ಸಮಗ್ರ ನ್ಯೂಸ್: ಗೋ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಟ್ವಿಟರ್‌ನಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಸರ್ಕಾರವೇ ನೀಡಿದ ಅಂಕಿ ಅಂಶದ ಪ್ರಕಾರ ಗೋರಕ್ಷಕರು ಎಂದು ಕೊಳ್ಳುವ ಬಿಜೆಪಿ ಆಡಳಿತದಲ್ಲಿ 15 ಲಕ್ಷ ಗೋವುಗಳು ಎರಡೇ ವರ್ಷದಲ್ಲಿ ಮಾಯವಾಗಿದ್ದು ಹೇಗೆ? ಎಂದು ಪ್ರಶ್ನಿಸಿದೆ.
ಗೋರಕ್ಷಕ ಸರ್ಕಾರದಲ್ಲಿ ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ? ಇದೇನಾ ಬಿಜೆಪಿ ಗೋರಕ್ಷಣೆ. ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಸಮರ್ಪಕ ಲಸಿಕೆ ನೀಡದೆ ಸರ್ಕಾರವೇ ಪರೋಕ್ಷ ಗೋಹತ್ಯೆ ಮಾಡಿತೇ? ಎಂದು ವಾಗ್ಧಾಳಿ ನಡೆಸಿದೆ.
ಯಾವುದೇ ಜನಪರ ಯೋಜನೆ ರೂಪಿಸದ ಬಿಜೆಪಿ ಫಾರ್ ಕರ್ನಾಟಕ ಸರ್ಕಾರ ಜಾರಿಯಲ್ಲಿದ್ದ ಜನೋಪಯೋಗಿ ಯೋಜನೆಗಳನ್ನೂ ಹಳ್ಳ ಹಿಡಿಸಿದೆ. ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಹೊಂದಿಕೊಳ್ಳುವಂತೆ ರಾಜ್ಯದ ಯುವಜನತೆಯನ್ನು ತಯಾರುಗೊಳಿಸಬೇಕಾದ ಸರ್ಕಾರ ಲ್ಯಾಪ್‌ಟಾಪ್ ನೀಡಲು ಸಹ ಮೀನಾಮೇಷ ಎಣಿಸುತ್ತಿದೆ. ತ್ರಿಶೂಲ ಕೊಡುವವರಿಗೆ ಲ್ಯಾಪ್‌ಟಾಪ್ ಮಹತ್ವ ತಿಳಿಯುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.