Ad Widget .

ಸಂವಿಧಾನ ಪುನರ್ ರಚನೆಯಾಗಬೇಕು : ಸಂಸದ ಅನಂತ್ ಕುಮಾರ್ ಹೆಗಡೆ

ಸಮಗ್ರ ನ್ಯೂಸ್ :ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಈಗ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಭಾರತೀಯ ಸಂವಿಧಾನದ ಬಹುತೇಕ ಭಾಗವನ್ನು ಪುನಃ ಬರೆಯುವ ಅವಶ್ಯಕತೆಯಿದೆ ಎಂದು ಹೇಳುವ ಹೊಸದೊಂದು ವಿವಾದವನ್ನು ಮೈಮೇಲೆ ಹೇಳಿದುಕೊಂಡಿದ್ದಾರೆ.

Ad Widget . Ad Widget . Ad Widget .

ಈ ಹಿಂದೆ ಕಾಂಗ್ರೆಸ್ ನಾಯಕರು ಹಿಂದೂ ಧರ್ಮವನ್ನು ಕೆಳಮಟ್ಟಕ್ಕಿಳಿಸಲು ಸಂವಿಧಾನದಲ್ಲಿ ಅನೇಕ ತಿದ್ದುಪಡಿ ಮಾಡಿದ್ದಾರೆ ಆದ್ದರಿಂದ ಸಂವಿಧಾನವನ್ನು ಪುನಃ ಬರೆಯಬೇಕೆಂದು ತಿಳಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಇದನ್ನು ಸಾಧಿಸಬೇಕೆಂದರೆ ಬಿಜೆಪಿ 400 ಲೋಕಸಭಾ ಸ್ಥಾನಗಳನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

ಉತ್ತರ ಕನ್ನಡದಿಂದ ಹಾಲಿ ಸಂಸದರಾಗಿರುವ ಹೆಗ್ಡೆ ಅವರು, “ನೀವೆಲ್ಲರೂ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಬೇಕು. ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಏಕೆ ಬೇಕು? ಎಂದು ನೀವು ಕೇಳುವುದಾದರೆ ಈ ಹಿಂದೆ ಕಾಂಗ್ರೆಸ್ ನಾಯಕರು ಸಂವಿಧಾನದಲ್ಲಿ ತಮ್ಮ ಮನಸ್ಸೋ ಇಚ್ಛೆ ಬದಲಾವಣೆಗಳನ್ನು ಮಾಡಿದರು ಮತ್ತು ಅದು ಹಿಂದೂ ಧರ್ಮವನ್ನು ಮುಂದಿಡದ ರೀತಿಯಲ್ಲಿ ಅದನ್ನು ಮಾಡಿದರು. ನಾವು ಈಗ ಅದನ್ನು ಬದಲಾಯಿಸಬೇಕು ಮತ್ತು ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು. ನಾವು ಈಗಾಗಲೇ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದ್ದೇವೆ ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡಲು ರಾಜ್ಯಸಭೆಯಲ್ಲಿ ನಮ್ಮ ಬಳಿ ಬಹುಮತವಿಲ್ಲ. ಅದೇ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಹೊಂದಿದರೆ ಅದನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತವೆ “ಎಂದು ಹೇಳಿದರು.

ರಾಜ್ಯದಲ್ಲಿ ಕೂಡ ಬಿಜೆಪಿಯು ಮೂರನೇ ಎರಡರಷ್ಟು ಬಹುಮತವನ್ನು ಪಡೆಯಬೇಕು ಎಂದು ಹೆಗ್ಡೆ ಹೇಳಿದರು. ಲೋಕಸಭೆಯಲ್ಲಿ, ರಾಜ್ಯಸಭೆಯಲ್ಲಿ ಮತ್ತು ರಾಜ್ಯದಲ್ಲೂ ನಮಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ಮೂಲಕ ಸಂವಿಧಾನವನ್ನು ಪುನಃ ಬರೆಯುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಮತ್ತು ಹಿಂದೂ ಧರ್ಮವನ್ನು ಮುಂಚೂಣಿಯಲ್ಲಿಡಲು ನಮಗೆ ಸಹಾಯ ಮಾಡುತ್ತದೆ “ಎಂದು ಅವರು ಹೇಳಿದರು.

ನಮ್ಮ ಭಾರತೀಯ ಸಂವಿಧಾನವು ಎಷ್ಟು ಶ್ರೇಷ್ಠವಾಗಿದೆ ಎಂಬುದರ ಬಗ್ಗೆ ಜನರು ತಿಳಿದಿರಬೇಕು ಮತ್ತು ಈ ಅಭಿಯಾನವು ಅದರ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ “ಎಂದರು.

Leave a Comment

Your email address will not be published. Required fields are marked *