Ad Widget .

ಪೊಲೀಸರು ವಾಟ್ಸಪ್‌ ಡಿಪಿಗೆ ಫೋಟೋ ಬದಲು ಕ್ಯೂ ಆರ್ ಕೋಡ್ ಹಾಕಿಕೊಳ್ಳಲು ಅದೇಶ

ಸಮಗ್ರ ನ್ಯೂಸ್: ಪೊಲೀಸ್‌ ಅಧಿಕಾರಿಗಳಿಗೆ ಹೊಸ ರೂಲ್ಸ್‌ ತಂದಿದ್ದು ಇನ್ಮುಂದೆ ವಾಟ್ಸಪ್‌ ಡಿಪಿಗೆ ಅವರ ಫೋಟೋ ಹಾಕಿಕೊಳ್ಳುವಂತಿಲ್ಲ ಆದೇಶ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಗ್ನೇಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಕೆಲ ದಿನಗಳಲ್ಲಿ ಸಾರ್ವಜನಿಕರ ಸಮಸ್ಯೆಗೆ ಪೊಲೀಸರು ತಕ್ಷಣ ಸಂದಿಸುತ್ತಿಲ್ಲ, ಫೋನ್ ರಿಸಿವ್ ಮಾಡಲ್ಲ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಬೆನ್ನಲ್ಲೇ ಸಿಂಗಂ ರೀತಿಯಲ್ಲಿ ವಾಟ್ಸಪ್‌ ಡಿಪಿಗಳಲ್ಲಿ ಪೋಟೋ ಹಾಕಿ ಮಿಂಚುತ್ತಿದ್ದ ಪೊಲೀಸರಿಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾರಿಂದ ಹೊಸ ರೂಲ್ಸ್‌ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Ad Widget . Ad Widget . Ad Widget .

ಇಂದಿನಿಂದ ಪೊಲೀಸ್ ಅಧಿಕಾರಿಗಳು ಸರ್ಕಾರಿ ‌ನಂಬರ್‌ಗಳಿಗೆ ತಮ್ಮ ಪೋಟೋ ಡಿಪಿ ಹಾಕಿಕೊಳ್ಳಬಾರದು ಬದಲಾಗಿ ಬದಲಾಗಿ ಲೋಕಸ್ಪಂದನ ಅನ್ನೋ ಕ್ಯೂ ಆರ್ ಕೋಡ್ ಹಾಕಿಕೊಳ್ಳಬೇಕು ಅದೇಶವನ್ನು ನೀಡಿದ್ದಾರೆ. ಅರೇ ಯಾಕೆ ಅಂತಾ ಯೋಚಿಸ್ತಿದ್ದೀರಾ?ಪೊಲೀಸರು ಪೋನ್ ರಿಸಿವ್ ಮಾಡಿಲ್ಲ ವಾಟ್ಸಪ್‌ ಡಿಪಿಯಲ್ಲಿರುವ ಲೋಕಸ್ಪಂದನ ಕ್ಯೂ ಆರ್ ಕೊಡ್‌ಗೆ ಸ್ಕ್ಯಾನ್ ಮಾಡಿ ದೂರು ನೀಡಬಹುದು ಸಾರ್ವಜನಿಕರಿಗೆ ಅದ್ಬುತ ಅವಕಾಶವನ್ನು ಕಲ್ಪಿಸಿದ್ದಾರೆ.

ಏನಿದು ಲೋಕಸ್ಪಂದನ ಕ್ಯೂ ಆರ್ ಕೊಡ್‌ ?
ಪೊಲೀಸರು ಸಾರ್ವಜನಿಕರ ಫೋನ್ ಕರೆ ಸ್ವೀಕರಿಸದೇ ಇದ್ದರೆ ಸಾರ್ವಜನಿಕರು ಆ ಅಧಿಕಾರಿಯ ವಾಟ್ಸ್ಯಾಪ್ ಡಿಪಿಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಬಳಿಕ ಮೆಸೇಜ್ ವ್ಯವಸ್ಥೆ ಲಭ್ಯವಾಗಲಿದೆ. ನೀವು ಅಧಿಕಾರಿ ಪೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಮೆಸೇಜ್ ರವಾನಿಸಿದರೆ, ನೇರವಾಗಿ ಆ ಮೆಸೆಜ್ ಡಿಸಿಪಿ ಸಿ.ಕೆ ಬಾಬಾರ ಮೊಬೈಲ್ ಗೆ ತಲುಪಲಿದೆ’. ಇದರಿಂದಾಗಿ ಯಾವ ಅಧಿಕಾರಿ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಡಿಸಿಪಿ ಸಿ.ಕೆ ಬಾಬಾ ಹೊಸ ರೂಲ್ಸ್‌ ಜಾರಿ ಮಾಡಲು ಮುಂದಾಗಿದ್ದಾರೆ .

Leave a Comment

Your email address will not be published. Required fields are marked *