ಸಮಗ್ರ ನ್ಯೂಸ್: ಜನಪ್ರಿಯ ಚಾಟಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಈಗಾಗಲೇ ಹಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಿದೆ. ಅಲ್ಲದೇ ತನ್ನ ನೂತನ ಅಪ್‌ಡೇಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಸಾಗಿದೆ. ಇದೀಗ ವಾಟ್ಸಾಪ್ ಸಂಸ್ಥೆಯು ಮೆಸೆಜ್ ಕಳುಹಿಸುವಿಕೆಯ ಅನುಭವದಲ್ಲಿ ಭಾರೀ ಬದಲಾವಣೆ ತರಲು ಕಾರ್ಯ ನಿರ್ವಹಿಸುತ್ತಿದೆ.
ಈಗ ಅಚ್ಚರಿ ಎಂಬಂತೆ ವಾಟ್ಸಾಪ್ ಹೊಸದಾಗಿ ‘ಚಾಟ್ ಲಾಕ್’ ಫೀಚರ್ ಬಿಡುಗಡೆ ಮಾಡಿದೆ. ಈ ಫೀಚರ್ಸ್ ಸಕ್ರಿಯದಿಂದ ಮೆಸೆಜ್/ ಚಾಟ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಬಳಕೆದಾರರು ಸಂಪೂರ್ಣ ವಾಟ್ಸಾಪ್ ಲಾಕ್ ಮಾಡದೇ, ಕೇವಲ ನಿರ್ದಿಷ್ಟ ಚಾಟ್ ಮಾತ್ರ ಲಾಕ್ ಮಾಡಬಹುದಾಗಿರುತ್ತದೆ.
ವಾಟ್ಸಾಪ್‌ನ ಈ ಹೊಸ ಫೀಚರ್ ಭಾರೀ ವಿಶೇಷ ಎನಿಸಿದರೂ ಸಹ, ಸದ್ಯ ಎಲ್ಲರಿಗೂ ಈ ಫೀಚರ್ ಲಭ್ಯ ಇಲ್ಲ. ಏಕೆಂದರೆ ವಾಟ್ಸಾಪ್‌ನ ಕೆಲವು ಬೀಟಾ ಪರೀಕ್ಷಕರು ಈಗ ಹೊಸ ಲಾಕ್ ಚಾಟ್ ಫೀಚರ್ ಅನ್ನು ಬಳಸಬಹುದು ಎಂದು WaBetaInfo ನ ವರದಿಯು ಬಹಿರಂಗಪಡಿಸುತ್ತದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಸಕ್ರಿಯಗೊಳಿಸಲು ಈ ಕ್ರಮ ಅನುಸರಿಸಿ:
ಹಂತ 1: ನಿಮ್ಮ ವಾಟ್ಸಾಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗಕ್ಕೆ ಹೋಗಿ.
ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್ ಲಾಕ್ ಅನ್ನು ಟ್ಯಾಪ್ ಮಾಡಿ.
ಹಂತ 3: ‘ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ’ ಆಯ್ಕೆಯನ್ನು ಸಕ್ರಿಯಗೊಳಿಸಿ.
ಅಂದಹಾಗೆ ವಾಟ್ಸಾಪ್ ಆಯ್ದ ಬಳಕೆದಾರರಿಗಾಗಿ ಹೊಸ ಚಾಟ್ ಲಾಕ್ ಫೀಚರ್ ಅನ್ನು ಪರಿಚಯಿಸಿದೆ. WaBetaInfo ಶೇರ್ ಮಾಡಿರುವ ವಿವರಗಳ ಪ್ರಕಾರ, ಸಂಸ್ಥೆಯು ಕೆಲವು ಬೀಟಾ ಪರೀಕ್ಷಕರಿಗೆ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಮುಂಬರುವ ಕೆಲವು ವಾರಗಳಲ್ಲಿ ಈ ಫೀಚರ್ ವ್ಯಾಪಕವಾದ ಬಳಕೆದಾರರಿಗೆ ತಲುಪುತ್ತದೆ. ಆದ್ದರಿಂದ, ಈ ಫೀಚರ್ ಮುಂದಿನ ದಿನಗಳಲ್ಲಿ ಸ್ಥಿರ ಆವೃತ್ತಿಯಲ್ಲಿ (ಸಾರ್ವಜನಿಕರಿಗೆ) ಆಗಮಿಸುತ್ತದೆ ಎಂದು ನಿರೀಕ್ಷಿಸಬಹುದು.