ಬೆಂಗಳೂರು.ಮೇ 25. ನಾಳೆ.(ಮೇ.26) ಈ ವರ್ಷದಲ್ಲಿ ಗೋಚರವಾಗುವ ಮೊದಲ ಸೂಪರ್ ಚಂದ್ರ ಹಾಗೂ ಕೆಂಪು ಚಂದ್ರನನ್ನು ನೋಡಲು ಇಡೀ ಜಗತ್ತೇ ಸಜ್ಜಾಗಿದೆ. ಇದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಆಸ್ಟ್ರೇಲಿಯ, ಓಷಿಯಾನಿಯಾದ ಪ್ರದೇಶಗಳಲ್ಲಿ, ಅಲಾಸ್ಕಾ ಮತ್ತು ಕೆನಡಾದ ಹೆಚ್ಚಿನ ಭಾಗಗಳಲ್ಲಿ, ಯುಎಸ್‍ಎಯ ಬಹುಪಾಲು ಸ್ಥಳಗಳು, ಹವಾಯಿ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ ಬಹುಪಾಲು ಪ್ರದೇಶಗಳಲ್ಲಿ ಗೋಚರಿಸಲಿದೆ. ಈ ಅರೆನೆರಳಿನ ಗ್ರಹಣವು ಜಾಗತಿಕ ಕಾಲಮಾನದ ಪ್ರಕಾರ, 08:47:39ರಲ್ಲಿ (ಯುಟಿಸಿ) ಪ್ರಾರಂಭವಾಗಿ, ಮೇ 26 ರಂದು 13:49:44 ಕ್ಕೆ (ಯುಟಿಸಿ) ಕೊನೆಗೊಳ್ಳುತ್ತದೆ. ಚಂದ್ರನು ಭೂಮಿಯ ಮೂಲಕ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಚಂದ್ರನ ವ್ಯಾಸದ ಸುಮಾರು 70% ಭೂಮಿಯ ಮುಳುಗಿದಾಗ ಮಾತ್ರ ಬರಿಗಣ್ಣಿಗೆ ಗೋಚರಿಸುತ್ತದೆ.
ಹುಣ್ಣಿಮೆ ದಿನದಂದು ಸಂಭವಿಸುವ ಈ ಸಂಪೂರ್ಣ ಗ್ರಹಣವನ್ನು ಆಸ್ಟ್ರೇಲಿಯನ್ನರು, ಪಶ್ಚಿಮ ಯುಎಸ್, ಪಶ್ಚಿಮ ದಕ್ಷಿಣ ಅಮೆರಿಕಾ ಅಥವಾ ಆಗ್ನೇಯ ಏಷ್ಯಾದಲ್ಲಿ ನೋಡಬಹುದು ಮತ್ತು ಈ ಒಟ್ಟು ಚಂದ್ರಗ್ರಹಣದ ಸಮಯದಲ್ಲಿ ಸುಮಾರು 14 ನಿಮಿಷಗಳ ಕಾಲ ಕೆಂಪುಛಾಯೆ ಕಾಣಸಿಗುತ್ತದೆ.
ಚಂದ್ರ ಗ್ರಹಣ ಯಾವ ಸಮಯದಲ್ಲಿ ನಡೆಯುತ್ತದೆ?
ಗ್ರಹಣದ ಒಟ್ಟು ಅವಧಿ 5 ಗಂಟೆ, 2 ನಿಮಿಷಗಳು. ಪೂರ್ಣ ಗ್ರಹಣದ ಅವಧಿ 14 ನಿಮಿಷಗಳು. ಒಟ್ಟು ಚಂದ್ರ ಗ್ರಹಣ ಭಾರತದಲ್ಲಿ ಮಧ್ಯಾಹ್ನ 2:17ಕ್ಕೆ ಪ್ರಾರಂಭವಾಗಿ ಸಂಜೆ 7:19ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭೂಮಿಯು ಶೇಕಡಾ 101.6 ರಷ್ಟು ಚಂದ್ರನನ್ನು ಆವರಿಸುತ್ತದೆ.
ಭಾರತದಲ್ಲಿ ಗೋಚರಿಸುತ್ತದೆಯೇ?
ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹೌದು, ಭಾರತದ ಜನರು ರಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಪೂರ್ವ ಭಾರತದಲ್ಲಿ ವಾಸಿಸುವ ಆಕಾಶ ವೀಕ್ಷಕರು ಚಂದ್ರಗ್ರಹಣದ ಕೊನೆಯ ಭಾಗವನ್ನು, ಪೂರ್ವ ದಿಗಂತಕ್ಕೆ ಬಹಳ ಹತ್ತಿರದಲ್ಲಿ ಚಂದ್ರೋದಯಕ್ಕೆ ಸ್ವಲ್ಪ ಮುಂಚೆ ನೋಡಬಹುದು. ಚಂದ್ರನ ಭಾಗಶಃ ಗ್ರಹಣ ಮಧ್ಯಾಹ್ನ 3: 15 ರ ಸುಮಾರಿಗೆ ಪ್ರಾರಂಭವಾಗಿ ಸಂಜೆ 6: 22 ಕ್ಕೆ ಕೋಲ್ಕತ್ತಾದಲ್ಲಿ ಕೊನೆಗೊಳ್ಳುತ್ತದೆ.
ಏನಿದು ಸೂಪರ್ ಮೂನ್?
ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತಿ ಬರುವಾಗ ಕೆಲವೊಮ್ಮೆ ಭೂಮಿಗೆ ಬಹಳ ಹತ್ತಿರ ಸುತ್ತಿ ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುವುದಲ್ಲದೇ ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ. ಈ ವೇಳೆ ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ 14 ಪಾಲು ದೊಡ್ಡದಾಗಿರುತ್ತದೆ ಹಾಗೂ ಬೆಳಕು ಕೂಡ 30 ಪಾಲು ಹೆಚ್ಚು ಇರುತ್ತದೆ. ಇಂತಹ ಒಂದು ಘಟನೆ 2016 ನವೆಂಬರ್ 14 ಸೋಮವಾರ ರಾತ್ರಿ ಸಂಭವಿಸಿತ್ತು. ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ವರ್ಷಕ್ಕೆ ಒಂದೆರಡು ಬಾರಿ ಸೂಪರ್ ಮೂನ್ ಬರುತ್ತದೆ. ಆದರೆ 70 ವರ್ಷದ ನಂತರ ಬಂದಿರುವ ನವೆಂಬರ್ 14ರ ಸೂಪರ್ ಮೂನ್ ತುಂಬಾ ವಿಶೇಷವಾಗಿತ್ತು.