ಸಮಗ್ರ ನ್ಯೂಸ್: ಉದ್ಯಮಿ ಸೋಗಿನಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯಿಸಿಕೊಂಡು ಮದುವೆಯಾಗಿ ಹಣ ಚಿನ್ನಾಭರಣ ಪಡೆದು ಎಸ್ಕೇಪ್ ಆಗುವ ಯುವಕನ ವಿರುದ್ದ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೋರ್ಸ್ ಆದವರು ಮತ್ತು 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಖದೀಮ ಹಲವಾರು ಮಹಿಳೆಯರಿಗೆ ವಂಚಿಸಿ ಎಸ್ಕೇಪ್ ಆಗಿದ್ದಾನೆ. ಕೇರಳ ಮೂಲದ ನಿವಾಸಿ ಸುನೀಶ್ ಪಿಳ್ಳೆ(33)ವಿರುದ್ದ ಮೈಸೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೋಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮೈಸೂರಿನ ವಿಜಯ ನಗರ ನಿವಾಸಿ ಪ್ರೀತಿ ಸಿಂಗ್ ಎಂಬುವರು ಸುನೀಶ್ ಪಿಳ್ಳೆ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಐದು ವರ್ಷದ ಹಿಂದೆ ವಿವಾಹವಾ ಜೋಡಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ವಿವಾಹದ ಬಳಿಕ ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದ ಸುನೀಶ್, ಮನೆಯಲ್ಲಿದ್ದ ಚಿನ್ನಾಭರಣವಗಳನ್ನು ಅಡವಿಟ್ಟು ಲಕ್ಷಾಂತರ ರೂ. ಪಡೆದಿದ್ದ. ಆಗಾಗ್ಗೆ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ. ಈ ಬಗ್ಗೆ ಪ್ರೀತಿ ಸಿಂಗ್ ಅವರು, ಸುನೀಶ್ ಪಿಳ್ಳೆಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಕೊನೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ತಪ್ಪಿಸಿಕೊಂಡಿದ್ದಾರೆ.
ಈತ ಸೇರಿದಂತೆ ಕುಟುಂಬದ ನಾಲ್ವರ ವಿರುದ್ದ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಈತ ಮ್ಯಾಟ್ರಿಮೋನಿಯಲ್ಲಿ ಶ್ರೀಮಂತ ಉದ್ಯಮಿ ಎಂದು ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಶ್ರೀಮಂತ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗುತ್ತಿದ್ದ. ಬಳಿಕ ಅವರೊಂದಿಗೆ ಕೆಲ ತಿಂಗಳ ಕಾಲ ಸಂಸಾರ ನಡೆಸಿ, ಉದ್ಯಮದಲ್ಲಿ ನಷ್ಟವಾಗಿದೆ ಎಂದು ಹಣ ಪಡೆದು ವಂಚಿಸಿ ಪರಾರಿಯಾಗುತ್ತಿದ್ದ. ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕೈದು ಪ್ರಕರಗಳು ದಾಖಲಾಗಿದೆ.
ಸುನೀಶ್ ಪಿಳ್ಳೈ ವಿರುದ್ದ ಕೇರಳದಲ್ಲಿ ಅಪಹರಣ ಪ್ರಕರಣ ಕೂಡ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಈತನ ಪತ್ತೆಗೆ ಮೈಸೂರು ಸೇರಿದಂತೆ ಎಲ್ಲೆಡೆ ಶೋಧ ಕಾರ್ಯ ನಡೆಯುತ್ತಿದೆ.
ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವೈದ್ಯರು, ಸಾಫ್ಟ್‌ವೇರ್ ಎಂಜಿನಿಯರ್, ಶ್ರೀಮಂತ ವಿಚ್ಛೇದಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ವಿವಾಹವಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾರೆ. 12 ಕ್ಕೂ ಹೆಚ್ಚು ಮಂದಿ ಮಹಿಳೆಯರನ್ನು ಈತ ವಂಚಿಸಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.