ಬೆಂಗಳೂರು -ಮೇ.25: ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ಪುನರ್ ರಚನೆಯಾಗಲಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್ ಕೇರ್ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಸದ್ಯ ಕೋವಿಡ್ ಮೂರನೇ ಅಲೆಯ ಟಾಸ್ಕ್‌ಫೋರ್ಸ್ ಕಮಿಟಿ ಅಧ್ಯಕ್ಷರಾಗಿರುವ ಅವರನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಂಪುಟ ದರ್ಜೆಯ ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರದ ಹಾಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿರುವ ಡಾ.ಹರ್ಷವರ್ಧನ್ ಕೋವಿಡ್ ಎರಡನೇ ಆಲೆಯ ಸಂದರ್ಭದಲ್ಲಿ ಸರಿಯಾಗಿ ಖಾತೆಯನ್ನು ನಿರ್ವಹಿಸಲಿಲ್ಲ ಎಂಬ ಆರೋಪವಿದೆ. ಹೀಗಾಗಿ ಡಾ. ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಆರೋಗ್ಯ ಖಾತೆ ನೀಡಿ, ಹರ್ಷವರ್ಧನ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗೆ ಸೀಮಿತಗೊಳಿಸುವ ಸಂಭವವಿದೆ.
ಶುದ್ದಹಸ್ತ ಮತ್ತು ಭ್ರಷ್ಟಾಚಾರರಹಿತರಾಗಿರುವ ದೇವಿಪ್ರಸಾದ್ ಶೆಟ್ಟಿ, ಕೋವಿಡ್ ಎರಡನೇ ಆಲೆಯ ವೇಳೆ ತಜ್ಞರು ನೀಡಿದ ಸಲಹೆಗಳನ್ನು ಕೇಂದ್ರ ಸರ್ಕಾರದ ಜೊತೆ ಸರಿಯಾಗಿ ಹಂಚಿಕೊಳ್ಳದೆ ಉದಾಸೀನ ತೋರಿದರು ಎಂಬ ಸಣ್ಣ ಆಪಾದನೆ ಅವರ ಮೇಲಿದೆ. ಆದರೂ ಒಟ್ಟಾರೆ ಶೆಟ್ಟಿ ಉತ್ತಮ ಕಾರ್ಯ ನಿರ್ವಹಿಸಿಿದ್ದಾರೆ
ಮೂರನೇ ಆಲೆ ಬರುವುದನ್ನು ತಡೆಗಟ್ಟುವ ಕಾರಣಕ್ಕಾಗಿ ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಕೇಂದ್ರದಲ್ಲಿ ಮಹತ್ವದ ಹುದ್ದೆ ಲಭಿಸಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಒಂದು ವೇಳೆ ಅವರು ಸಂಪುಟಕ್ಕೆ ಸೇರ್ಪಡೆಯಾದರೆ, ಬಿಹಾರ ಇಲ್ಲವೇ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.