ಸಮಗ್ರ ನ್ಯೂಸ್: ಚಂದ್ರಯಾನ-3ರ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ತನ್ನ ವೈಜ್ಞಾನಿಕ ಸಂಶೋದನೆ ಮುಂದುವರೆಸಿದ್ದು ಇದೀಗ ರೋವರ್‌ನ ಮತ್ತೊಂದು ಡಿವೈಸ್ ಚಂದ್ರನ ಮೇಲ್ಲೈನಲ್ಲಿ ಸಲ್ಫರ್ ಇರೋದನ್ನ ಕನ್ಫರ್ಮ್ ಮಾಡಿದೆ. ರೋವರ್‌ನಲ್ಲಿರುವ Alpha Particle X-ray Spectroscope (APXS) ಸಲ್ಫರ್ ಇರುವಿಕೆ ಹಾಗೂ ಇನ್ನಿತರ ಮೈನರ್ ಪಾರ್ಟಿಕಲ್‌ಗಳನ್ನ ಪತ್ತೆಮಾಡಿದೆ ಅಂತ ಇಸ್ರೋ ಹೇಳಿದೆ.
ಜೊತೆಗೆ ಚಂದ್ರನ ಮೇಲೆ ಸುರಕ್ಷಿತ ಜಾಗಕ್ಕಾಗಿ, ರೋವರ್ ಗಿರ ಗಿರ ಅಂತ ತಿರುಗುತ್ತಾ ಇರೋ ವಿಡಿಯೋ ಒಂದನ್ನ ಇಸ್ರೋ ಶೇರ್ ಮಾಡಿದೆ. ಈ ತಿರುಗುವಿಕೆಯನ್ನು ಲ್ಯಾಂಡರ್ ಇಮೇಜರ್ ಕ್ಯಾಮೆರಾ ಸೆರೆಹಿಡಿದಿದೆ.
ಈ ವಿಡಿಯೋವನ್ನ ತಾಯಿ ಮಗುವಿನ ಸಂಬಂಧಕ್ಕೆ ಹೋಲಿಸಿರುವ ಇಸ್ರೋ, ಚಂದಮಾಮನ ಅಂಗಳದಲ್ಲಿ ಮಗುವೊಂದು ಸಂತೋಷದಿಂದ ಆಡುತ್ತಿರುವುದನ್ನ ಮಮತೆಯಿಂದ ಅಮ್ಮ ನೋಡ್ತಿರೋ ರೀತಿ ಅನಿಸುತ್ತಿದೆ ಅಂತ ಭಾವುಕ ಪೋಸ್ಟ್ ಹಾಕಿದೆ. ಇತ್ತ ಪ್ರಗ್ಯಾನ್ ರೋವರ್‌ನಲ್ಲಿರುವ ಎರಡು ನ್ಯಾವಿಗೇಷನ್ ಕ್ಯಾಮರಾಗಳು ಕೇವಲ 125 ಗ್ರಾಮ್ ಇವೆ ಅಂತಲೂ ಮಾಹಿತಿ ಗೊತ್ತಾಗಿದೆ.