ಸಮಗ್ರ ನ್ಯೂಸ್: ಮೊಬೈಲ್ ಮೊಬೈಲ್ ಮೊಬೈಲ್. ಎಲ್ಲೆಲ್ಲೂ ಮೊಬೈಲ್. ಈಗಿನ ಕಾಲದಲ್ಲಿ ಯಾರತ್ರ ಮೊಬೈಲ್ ಇರೋಲ್ಲ ಹೇಳಿ? ಫೋನೇ ಜೀವ, ಫೋನಿಂದಲೇ ಬದುಕು ಎಂಬಂತೆ ಆಗಿದೆ ಪ್ರಪಂಚ. ತಂತ್ರಜ್ಞಾನದತ್ತ ಮುಖ ಮಾಡುತ್ತಿರುವ ಜಗತ್ತು ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನು ಆವರಿಸಿದೆ.
ಎಲ್ಲರೂ ಮೊಬೈಲ್ ಯೂಸ್ ಮಾಡುವ ಕಾಲವಾಗಿದೆ. ಇಂದು ನಿಮಗೆ ಮೊಬೈಲ್ ಯೂಸ್ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ. ನೀವು ಹೊರಗೆ ಹೋಗಬೇಕಾದರೆ ಮೊಬೈಲನ್ನ ಪ್ಯಾಂಟ್ ಒಳಗೆ ಇಟ್ಕೊಳ್ತೀರ ಅಲ್ವಾ? ಹಾಗಾದ್ರೆ ಮೊಬೈಲನ್ನು ಯಾವ ಸೈಡ್ ಇಟ್ಟುಕೊಳ್ಳಬೇಕು ಎಂಬುದಾಗಿ ಇವತ್ತು ತಿಳಿಸಿಕೊಡುತ್ತೇವೆ.
ಅನೇಕ ಅಧ್ಯಯನಗಳ ಪ್ರಕಾರ ಮೊಬೈಲ್ ಅನ್ನು ನೀವು ಪ್ಯಾಂಟಿನ ಯಾವ ಭಾಗದಲ್ಲಿ ಇಟ್ಟುಕೊಳ್ಳಬೇಕೆಂಬುದು ಎಂಬುದನ್ನು ತಿಳಿಸಲಾಗಿದೆ. ಇನ್ನು ಮುಂದೆ ಈ ಟಿಪ್ಸ್ ಫಾಲೋ ಮಾಡಿ.
ಮಹಿಳೆಯರು ಸಾಮಾನ್ಯವಾಗಿ ತಮ್ಮ ಫೋನ್ ಅನ್ನು ಪರ್ಸ್ ಅಥವಾ ವ್ಯಾನಂಟಿ ಬ್ಯಾಗ್ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ, ಪುರುಷರು ಹೆಚ್ಚಾಗಿ ತಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿ ಪುರುಷರಿಗೆ ಅಪಾಯವು ಹೆಚ್ಚಾಗುತ್ತದೆ.
ಪುರುಷರು ಮನೆಯಲ್ಲಿದ್ದಾಗ ತಮ್ಮ ಫೋನ್‌ಗಳನ್ನು ಬೇರೆ ಕಡೆಯಲ್ಲಿ ಇಡುತ್ತಾರೆ. ಸಾಮಾನ್ಯವಾಗಿ ತಮ್ಮ ಶರ್ಟ್ ಜೇಬಿಗಿಂತ ಪ್ಯಾಂಟ್ನಲ್ಲೇ ಇಟ್ಟುಕೊಳ್ಳುತ್ತಾರೆ. ಆದರೆ, ಫೋನ್ ಅನ್ನು ಪ್ಯಾಂಟ್‌ನ ಯಾವ ಬದಿಯಲ್ಲಿ ಇಡಬೇಕೆಂದು ಕೆಲವೇ ಜನರಿಗೆ ಗೊತ್ತು. ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಇದು ನಿಮ್ಮನ್ನು ತೀವ್ರವಾಗಿ ಅಸ್ವಸ್ಥಗೊಳಿಸಬಹುದು.
ಫೋನ್ ಅನ್ನು ವೈರ್‌ಲೆಸ್ ನೆಟ್‌ವರ್ಕ್‌ಗೆ ಸಂಪರ್ಕಿಸಿದಾಗ, ಅದು ವಿಕಿರಣವನ್ನು ಹೊರಸೂಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಜೇಬಿನಲ್ಲಿ ಇಟ್ಟಾಗ, ಅದರಿಂದ ಬರುವ ರೇಡಿಯೇಷನ್ ದೇಹವನ್ನು ಒಡ್ಡಿಕೊಳ್ಳುವ ಅಪಾಯವು ಹೆಚ್ಚಾಗುತ್ತದೆ. ಫೋನ್ ಬಹುತೇಕ ಎಲ್ಲಾ ಸಮಯದಲ್ಲೂ ಜೇಬಿನಲ್ಲಿರುವುದರಿಂದ, ಇದು ಪುರುಷರನ್ನು ದುರ್ಬಲಗೊಳಿಸುತ್ತದೆ. ಇದು ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ.
ಫೋನ್ ಇಡಲು ಯಾವ ಪಾಕೆಟ್ ಸರಿಯಾದ ಸ್ಥಳ ಎಂದು ತಿಳಿದುಕೊಳ್ಳುವ ಮೂಲಕ, ನೀವು ಅಪಾಯವನ್ನು ಕಡಿಮೆ ಮಾಡಬಹುದು. ಸೂಕ್ಷ್ಮ ಅಂಗಗಳ ಬಳಿ ಫೋನ್ ಅನ್ನು ಪಾಕೆಟ್ಸ್ನಲ್ಲಿ ಇಡಬೇಡಿ. ಆದಷ್ಟು ಮುಂದಿನ ಜೇಬಿನಲ್ಲಿ ಮೊಬೈಲ್ ಇಡದಿದ್ದರೆ ಒಳ್ಳೆಯದು. ಪ್ಯಾಂಟ್‌ನ ಹಿಂಭಾಗದಲ್ಲಿ ಮೊಬೈಲ್ ಇಟ್ಟರೆ ಒಳ್ಳೆಯದು.
ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವಾಗ ಫೋನ್‌ನ ಹಿಂಭಾಗವು ಮೇಲಕ್ಕೆ ಎದುರಾಗಿರಬೇಕು ಎಂಬುದನ್ನು ನೆನಪಿಡಿ. ಇದರಿಂದ ಫೋನ್‌ನಿಂದ ಹೊರಸೂಸುವ ವಿಕಿರಣವು ದೇಹಕ್ಕೆ ಹಾನಿಯನ್ನು ಮಾಡುವುದಿಲ್ಲ.
ಎಲ್ಲಾ ಕಾರಣಗಳಿಂದ ಮೊಬೈಲನ್ನು ಆದಷ್ಟು ನಿಮ್ಮ ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಕಳ್ಳರ ಕಾಟ ಹೆಚ್ಚಾಗಿದೆ ಇದರ ಜಾಗೃತಿಯೊಂದಿಗೆ ನೀವು ಮೊಬೈಲನ್ನ ಪಾಕೆಟ್ ನಲ್ಲಿ ಇಟ್ಟುಕೊಳ್ಳಿ.