Ad Widget .

ಸ್ಕೂಟರ್ ಖರೀದಿಸಲು ಯೋಚಿಸ್ತಾ ಇದ್ದಿರಾ?| ಹಾಗಾದ್ರೆ ಇಲ್ಲಿದೆ ಕಣ್ಣುಕುಕ್ಕುವ ವೈಶಿಷ್ಟ್ಯಗಳು!

ಸಮಗ್ರ ನ್ಯೂಸ್: ದಿನನಿತ್ಯದ ಬಳಕೆಗೆ ಬಹುತೇಕರು ಸ್ಕೂಟರ್‌ಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ, ಯಾವ ಮಾದರಿಯನ್ನು (ಮಾಡೆಲ್) ಕೊಂಡುಕೊಳ್ಳಬೇಕು, ಬೆಲೆ ಎಷ್ಟು, ವೈಶಿಷ್ಟ್ಯಗಳೇನು ಎಂಬ ಹಲವು ಗೊಂದಲವಿರುತ್ತದೆ. ರೂ.85,000 ಗಿಂತ ಕಡಿಮೆ ಬೆಲೆಗೆ ಸಿಗುವ ಹೋಂಡಾ ಆಕ್ಟಿವಾ 125, ಟಿವಿಎಸ್ ಜುಪಿಟರ್, ಹೀರೋ ಡೆಸ್ಟಿನಿ ಪ್ರೈಮ್ ಸ್ಕೂಟರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೊದಲಿಗೆ ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್, ರೂ.79,806 ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದರ 124 ಸಿಸಿ ಎಂಜಿನ್ 8.30 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 60 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.

Ad Widget . Ad Widget . Ad Widget .

ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್, ರೂಪಾಂತರಗಳಿಗೆ ಅನುಗುಣವಾಗಿ ಡ್ರಮ್ & ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಎಲ್‌ಇಡಿ ಹೆಡ್‌ಲೈಟ್, ಸೆಮಿ – ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ರೆಬೆಲ್ ರೆಡ್ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಜುಪಿಟರ್ (TVS Jupiter), ರೂ.73,340 – 89,748 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್, 109.7 ಸಿಸಿ ಎಂಜಿನ್ ಹೊಂದಿದ್ದು, 7.88 ಪಿಎಸ್ ಪವರ್, 8.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 50 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.

ಈ ಟಿವಿಎಸ್ ಜುಪಿಟರ್ ಸ್ಕೂಟರ್, ಎಲ್‌ಇಡಿ ಹೆಡ್‌ಲೈಟ್‌, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್, ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ ಡ್ರಮ್ ಮತ್ತು ಡಿಸ್ಕ್ (Disk) ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಹೀರೋ ಡೆಸ್ಟಿನಿ ಪ್ರೈಮ್ (Hero Destini Prime) ಸ್ಕೂಟರ್, ರೂ.71,499 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 124.6 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 9.09 ಪಿಎಸ್ ಗರಿಷ್ಠ ಪವರ್, 10.36 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 56 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ನೀವು ಕಡಿಮೆ ಬೆಲೆಗೆ ದೊರೆಯುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೆ ಹೋಂಡಾ ಆಕ್ಟಿವಾ 125, ಟಿವಿಎಸ್ ಜುಪಿಟರ್, ಹೀರೋ ಡೆಸ್ಟಿನಿ ಪ್ರೈಮ್ ಉತ್ತಮ ಆಯ್ಕೆಯಾಗಬಹುದು. ಈ 3 ಸ್ಕೂಟರ್‌ಗಳು ರೂ.85,000 ಗಿಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿವೆ. ಅದಕ್ಕೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಗರಿಷ್ಠ ಮೈಲೇಜ್ ನೀಡುತ್ತವೆ. ಇವುಗಳಲ್ಲಿ ಯಾವುದು ಉತ್ತಮವೆನಿಸುತ್ತದೆಯೋ ಆ ಸ್ಕೂಟರ್‌ನ್ನು ಆಯ್ಕೆ ಮಾಡಿಕೊಳ್ಳಿರಿ.

ವಿ.ಸೂ: ಇಲ್ಲಿ ಪ್ರಕಟವಾಗುವ ಸಲಹೆಗಳು ಗೂಗಲ್ ಮಾಹಿತಿಯಾಗಿರುತ್ತದೆ. ಸಂ.

Leave a Comment

Your email address will not be published. Required fields are marked *