ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದ ಚಡ್ಡಿಗ್ಯಾಂಗ್ ಮೇಲೆ ಪೊಲೀಸರಿಂದ ಶೂಟ್ ಔಟ್ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ನಗರದ ಹೊರವಲಯದ ಪಡುಪಣಂಬೂರು ಎಂಬಲ್ಲಿ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆಗೈದು ದರೋಡೆಕೋರರು ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ದರೋಡೆ ಆರೋಪಿಗಳನ್ನು ನಿನ್ನೆ ಸಕಲೇಶಪುರದಿಂದ ಬಂಧಿಸಿ ತರಲಾಗಿತ್ತು. ಬುಧವಾರ ಬೆಳಗ್ಗೆ ಸ್ಥಳ ಮಹಜರು ವೇಳೆ ಎಎಸ್ ಐ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ದರೋಡೆಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಗುಂಡು ಹಾರಿಸಿದ ಪರಿಣಾಮ ಇಬ್ಬರು ದರೋಡೆಕೋರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಪೊಲೀಸರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬಂಧಿತರನ್ನು ಮಧ್ಯಪ್ರದೇಶ ಮೂಲದ ರಾಜು ಸಿಂಘಾನಿಯಾ(24), ಮಯೂರ್(30), ಬಾಲಿ(22), ಮತ್ತು ವಿಕ್ಕಿ(21) ಎಂದು ಗುರುತಿಸಲಾಗಿದೆ.
ದಿನಾಂಕ 9/07/2024 ಬೆಳಗಿನ ಜಾವ ಚಡ್ಡಿಗ್ಯಾಂಗ್ ದರೋಡೆಕೋರರು ಮಂಗಳೂರಿನ ಒಂದು ಮನೆಯಲ್ಲಿ ದರೋಡೆ ಮಾಡಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮಂಗಳೂರಿನ ಅಂತಾರಾಜ್ಯ ಚಡ್ಡಿಗ್ಯಾಂಗ್ ನವರನ್ನು ಬಂಧಿಸಲು ನಿಖರ ಮಾಹಿತಿ ನೀಡಿದ KSRTC ಮಂಗಳೂರು 3 ನೇ ಘಟಕದ ಸಿಬ್ಬಂದಿಗಳಾದ ಚಾಲಕ ಬಸವರಾಜ್ ಅಳ್ಳ ಪ್ಪ ಬಿಲ್ಲೆ 652 ಹಾಗೂ ಚಾಲಕ / ನಿರ್ವಾಹಕ ಹನುಮಂತ ಅಟಗಲ್ಲು ಬಿಲ್ಲೆ 3746 ಹಾಗೂ ಖಾಸಾಗಿ ಚಾಲಕರಾದ W 124 ಮಹೇಶ್ ಹಾಗೂ ನಿರ್ವಾಹಕರಾದ ಸೀನಪ್ಪ ಬಿಲ್ಲೆ 4358 ಇವರಿಗೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದ್ದಾರೆ.
ಚಡ್ಡಿ ಗ್ಯಾಂಗ್ ನಾಲ್ವರು ಮನೆಯವರ ಕಾರಿನಲ್ಲಿ ಮೂಲ್ಕಿ ತೆರಳಿದ್ದು ಆಮೇಲೆ ksrtc ಬಸ್ಸು ಹತ್ತಿದಾರೆ ಎಂಬ ಮಾಹಿತಿ ಅನ್ವಯ ಪೊಲೀಸರು KSRTC ಮಂಗಳೂರು 3 ನೇ ಘಟಕಕ್ಕೆ ಬಂದು ವಿಚಾರಿಸಿ ವಿಡಿಯೋ ತೋರಿಸಿದಾಗ ಮೇಲೆ ತಿಳಿಸಿದ ಚಾಲಕ ಬಸವರಾಜ್ ಬಸ್ಸಿನ ವಿಡಿಯೋ ನೋಡಿ ಇದು ನಮ್ಮ ಘಟಕದ ಕಬ್ಬರಗಿ ಮಂಗಳೂರ್ ಸಾರಿಗೆ ಬಸ್ಸು ಎಂದು ತಿಳಿಸಿರುತ್ತಾರೆ. ಆ ಬಸ್ಸಿನ ಚಾಲಕ / ನಿರ್ವಾಕರಾದ ಹನುಮಂತ ಅಟಗಲ್ಲು ಅವರನ್ನು ವಿಚಾರಿಸಿದಾಗ ಹೌದ್ ಅವರು 4 ಜನ ಅಪರಿಚಿತರು ಮೂಲ್ಕಿ ಬಸ್ಟ್ಯಾಂಡ್ ನಲ್ಲಿ ನಮ್ಮ ಬಸ್ಸು ಹತ್ತಿದ್ದು, ಆಮೇಲೆ ಮಂಗಳೂರಿನಲ್ಲಿ ಇಳಿದು ನಮ್ಮದೇ ಅಂದರೆ ಮಂಗಳೂರು 3 ನೇ ಘಟಕದ ಬೆಳಿಗ್ಗೆ 5.30 ಹೊರಡುವ ಮಂಗಳೂರು ಬೆಂಗಳೂರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಿರುತ್ತಾರೆ ಎಂದು ನಿಖರ ಮಾಹಿತಿ ನೀಡಿರುತ್ತಾರೆ. ತದನಂತರ ಪೊಲೀಸರು ಬೆಂಗಳೂರು ಚಾಲಕರ ಮತ್ತು ನಿರ್ವಾಕರಿಗೆ ವಿಚಾರಿಸಿದಾಗ ಕಳ್ಳರ ಇರುವಿಕೆ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆ ಮಾಹಿತಿ ಪಡೆದು ಸಕ್ಲೇಶಪುರ ಪೊಲೀಸರು ಈ ಚಡ್ಡಿಗ್ಯಾಂಗ್ ದರೋಡೆ ಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.