Ad Widget .

ಪುತ್ತೂರು: ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾ

ಸಮಗ್ರ ನ್ಯೂಸ್‌ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲು ಹೆಚ್ಚಾಗಿದೆ. ಇಂದು ನಗರದ ತೆಂಕಿಲದ ವಿವೇಕಾನಂದ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ಕಾರ್ಯಾಚರಿಸುತ್ತಿದೆ. ಇದೀಗ ಮಸ್ಟರಿಂಗ್ ಕೇಂದ್ರದಿಂದ ತಮ್ಮ ತಮ್ಮ ಮತಗಟ್ಟೆಗಳಿಗೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳು ತೆರಳಿದ್ದಾರೆ. ಇನ್ನು ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬಿಸಿಲಿನ ಝಳವನ್ನು ತಪ್ಪಿಸಲು ಮತದಾನದ ಪರಿಕರಗಳನ್ನೇ ತಡೆಯಾಗಿ ಸಿಬ್ಬಂದಿಗಳು ಬಳಸಿಕೊಂಡದ್ದು ಕಂಡು ಬಂತು. ಕೆಲವರು ಇವಿ ಪ್ಯಾಟ್ ಪೆಟ್ಟಿಗೆಯನ್ನು ತಲೆಯಲ್ಲಿಟ್ಟು ಬಿಸಿಲಿನ ಪ್ರಕರತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮತಯಂತ್ರ ಮರೆಯಾಗಿ ಇಡುವ ರಟ್ಟನ್ನು ತಲೆ‌ಮೇಲೆ ಇಟ್ಟುಕೊಂಡಿದ್ದಾರೆ.

Ad Widget . Ad Widget . Ad Widget .

ಇನ್ನು ಪುತ್ತೂರು ತಾಲೂಕಿನಲ್ಲಿ ಒಟ್ಟು 221 ಮತಕೇಂದ್ರ ಸ್ಥಾಪಿತವಾಗಿದೆ. ಸುಮಾರು 1500 ಕ್ಕೂ ಮಿಕ್ಕಿದ ಸಿಬ್ಬಂದಿಗಳ ನೇಮಕವಾಗಿದೆ. ಪುತ್ತೂರಿನಲ್ಲಿ ಒಟ್ಟು 9 ಮಾದರಿ ಮತಗಟ್ಟೆಗಳ ಸ್ಥಾಪನೆಯಾಗಿದೆ. 6 ಸಖೀ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಂದ ಮತ ಕೇಂದ್ರದ ನಿರ್ವಹಣೆ ಮಾಡಲಾಗ್ತಿದೆ. ಸಖೀ ಮತಕೇಂದ್ರದ ಸಿಬ್ಬಂದಿಗಳಿಗೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹೋಪಾತ್ರ ಪಿಂಕ್ ಸಾರಿ ವಿತರಿಸಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.

Leave a Comment

Your email address will not be published. Required fields are marked *