ಸಮಗ್ರ ನ್ಯೂಸ್: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ 14 ನೇ ವಿಧಾನಸಭಾ ಚಳಿಗಾಲದ ಅಧಿವೇಶನ ಆರಂಭವಾಗಿದೆ.
ಮಹಾದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಬ್ಬು ಬೆಳೆಗಾರರ ಬಾಕಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ, ವಿವಿಧ ಸಮುದಾಯಗಳ ಮೀಸಲಾತಿ ವಿಚಾರ, ಪಿಎಸ್ಸೈ ನೇಮಕಾತಿಯಲ್ಲಿನ ಅಕ್ರಮ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ, ಸರಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪ ಸೇರಿದಂತೆ ಹಲವಾರು ವಿಷಯಗಳು ಈ ಬಾರಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾದ ಬಳಿಕ ಇಲ್ಲಿ 10 ಅಧಿವೇಶನಗಳು ನಡೆದಿದ್ದು, 90 ದಿನಗಳ ಕಾಲ ಕಲಾಪ ನಡೆದಿದೆ. ಈ ಬಾರಿಯ ಅಧಿವೇಶನವು 10 ದಿನಗಳನ್ನು ಪೂರೈಸಿದರೆ 100 ದಿನಗಳ ಕಲಾಪ ನಡೆದಂತಾಗುತ್ತದೆ. ನೇರಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…