ಸಮಗ್ರ ನ್ಯೂಸ್: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ 9 ನೇ ಶಾಖೆ ಬೆಳ್ಳಾರೆಯಲ್ಲಿ ಉದ್ಘಾಟನೆಗೊಂಡಿದೆ. ಪರಸ್ಪರ ಸಹಕಾರ, ಪ್ರೀತಿ, ಶ್ರದ್ಧೆಯನ್ನು ಇಟ್ಟುಕೊಂಡಿರುವ ಸಹಕಾರಿ ಸಂಸ್ಥೆ ಆರ್ಥಿಕವಾಗಿ ಮುನ್ನಡೆಯುತ್ತದೆ. ಜ್ಞಾನ ಶಕ್ತಿ ಇಚ್ಛಾಶಕ್ತಿ ಕ್ರಿಯಾಶಕ್ತಿಗಳು ಅಂತರ್ಯದಲ್ಲಿ ಬೆಳೆಯಬೇಕು. ಪ್ರೀತಿ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘದ ಅಭಿವೃದ್ಧಿ ಸಾಧ್ಯ. ಬ್ರಿಟಿಷರ ಖಜಾನೆಯೂ ಬೆಳ್ಳಾರೆಯಲ್ಲಿತ್ತು ಎಂದು ಹೇಳಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟವನ್ನು ನೆನಪಿಸಿಕೊಂಡರು.
ಸಹಕಾರಿ ಸಂಘದ ಜೊತೆ ಆಧ್ಯಾತ್ಮಿಕ ಕೇಂದ್ರವನ್ನು ಕೂಡ ಸ್ಥಾಪಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಸ್ವಾಮೀಜಿ ಹೇಳಿದರು.
ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2022 ರಲ್ಲಿ 20 ಮಂದಿ ಸಮಾನ ಮನಸ್ಕರ ತಂಡದಿಂದ ಸಂಘವು ಪ್ರಾರಂಭವಾಗಿತ್ತು. 4 ಲಕ್ಷ ಬಂಡವಾಳದಿಂದ ಪ್ರಾರಂಭಗೊಂಡ ಸಹಕಾರಿ ಸಂಘ ನಿರಂತರವಾಗಿ ಸಂಘದ 8 ಶಾಖೆಗಳನ್ನು ಪ್ರಾರಂಭಿಸಿ, ಕಳೆದ ವರ್ಷ 1.5 ಕೋಟಿ ಲಾಭ ಗಳಿಸಿದೆ. ಸಲಹಾ ಸಮಿತಿ ಮತ್ತು ಸಿಬ್ಬಂದಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ., ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇದರ ಸಂಚಾಲಕ ಎಂ.ಪಿ.ಉಮೇಶ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕಾತ್ಯಾಯಿನಿ ಕಾಂಪ್ಲೆಕ್ಸ್ ಮಾಲಕ ಬಿ.ಪವನ್ ಶೆಣೈ ಉಪಸ್ಥಿತರಿದ್ದರು.
ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸಂಜೀವ ಗೌಡ ಕೆ, ಪ್ರವೀಣ್ ಕುಂಟ್ಯಾನ, ಶ್ರೀಮತಿ ಸುಪ್ರೀತಾ ರವಿಚಂದ್ರ, ರಾಮಕೃಷ್ಣ ಗೌಡ ಕರ್ಮಲ, ಸುದರ್ಶನ ಗೌಡ ಕೆ, ಶ್ರೀಮತಿ ತೇಜಸ್ವಿನಿ ಶೇಖರ ಗೌಡ ಬೆಳ್ಳಾರೆ ಶಾಖೆಯ ಉಸ್ತುವಾರಿ ನಿರ್ದೇಶಕರಾದ ಸತೀಶ್ ಪಾಂಬಾರು ಮತ್ತು ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.