ಸಮಗ್ರ ನ್ಯೂಸ್: ಉಚಿತ ಡಾಟಾ ಮತ್ತು ಅಂಡ್ರಾಯ್ಡ್ ಮೊಬೈಲ್ ಗಳ ಯಥೇಚ್ಚ ಬಳಕೆಯಿಂದ ಇಂದು ಮೊಬೈಲ್ ನಲ್ಲಿ ಬ್ಲೂ ಪಿಲಂ ನೋಡುವವರ ಸಂಖ್ಯೆ ಹೆಚ್ಚೇ ಇದೆ. ಇದರಿಂದಾಗಿ ಭಾರತೀಯ ಬ್ಯಾಂಕಿಂಗ್ ಗ್ರಾಹಕರು SOVA ಆಂಡ್ರಾಯ್ಡ್ ಟ್ರೋಜನ್ ಅನ್ನು ಬಳಸಿಕೊಂಡು ಹೊಸ ರೀತಿಯ ಮೊಬೈಲ್ ಬ್ಯಾಂಕಿಂಗ್ ಮಾಲ್ವೇರ್ ಗಳಿಗೆ ಗುರಿಯಾಗುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
SOVA ಈ ಹಿಂದೆ USA ರಷ್ಯಾ ಮತ್ತು ಸ್ಪೇನ್ನಂತಹ ದೇಶಗಳ ಮೇಲೆ ಕೇಂದ್ರೀಕರಿಸಿದೆ. ಈ ವೈರಸ್ ದೇಶದ ಹಲವು ಜನರ ಸ್ಮಾರ್ಟ್ಫೋನ್ಗಳಿಗೆ ಈಗಾಗಲೇ ಹೊಕ್ಕಿರಬಹುದು. ಅದರಲ್ಲೂ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನು ನೋಡುವವರ ಮೊಬೈಲ್ನಲ್ಲಿ ಖಂಡಿತವಾಗಿಯೂ ಈ ವೈರಸ್ ಸೇರಿರುವ ಸಾಧ್ಯತೆ ಹೆಚ್ಚು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಜುಲೈ 2022 ರಿಂದ ಸೋವಾ ವೈರಸ್ ಭಾರತವನ್ನು ತನ್ನ ಗುರಿಯಾಗಿಸಿದೆ. ಈ ಮಾಲ್ವೇರ್ನ ಇತ್ತೀಚಿನ ಆವೃತ್ತಿಯು ನಕಲಿ Android ಅಪ್ಲಿಕೇಶನ್ಗಳಲ್ಲಿ ಅಡಗಿಕೊಳ್ಳುತ್ತದೆ. ಅದು Chrome, Amazon, NFT ಪ್ಲಾಟ್ಫಾರ್ಮ್ನಂತಹ ಕೆಲವು ಪ್ರಸಿದ್ಧ ಕಾನೂನುಬದ್ಧ ಅಪ್ಲಿಕೇಶನ್ಗಳ ಲೋಗೋದೊಂದಿಗೆ ಅವುಗಳನ್ನು ಸ್ಥಾಪಿಸಲು ಬಳಕೆದಾರರನ್ನು ಮೋಸಗೊಳಿಸಲು ತೋರಿಸುತ್ತದೆ.
ಅಶ್ಲೀಲ ವೆಬ್ಸೈಟ್ಗಳಲ್ಲಿ ಯಾವುದೇ ಒಂದು ಲಿಂಕ್ ಮಾಡಿದರೂ ಈ ಸೋವಾ (SOVA) ವೈರಸ್ ಮೊಬೈಲ್ ಒಳಗೆ ನುಸುಳಲಿದೆ. ಹೀಗೆ ಮೊಬೈಲ್ಗೆ ಸೇರಿಕೊಳ್ಳುವ ವೈರಸ್ ಬಗ್ಗೆ ಮೊಬೈಲ್ ಬಳಕೆದಾರರಿಗೆ ಯಾವುದೇ ಮಾಹಿತಿ ತಿಳಿಯುವುದಿಲ್ಲ. ಅಷ್ಟೇ ಅಲ್ಲದೆ ಈ ಬಗ್ಗೆ ಸ್ವಲ್ಪ ಕೂಡ ಅನುಮಾನ ಬರುವುದಿಲ್ಲ. ಇನ್ನು ಈ ವೈರಸ್ ಅನ್ನು ಒಮ್ಮೆ ಮೊಬೈಲ್ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲದಂತೆ ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ, ಇದು ಮೊಬೈಲ್ನಲ್ಲಿ ಇರುವುದು ತಿಳಿಯದಂತೆ ಕೆಲಸ ಮಾಡುತ್ತಾ, ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುತ್ತದೆ.
ಇದನ್ನು ತಡೆಯೋದು ಹೇಗೆ?
ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ನೀವು ಡೌನ್ಲೋಡ್ ಮಾಡಿರದ ಅಪ್ಲಿಕೇಶನ್ ಗಳು ಇನ್ಸ್ಟಾಲ್ ಆಗಿದ್ದರೆ ವೈರಸ್ ಅಟ್ಯಾಕ್ ಆಗಿರಬಹುದು.
➥ನಿಮಗೆ ಹೆಚ್ಚು ಸಮಯ ನಿಮ್ಮ ಸ್ಮಾರ್ಟ್ ಫೋನ್ ಬಳಸಿದರೂ ಫೋನ್ ಬಿಸಿಯಾಗಿದ್ದರೆ ವೈರಸ್ ತಗುಲಿದೆ ಎಂದು ಹೇಳಬಹುದು.
➥ನಿಮ್ಮ ಡೇಟಾ ತುಂಬಾ ವೇಗವಾಗಿ ಖಾಲಿಯಾಗುತ್ತಿದ್ದರೆ, ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಕೂಡ ಬೇಗನೆ ಖಾಲಿಯಾಗುತ್ತಿದ್ದರೆ ವೈರಸ್ ಪ್ರವೇಶಿಸಿದೆ ಎಂದರ್ಥ.
➥ಒಂದು ವೇಳೆ ವೈರಸ್ ನಿಮ್ಮ ಸ್ಮಾರ್ಟ್ ಫೋನ್ ಗೆ ಪ್ರವೇಶಿಸಿದ್ದರೆ ಅನಗತ್ಯ ಜಾಹಿರಾತುಗಳು ನಿಮ್ಮ ಫೋನ್ ನಲ್ಲಿ ಗೋಚರಿಸುತ್ತವೆ. ಆದ್ದರಿಂದ ಅನಗತ್ಯ ಲಿಂಕ್ ಅಥವಾ ವೆಬ್ ಸೈಟ್ ತೆರೆಯಬೇಡಿ.
ಇಷ್ಟೇ ಅಲ್ಲದೇ ಈ ವೈರಸ್ ಮೊಬೈಲ್ ಕಾರ್ಯಗಳನ್ನು ಸ್ವೈಪ್ ಮಾಡಿ ನೋಡಬಹುದು. ವೆಬ್ ಕ್ಯಾಮ್ ಮೂಲಕ ವಿಡಿಯೋ ಮಾಡಿಕೊಳ್ಳಬಹುದು. ನಿಮ್ಮ ಸಾಧನಗಳನ್ನು ಲಾಕ್ ಮಾಡಬಹುದು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎನ್ ಕ್ರಿಪ್ಟ್ ಮಾಡಿಕೊಂಡರೆ ಹಣಕ್ಕೆ ಬೇಡಿಕೆ ಇಡಬಹುದು. ಸೋವಾ (SOVA) ಎಂದು ಕರೆಯುವ ಈ ವೈರಸ್ ಅನ್ನು ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಷ್ಯನ್ ಭಾಷೆಯಲ್ಲಿ ಸೋವಾ ಅಂದ್ರೆ ಗೂಬೆ ಅನ್ನೋ ಅರ್ಥವಿದೆ. ಹಾಗಾಗಿ ನೀವು ಗೂಬೆಗಳಾಗಬೇಡಿ. ಬುದ್ದಿವಂತಿಕೆ ಪ್ರದರ್ಶಿಸಿ…