ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಗೆ National Media Conclaveನ ಎರಡು ಪ್ರಶಸ್ತಿ ಹಾಗೂ World Marketing Congressನ Global Marketing Excellence ಒಂದು ಪ್ರಶಸ್ತಿ ಸೇರಿ ಮೂರು ಪ್ರಶಸ್ತಿಗಳು ಲಭಿಸಿವೆ.
ಈ ಕುರಿತಂತೆ ಮಾಹಿತಿ ನೀಡಿರುವ ನಿಗಮವು, ನ.23ರಂದು ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣ, ಭುವನೇಶ್ವರ್ National Media Conclave ರವರು, ಆಯೋಜಿಸಿದ 07 ನೇ National Media Conclave Award, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಅಮತ್, ಮಾಹಿತಿ ಸಾರ್ವಜನಿಕ ಸಂಪರ್ಕ, ಪಂಚಾಯತ್ ರಾಜ್, ಕುಡಿಯುವ ನೀರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರು, ಅತನು ಸವ್ಯಸಾಚಿ ನಾಯಕ್, ಮಾನ್ಯ ಉನ್ನತ ಶಿಕ್ಷಣ ಹಾಗೂ ಸಹಕಾರ ಸಚಿವರು, ರವರು ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ Best Communication Campaign by Public Sector Organisation & Best Public Sector Organisation Implementing PR ಪ್ರಶಸ್ತಿಗಳನ್ನು ನಿಗಮಕ್ಕೆ ಪ್ರದಾನ ಮಾಡಿದರು ಎಂದು ತಿಳಿದೆ.
ಬಿ. ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಪುತ್ತೂರು ವಿಭಾಗ ಹಾಗೂ ಎಂ. ಜಗದೀಶ್, ವಿಭಾಗೀಯ ನಿಯಂತ್ರಣಾಧಿಕಾರಿಗಳು, ರಾಮನಗರ ವಿಭಾಗ, ಕೆ ಎಸ್ ಆರ್ ಟಿ ಸಿ ರವರುಗಳು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದಿದೆ.