ಮಂಗಳೂರು: ಕೇರಳದಲ್ಲಿ ಕೊರೊನಾ ಹಾವಳಿಯ ನಡುವೆ ನಿಫಾ ಆತಂಕವೂ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ.
ತೀವ್ರ ಮುನ್ನೆಚ್ಚರಿಕೆ ನಡುವೆಯೂ ಇದೀಗ ರಾಜ್ಯಕ್ಕೆ ನಿಫಾ ಕಾಲಿಟ್ಟಿರುವುದು ಆತಂಕ ಸೃಷ್ಟಿಸುವಂತೆ ಮಾಡಿದೆ.
ಇಂದು ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಲ್ಲಿ ಇದೀಗ ನಿಫಾ ವೈರಸ್ ನ ಲಕ್ಷಣಗಳು ಪತ್ತೆಯಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ. ಈತ ಜಿಲ್ಲಾ ಆರೋಗ್ಯ ಇಲಾಖೆಯ ವ್ಯಕ್ತಿಯಾಗಿದ್ದು, ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ರವಾನೆ ಮಾಡಲಾಗಿದೆ.
ಕೇರಳದಲ್ಲಿ ನಿಫಾಗೆ 12 ವರ್ಷದ ಬಾಲಕ ಬಲಿಯಾದ ಬಳಿಕ ಆತನ ಕುಟುಂಬದ 8 ಮಂದಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಆತಂಕ ಹೆಚ್ಚಾಗಿತ್ತು. ರಾಜ್ಯದಲ್ಲಿ ಗಡಿ ಬಾಗದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಅದಾಗ್ಯೂ ಯುವಕನಲ್ಲಿ ನಿಫಾ ಲಕ್ಷಣ ಕಂಡುಬಂದಿರೋದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತರ ಸ್ಯಾಂಪಲ್‌ನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ನಾವು ಜಾಗರೂಕರಾಗಿರಬೇಕು. ಆದರೆ ಭಯಪಡುವ ಅವಶ್ಯ ಇಲ್ಲ. ತೀವ್ರ ರೋಗ ಲಕ್ಷಣಗಳು ಅವರಲ್ಲಿ ಕಾಣಿಸಿಲ್ಲ ಎಂದು ತ್ರಿಲೋಕ್ ಚಂದ್ರ ಹೇಳಿದ್ದಾರೆ.