Ad Widget .

ವೈದ್ಯಕೀಯ ರಂಗದಲ್ಲಿ ಮಹತ್ಸಾಧನೆ ಮೆರೆದ ರಷ್ಯಾ|ಮಹಾಮಾರಿ ಕ್ಯಾನ್ಸರ್​ ಗೆ ಲಸಿಕೆ ಸಿದ್ಧ

ಸಮಗ್ರ ನ್ಯೂಸ್: ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ಅದನ್ನು ತನ್ನ ನಾಗರಿಕರಿಗೆ ಉಚಿತವಾಗಿ ನೀಡಲಿದೆ ಎಂದು ರಷ್ಯಾ ಹೇಳಿದೆ.

Ad Widget .

ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಆಂಡ್ರೆ ಕಪ್ರಿನ್ ಮಾತನಾಡಿ, ಲಸಿಕೆ ವಿತರಣೆಯನ್ನು 2025ರ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಈ ಲಸಿಕೆ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಇರುತ್ತದೆ. ಗಡ್ಡೆಯ ರಚನೆಯನ್ನು ತಡೆಯಲು ಇದನ್ನು ಬಳಸಲಾಗುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕ್ಯಾನ್ಸರ್ ಲಸಿಕೆಗಳಂತೆಯೇ ಪ್ರತಿ ಶಾಟ್ ಅನ್ನು ಪ್ರತಿ ರೋಗಿಗೆ ಅನುಗುಣವಾಗಿ ಮಾಡಲಾಗುತ್ತದೆ ಎಂದು ರಷ್ಯಾದ ವಿಜ್ಞಾನಿಗಳು ಹೇಳಿದ್ದಾರೆ. ಈ ಕುರಿತು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

Ad Widget . Ad Widget .

ಆದಾಗ್ಯೂ, ಈ ಲಸಿಕೆ ಯಾವ ರೀತಿಯ ಕ್ಯಾನ್ಸರ್​ಗೆ ಚಿಕಿತ್ಸೆ ನೀಡುತ್ತದೆ, ಅದು ಎಷ್ಟು ಪರಿಣಾಮಕಾರಿಯಾಗಿದೆ ಅಥವಾ ರಷ್ಯಾ ಅದನ್ನು ಹೇಗೆ ಕಾರ್ಯಗತಗೊಳಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೇ ಸಮಯದಲ್ಲಿ, ಲಸಿಕೆ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಪ್ರಪಂಚದ ಇತರ ಭಾಗಗಳಂತೆ, ರಷ್ಯಾದಲ್ಲಿಯೂ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. 2022 ರಲ್ಲಿ 635,000 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಪ್ರಕರಣಗಳು ದಾಖಲಾಗಿವೆ. ಕೊಲೊನ್, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್​ಗಳು ರಷ್ಯಾದಲ್ಲಿ ಹೆಚ್ಚು ಸಾಮಾನ್ಯವೆಂದು ಹೇಳಲಾಗುತ್ತದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, ದೇಶದ ವಿಜ್ಞಾನಿಗಳು ಕ್ಯಾನ್ಸರ್​ ಲಸಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅದು ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದರು. ನಾವು ಕ್ಯಾನ್ಸರ್ ಲಸಿಕೆಗಳು ಹಾಗೂ ಹೊಸ ಪೀಳಿಗೆಯ ಇಮ್ಯುನೊಮಾಡ್ಯುಲೇಟರಿ ಔಷಧಗಳ ರಚನೆಗೆ ಬಹಳ ಹತ್ತಿರವಾಗುತ್ತಿದ್ದೇವೆ ಎಂದು ಹೇಳಿದ್ದರು.

Leave a Comment

Your email address will not be published. Required fields are marked *