ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಮೂಲಕ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಅದಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಮಹತ್ವದ ಅಪ್ಡೇಟ್ವೊಂದು ಹೊರಬಿದ್ದಿದೆ.
ಚಂದ್ರಯಾನ-3 ಮಿಷನ್ನ ರೋವರ್ನ ಅಸೈನ್ಮೆಂಟ್ಗಳು ಮುಗಿದಿದ್ದು, ಅದೀಗ ಸುರಕ್ಷಿತವಾಗಿ ನಿಲುಗಡೆ ಹೊಂದಿದ್ದು, ಸ್ಲೀಪ್ ಮೋಡ್ನಲ್ಲಿ ಇದೆ. ಎಪಿಎಕ್ಸ್ಎಸ್ ಮತ್ತು ಎಲ್ಐಬಿಎಸ್ ಪೇಲೋಡ್ಗಳು ಕೂಡ ಟರ್ನ್ ಆಫ್ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಡರ್ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ.
ಸದ್ಯ ಬ್ಯಾಟರಿ ಫುಲ್ ಚಾರ್ಜ್ ಆಗಿದ್ದು, ಸೆ.22ರಂದು ಆಗಲಿರುವ ನಿರೀಕ್ಷಿತ ಸೂರ್ಯೋದಯದ ಬೆಳಕನ್ನು ಗ್ರಹಿಸುವ ನಿಟ್ಟಿನಲ್ಲಿ ಸೋಲಾರ್ ಪ್ಯಾನೆಲ್ ಅಣಿಗೊಳಿಸಲಾಗಿದೆ. ಆ ಸಂಬಂಧ ರಿಸೀವರ್ ಕೂಡ ಆನ್ ಆಗಿದೆ. ಆ ಬಳಿಕ ರೋವರ್ನ ಇನ್ನೊಂದು ಸೆಟ್ ಅಸೈನ್ಮೆಂಟ್ಗಳು ಜಾಗೃತಗೊಳ್ಳುವ ಭರವಸೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಚಂದ್ರನಲ್ಲಿನ ಭಾರತದ ರಾಯಭಾರಿ ಆಗಿ ಅದು ಅಲ್ಲೇ ಇರಲಿದೆ ಎಂದು ಇಸ್ರೋ ತಿಳಿಸಿದೆ.