Ad Widget .

“ಅಂಗನವಾಡಿಯಿಂದಲೇ ಮಗುವಿಗೆ ಸಂಸ್ಕಾರ ಕಲಿಸಬೇಕು” -ಶಾಸಕ ವೈ ಭರತ್ ಶೆಟ್ಟಿ |ಕಾಟಿಪಳ್ಳ ಅಂಗನವಾಡಿ ಕೇಂದ್ರ ಲೋಕಾರ್ಪಣೆ

ಸಮಗ್ರ ನ್ಯೂಸ್: ಕಾಟಿಪಳ್ಳ ಮೂರನೇ ಬ್ಲಾಕ್ ನಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರವನ್ನು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ವೇಳೆ ಮಾತಾಡಿದ ಅವರು, “16.50 ಲಕ್ಷ ರೂ. ವೆಚ್ಚದಲ್ಲಿ ಈ ಭಾಗದ ಜನರ ಬಲುದೊಡ್ಡ ಬೇಡಿಕೆಯಾದ ಅಂಗನವಾಡಿ ಕೇಂದ್ರವನ್ನು ಸರಕಾರ ನಿರ್ಮಿಸಿದೆ. ಹೊಸ ಕಟ್ಟಡ ನಿರ್ಮಾಣಕ್ಕೂ ಮುನ್ನ ಸುದೀರ್ಘ ಕಾಲ ಕಾಟಿಪಳ್ಳ ಮೂರನೇ ಬ್ಲಾಕ್ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರು ಮತ್ತು ಸರ್ವಸದಸ್ಯರು ತಮ್ಮ ಸಂಸ್ಥೆಯ ಕಟ್ಟಡದಲ್ಲಿ ಅಂಗನವಾಡಿ ಮಾಡಿ ಮಕ್ಕಳ ಕಲಿಕೆಗೆ ನೇರವಾಗಿದ್ದಾರೆ.

Ad Widget . Ad Widget . Ad Widget .

ಅವರಿಗೆ ಮೊದಲು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಇಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಅವರು ಶ್ರಮಿಸಿದ್ದಾರೆ. ಮಗುವಿಗೆ ಶಾಲೆಗೆ ಹೋಗುವ ಮುನ್ನ ಆ ವಾತಾವರಣವನ್ನು ಕಲ್ಪಿಸಿಕೊಡಲು ಅಂಗನವಾಡಿಗಳು ಶ್ರಮಿಸುತ್ತಿವೆ. ಇಲ್ಲಿಂದಲೇ ಮಕ್ಕಳಿಗೆ ನಿಜವಾದ ಸಂಸ್ಕಾರ ಆರಂಭವಾಗುತ್ತದೆ. ಇದಕ್ಕಾಗಿ ಸ್ಥಳೀಯರ ಪ್ರಯತ್ನ ಶ್ಲಾಘನೀಯವಾದುದು” ಎಂದರು.
ಬಳಿಕ ಮಾತಾಡಿದ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಅವರು, “ನೂತನ ಅಂಗನವಾಡಿ ಕಟ್ಟಡವನ್ನು ಶಾಸಕರು ಲೋಕಾರ್ಪಣೆ ಮಾಡಿದ್ದಾರೆ. ಈ ಭಾಗದ ಮಕ್ಕಳಿಗೆ ಅಂಗನವಾಡಿ ನಿರ್ಮಿಸಬೇಕು ಎಂದು ಕನಸು ಕಂಡಿದ್ದು ಪ್ರಾರಂಭದಲ್ಲಿ ಲೋಕಯ್ಯ ಮೂಲ್ಯರ ಮನೆಯಲ್ಲಿ ಇದನ್ನು ಪ್ರಾರಂಭಿಸಿದೆವು.

ನಂತರ ಅದು ಫ್ರೆಂಡ್ಸ್ ಸರ್ಕಲ್ ಕಟ್ಟಡಕ್ಕೆ ಸ್ಥಳಾಂತರಗೊಂಡು 16 ವರ್ಷಗಳ ಕಾಲ ಅಲ್ಲಿ ನಡೆಯುತ್ತಿದ್ದು ಈಗ ಇಲ್ಲಿನ ಸುಸಜ್ಜಿತ ಕಟ್ಟಡದಲ್ಲಿ ಪ್ರಾರಂಭಗೊಂಡಿದೆ. ಸಮಾಜದಲ್ಲಿ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ಸತ್ಪ್ರಜೆಯನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ” ಎಂದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಹರೀಶ್ ಕೆ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪ್ತೆಂಡ್ಸ್ ಸರ್ಕಲ್ ‌ಕಾಟಿಪಳ್ಳದ ಅಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ದೇವಿಕಿರಣ್, ಅಂಗನವಾಡಿ ಮೇಲ್ವಿಚಾರಕಿ ಭವ್ಯ, ಅಶಾ ಕಾರ್ಯಕರ್ತೆ ಸೇವಂತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *