ನು ಗುರುತಿಸಿ ಸಿಇಯು ಕೊಡಮಾಡುವ ಈ ಪ್ರಶಸ್ತಿಗೆ ಶೈಲಜಾ ಅರ್ಹವಾಗಿಯೇ ಭಾಜನರಾಗಿದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆದ 30 ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಕ್ತ ಸಮಾಜದ ಆದರ್ಶಗಳನ್ನು ಪೂರೈಸುವ ಅಸಾಧಾರಣ ಭಿನ್ನತೆಯ ವ್ಯಕ್ತಿಗಳಿಗೆ ವರ್ಷಂಪ್ರತಿ ನೀಡಲಾಗುವ

ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿಗೆ ಭಾಜನರಾದ ಶೈಲಜಾ ಟೀಚರ್ Read More »

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ. ಸೂಲಿಬೆಲೆ ಅವರು, ತನ್ನ ಫೇಸ್ಬುಕ್ ಪೇಜ್ ನಲ್ಲಿ, ‘ದುರದೃಷ್ಟವೇನು ಗೊತ್ತೇ ? ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು . ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು Read More »

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು ಉಪ್ಪಿನಂಗಡಿ : ಇಲಿ ವಿಷ ತಿಂದು 2ವರ್ಷದ ಮಗು ಮೃತಪಟ್ಟಿರುವ ಘಟನೆ ನೆಲ್ಯಾಡಿಯ ಬಜತ್ತೂರಿನಲ್ಲಿ ನಡೆದಿದೆ. ಬಜತ್ತೂರಿನ ಕೆಮ್ಮಾರದ ನಿವೃತ್ತ ಸೈನಿಕ ಸೈಜು ಎಂಬವರು ಪುತ್ರಿ ಶ್ರೇಯಾ (2) ಮೃತಪಟ್ಟ ಮಗು. ಶ್ರೇಯಾ ತಂದೆ-ತಾಯಿ ಮನೆಯಲ್ಲಿ ಹಳೇ ವಸ್ತುಗಳನ್ನು ಕ್ಲೀನ್ ಮಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಶ್ರೇಯಾ ಇಲಿ ವಿಷ ತೆಗೆದು ತಿಂದಿದ್ದಾಳೆ. ಇದು ಪೋಷಕರ ಗಮನಕ್ಕೆ ಬರುವುದು ಕೊಂಚ ತಡವಾಗಿದ್ದು, ಮಗು ವಿಷ ತಿಂದಿರುವುದನ್ನು ತಿಳಿದ ತಕ್ಷಣ

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು Read More »

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್

ಸುಬ್ರಹ್ಮಣ್ಯ: ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನಿರ್ಬಂಧವಿದ್ದರೂ ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಭಕ್ತರನ್ನು ಗುಂಡ್ಯ ಚೆಕ್’ಪೋಸ್ಟ್ ನಿಂದಲೇ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಹೊಂದಿದವವರನ್ನು ಮಾತ್ರ ಜಿಲ್ಲೆಯ ಒಳಬರಲು ಬಿಡಲಾಗುತ್ತಿದೆ. ಶಿರಾಡಿ ಘಾಟ್ ಮೂಲಕ ಜಿಲ್ಲೆಯ ಧರ್ಮಸ್ಥಳ ಮತ್ತು ಸುಬ್ರಮಣ್ಯ ಪುಣ್ಯಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ತೀರ್ಥಯಾತ್ರೆ ಆಗಮಿಸಿದ್ದ ಬರೋಬ್ಬರಿ 69 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಕರೆಯಲಾಗುವುದಿಲ್ಲ. ಅಂತರ್ ಜಿಲ್ಲಾ ಗಡಿಗಳಲ್ಲಿ

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್ Read More »