ಸಮಗ್ರ ನ್ಯೂಸ್: ಸ್ಯಾಮ್‌ಸಂಗ್ (Samsung)ನ ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದೆ. ಆದರೆ, ಈಗ ಸದ್ದಿಲ್ಲದೆ ಬಹಳ ಜನಪ್ರಿಯತೆ ಪಡೆದಿದ್ದ ಫೋನ್ ಅನ್ನು ಹೊಸ ವೇರಿಯಂಟ್‌ನಲ್ಲಿ ಮಗದೊಮ್ಮೆ ಅನಾವರಣ ಮಾಡಿದೆ.
ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G (Samsung Galaxy A14 5G) ಫೋನ್‌ನ ಹೊಸ ವೇರಿಯಂಟ್ ಅನ್ನು ಸದ್ದಿಲ್ಲದೆ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಸಾಕಷ್ಟು ಸೇಲ್ ಆಗಿದ್ದು, ಈ ಕ್ಷಣಕ್ಕೂ ಸಹ ದೊಡ್ಡ ಮಟ್ಟದ ಬೇಡಿಕೆ ಇದೆ. ಇದರಿಂದಾಗಿಯೇ ಸ್ಯಾಮ್‌ಸಂಗ್ ಇನ್ನಷ್ಟು ಗ್ರಾಹಕರನ್ನು ತಲುಪುವ ಉದ್ದೇಶದಿಂದ ಹೊಸ ವೇರಿಯಂಟ್ ಅನ್ನು ಲಾಂಚ್ ಮಾಡಿದೆ. ಹಾಗಿದ್ರೆ, ಹೊಸ ಫೋನ್‌ನ ವಿಶೇಷತೆ ಏನು? ಬೆಲೆ ಎಷ್ಟು? ಅನ್ನೋ ಮಾಹಿತಿ ಇಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G :
ಈ ಸ್ಮಾರ್ಟ್‌ಫೋನ್ ಕಪ್ಪು, ಕೆಂಪು ಮತ್ತು ಹಸಿರು ಬಣ್ಣಗಳಲ್ಲಿ ಹೊಸದಾಗಿ ಅನಾವರಣಗೊಂಡಿದ್ದು, ಪ್ರಮುಖವಾಗಿ 4GB RAM ಮತ್ತು 128GB ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ಗೆ ಸ್ಯಾಮ್‌ಸಂಗ್ 15,499 ರೂ.ಗಳ ಬೆಲೆ ನಿಗದಿ ಮಾಡಿದೆ. ಈ ಮೊದಲು 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್ ಅನ್ನು 14,499 ರೂ.ಗಳ ಬೆಲೆಯಲ್ಲಿ ಅನಾವರಣ ಮಾಡಿತ್ತು.
ಜೊತೆಗೆ ಸ್ಯಾಮ್‌ಸಂಗ್‌ನ ಮತ್ತೊಂದು ಮಾದರಿಯಾದ 6GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಗೆ 16,999 ರೂ.ಗಳ ಬೆಲೆ ಇದ್ದು, 8GB RAM + 128GB ಇಂಟರ್ ಸ್ಟೋರೇಜ್ ಫೋನ್‌ಗೆ 18,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಈ ಫೋನ್ ಖರೀದಿಸಿದರೆ 1000 ರೂ. ರಿಯಾಯಿತಿ ಸಿಗುತ್ತದೆ. ಈ ಮೂಲಕ ಎಲ್ಲಾ ರೀತಿಯ ಬಳಕೆದಾರರು ಸಹ ಈ ಫೋನ್ ಅನ್ನು ಖರೀದಿ ಮಾಡುವಂತೆ ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ಅನ್ನು ಗಮನಿಸೋಣ.
ಹೊಸ ವೇರಿಯಂಟ್‌ನಲ್ಲಿ ಲಾಂಚ್ ಆದ ಈ ಸ್ಯಾಮ್‌ಸಂಗ್ ಫೋನ್! ವಿಶೇಷತೆ ಏನಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದ್ದು, ಇದು 1,080×2,40 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್ ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಪ್ರೊಸೆಸರ್ ವಿವರ :
ಈ ಫೋನ್ ಎಕ್ಸಿನೋಸ್ 1330 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಹೊಸ ಫೋನ್ OneUI 5.0 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ. ಇದರ ಜೊತೆಗೆ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣದ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಮಾಲಿ G68 MP2 ಗ್ರಾಫಿಕ್ಸ್ ಕಾರ್ಡ್ ಪಡೆದಿದ್ದು, ಎಲ್ಲಾ ರೀತಿಯ ಬಳಕೆಗೂ ಯೋಗ್ಯ ಎನಿಸಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಕ್ಯಾಮೆರಾ ರಚನೆ :
50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ + 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ + 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಇರುವ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರ ಹೊರತಾಗಿ, ಈ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಶ್ ಮತ್ತು ಅನೇಕ ಕ್ಯಾಮೆರಾ ಫೀಚರ್ಸ್ ಅನ್ನು ಪಡೆದಿದೆ.
ಹೊಸ ವೇರಿಯಂಟ್‌ನಲ್ಲಿ ಲಾಂಚ್ ಆದ ಈ ಸ್ಯಾಮ್‌ಸಂಗ್ ಫೋನ್! ವಿಶೇಷತೆ ಏನಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಬ್ಯಾಟರಿ ಹಾಗೂ ಇತರೆ:
5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನೀವು ದೀರ್ಘ ಬ್ಯಾಟರಿ ಬ್ಯಾಕಪ್ ಅನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಬ್ಯಾಟರಿ 15 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ 5G, ಡ್ಯುಯಲ್-ಬ್ಯಾಂಡ್ ವೈ ಫೈ 5, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.